‘ಮುಖ್ಯಮಂತ್ರಿ ಮಾಡುವುದಾಗಿ ಹೇಳಿ ?2500 ಕೋಟಿಗೆ ಬೇಡಿಕೆ ಇಟ್ಟಿದ್ದರು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಡಿರುವ ಆರೋಪ ನಿರ್ಲಕ್ಷಿಸುವಂತಹದ್ದಲ್ಲ.
ಮುಖ್ಯಮಂತ್ರಿ ಮತ್ತು ಸಚಿವರಾಗಲು ಹಣ ಕೊಟ್ಟವರು ತಮಗೆ ಸಿಕ್ಕ ಅವಧಿಯಲ್ಲೇ ದುಡ್ಡು ವಾಪಸ್ ಪಡೆಯಲು ಶತಪ್ರಯತ್ನ ಮಾಡುವುದಂತೂ ಖಚಿತ. ಆಗ ಸಹಜ ವಾಗಿಯೇ ಕಮಿಷನ್ ದಂಧೆ ಮತ್ತು ಅಕ್ರಮ ವ್ಯವಹಾರಗಳು ಶುರುವಾಗುತ್ತವೆ. ಇದರ ದುಷ್ಪರಿಣಾಮ ನಾಡಿನ ಜನತೆಯ ಮೇಲೆಯೇ ಆಗುತ್ತದೆ.
ಹೀಗಾಗಿ ಇದೊಂದು ಗಂಭೀರ ಸ್ವರೂಪದ ಆರೋಪವಾಗಿದ್ದು, ಸೂಕ್ತ ತನಿಖೆ ನಡೆಸಿ ದರೆ ಮಾತ್ರ ಇದರ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲು ಸಾಧ್ಯ. ಈ ಆರೋಪವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ದಂತೆ ಇಡೀ ಸಂಪುಟ ದತ್ತಲೇ ಬೊಟ್ಟು ಮಾಡು ವಂತಿರುವುದರಿಂದ, ತಾವು ಸತ್ಯವಂತರೇ ಆಗಿದ್ದರೆ ಸರಕಾರವೇ ತನಿಖೆಗೆ ವಹಿಸುವ ಮೂಲಕ ತಮ್ಮ ಮೇಲಿನ ಕಳಂಕವನ್ನು ತೆಗೆದು ಹಾಕಲು ಮನಸ್ಸು ಮಾಡಬೇಕಿದೆ.
ಯತ್ನಾಳ್ ಹೇಳಿಕೆಯನ್ನು ನಿರ್ಲಕ್ಷಿಸಿದರೆ ಇಡೀ ಸಂಪುಟವೇ ಪೇಮೆಂಟ್ ಸೀಟು ಎಂದು ಒಪ್ಪಿಕೊಂಡಂತಾಗುತ್ತದೆ. ಅಥವಾ ತನಿಖಾ ಸಂಸ್ಥೆಗಳೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಯತ್ನಾಳ್ ಅವರನ್ನು ವಿಚಾರಣೆಗೊಳಪಡಿಸಿದರೆ ಸತ್ಯ ಹೊರ ಬರುತ್ತದೆ.
ಸರಕಾರ ರಚನೆ ವೇಳೆ ಬಿಜೆಪಿಗೆ ಪಕ್ಷಾಂತರ ಮಾಡಿದ ಶಾಸಕರು ಕೂಡ ದುಡ್ಡು ಪಡೆದು ಹೋಗಿದ್ದಾರೆ ಎಂಬ ಆರೋಪವಿದೆ. ಈ ಕುರಿತೂ ಸಮಗ್ರ ತನಿಖೆಯಾದರೆ ಯಾರಿಗೆ ಮತ್ತು ಎಷ್ಟು ದುಡ್ಡು ಸಂದಾಯವಾಗಿದೆ ಎಂಬ ಬಗ್ಗೆಯೂ ಈ ನಾಡಿನ ಜನತೆಗೆ ತಿಳಿಯಲಿದೆ.
ಯತ್ನಾಳ್ ಅವರು ಕೂಡ ನಿಜವಾಗಿಯೂ ಭ್ರಷ್ಟಾಚಾರವನ್ನು ವಿರೋಧ ಮಾಡುವವರೇ ಆಗಿದ್ದರೆ, ಹಾದಿ ಬೀದಿಯಲ್ಲಿ ಇಂತಹ ಹೇಳಿಕೆ ಗಳನ್ನು ಕೊಡುವ ಬದಲು, ತಾವೇ ತನಿಖಾ ಸಂಸ್ಥೆಗಳ ಕಚೇರಿಗಳಿಗೆ ತೆರಳಿ ದೂರು ದಾಖಲಿಸಿ, ಅಧಿಕಾರಿಗಳಿಗೆ ಬೇಕಾದ ಸೂಕ್ತ ದಾಖಲೆ ಗಳನ್ನು (ತಮ್ಮ ಬಳಿ ಇದ್ದರೆ) ಒದಗಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಸಮರ ಸಾರಬೇಕು. ಇಲ್ಲವಾದಲ್ಲಿ ಇದೊಂದು ರಾಜಕೀಯ ಲಾಭಕ್ಕಾಗಿ ನೀಡಿದ ಹೇಳಿಕೆ ಎಂದು ರಾಜ್ಯದ ಜನರು ಅವರನ್ನು ಭಾವಿಸುವಂತಾಗುತ್ತದೆ.