Monday, 25th November 2024

ಶರಣರ, ಮಹಾತ್ಮರ ಮಾತುಗಳೆ ವಚನಗಳು: ಸೋಮವಾರಪೇಟೆ ಶ್ರೀ

ಸಿರವಾರ : ಸಂತ, ಶರಣ, ಮಹಾತ್ಮರು ಹಾಡಿದ ಮಾತುಗಳೇ ವಚನಗಳಾಗಲಿವೆ ಎಂದು ರಾಯಚೂರು ಸೋಮವಾರಪೇಟೆಯ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸಜ್ಜಲಶ್ರೀ ಶರಣಮ್ಮನವರ ಆಶ್ರಮದಲ್ಲಿ ನಡೆದ 46ನೇ ಶಿವಾನುಭವಗೋಷ್ಟಿ ಯಲ್ಲಿ ಮಾತನಾಡಿದರು.

ಸಜ್ಜಲಗುಡ್ಡದ ಶರಣಮ್ಮನವರು ಜೀವನದಲ್ಲಿ ಗುರುವಿನ ಕರುಣೆಯಿಂದ ಭಕ್ತರ ಏಳ್ಗೆಗೆ ಶ್ರಮಿಸಿದ್ದರು. ಹಾಗಯೇ ಪ್ರತಿ ಯೊಬ್ಬರೂ ಏನನ್ನಾದರೂ ಸಾಧಿಸಬೇಕೆಂದರೆ ಗುರುವಿನ ಕರುಣೆ ಅಗತ್ಯ. ಪುರಾಣ, ಶಿವಾನುಭವಗೋಷ್ಟಿಯಲ್ಲಿ ಭಾಗವಹಿಸುವು ದರಿಂದ ಮಹಾತ್ಮರ ಜೀವನ ತಿಳಿಯುತ್ತದೆ, ಅದನ್ನು ಅರಿತು ನಡೆದಾಗ ಜೀವನ ಸಾರ್ಥಕವಾಗ ಲಿದೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ಮಾತನಾಡಿದರು.

ಸಜ್ಜಲಗುಡ್ಡದ ಸಿದ್ದಲಿಂಗಯ್ಯ ತಾತನವರು, ಡಾ.ಪರಮೇಶ ಸಾಲಿಮಠ, ಚಂದ್ರಶೇಖ ರಪ್ಪ ಗಲಗ, ರುದ್ರಗೌಡ, ಉಮಾಪತಿ ಚುಕ್ಕಿ, ಜೆ.ದೇವರಾಜಗೌಡ, ಅಯ್ಯನಗೌಡ ಎರೆಡ್ಡಿ, ಸಿದ್ದಪ್ಪಗೌಡ ಕುರುಕುಂದಿ, ದಾನನಗೌಡ, ಜೆ.ಶಿವರಾಮರೆಡ್ಡಿ ಶಿವಶರಣ ಅರಕೇರಿ, ಬಸವರಾಜ ಹೂಗಾರ, ಭೂಪನಗೌಡ, ಸುರೇಶ ಗಲಗ, ನಾಗಪ್ಪ ಪತ್ತಾರ, ಮಲ್ಲಯ್ಯ ಹೂಗಾರ, ಇತರರು ಇದ್ದರು.