ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಝಂ ಖಾನ್‌ಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನೀಡಿದೆ.
ಉತ್ತರ ಪ್ರದೇಶದ ರಾಂಪುರದ ಕೊತ್ವಾಲಿ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಎಸ್‌ಪಿ ನಾಯಕನಿಗೆ ಜಾಮೀನು ನೀಡಲಾಗಿದೆ. ಅಝಂ ಖಾನ್ ಅವರು ಎರಡು ವಾರಗಳ ಅವಧಿಯಲ್ಲಿ ಸಂಬಂಧಪಟ್ಟ ನ್ಯಾಯಾ ಲಯಕ್ಕೆ ಸಾಮಾನ್ಯ ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಕೋರ್ಟ್ ಹೇಳಿದೆ.
ಸಕ್ಷಮ ನ್ಯಾಯಾಲಯವು ಸಾಮಾನ್ಯ ಜಾಮೀನಿನ ಬಗ್ಗೆ ನಿರ್ಧರಿಸುವವರೆಗೆ ಮಧ್ಯಂತರ ಜಾಮೀನು ಮುಂದು ವರಿಯುತ್ತದೆ ಎಂದು ಕೋರ್ಟ್ ಹೇಳಿದೆ.
ಸಮಾಜವಾದಿ ಪಕ್ಷದ ನಾಯಕನಿಗೆ ಜಾಮೀನು ನಿರಾಕರಿಸುವಂತೆ ಉತ್ತರ ಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ ಎರಡು ದಿನಗಳ ನಂತರ ಅಝಂ ಖಾನ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಸರಕಾರವು ಮಂಗಳವಾರ ಅಝಂ ಖಾನ್ ಅವರು “ಭೂಗಳ್ಳ” ಹಾಗೂ ”ಅಪರಾಧಿ” ಎಂದು ಆರೋಪಿಸಿ ಜಾಮೀನಿಗೆ ವಿರೋಧ ವ್ಯಕ್ತಪಡಿಸಿತ್ತು.