ಫಾಸ್ಟ್ ಫುಡ್ ವಿತರಿಸುವ ಅಮೆರಿಕ ಮೂಲದ ‘ಮೆಕ್ಡೊನಾಲ್ಡ್ಸ್’ ದೇಶದಾದ್ಯಂತ ಹಲವು ಔಟ್ಲೆಟ್ಗಳನ್ನು ಹೊಂದಿದೆ. ಹಲ್ಲಿ ಸಿಕ್ಕ ಬಗ್ಗೆ ಗ್ರಾಹಕ ಭಾರ್ಗವ್ ಜೋಶಿ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಇಲಾಖೆ ಕ್ರಮ ಜರುಗಿಸ ಲಾಗಿದೆ.
ನಾನು ಕೊಂಡ ತಂಪು ಪಾನೀಯದಲ್ಲಿ ಹಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಮ್ಯಾನೇಜರ್ಗೆ ತಿಳಿಸಿದರೆ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವುದಾಗಿ ಹೇಳಿದರು. ಈ ಮಧ್ಯೆ ಗ್ರಾಹಕರಿಂದ ಆರ್ಡರ್ ಪಡೆಯುವುದು ಮುಂದುವರಿದೇ ಇತ್ತು. ಕ್ರಮ ಕೈಗೊಳ್ಳು ವಂತೆ ನಾವು ಔಟ್ಲೆಟ್ನವರನ್ನು ಒತ್ತಾಯಿಸಿದರೆ, ನಿಮ್ಮ ಬಿಲ್ ಹಣ ಹಿಂದಿರುಗಿಸುವುದಾಗಿ ಹೇಳಿದರು” ಎಂದು ಜೋಶಿ ಹೇಳಿದ್ದಾರೆ.
ಔಟ್ಲೆಟ್ನಿಂದ ಹೊರ ಹೋಗದೇ ಇದ್ದರೆ ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಸಿದರು. ನಂತರ ನಾವು ಆಹಾರ ಮತ್ತು ಔಷಧ ಇಲಾಖೆಗೆ ದೂರು ನೀಡಿದೆವು. ಅವರು ಔಟ್ಲೆಟ್ ಅನ್ನು ಪರೀಕ್ಷಿಸಿ ಬೀಗ ಹಾಕಿದ್ದಾರೆ ಎಂದು ಭಾರ್ಗವ್ ತಿಳಿಸಿದ್ದಾರೆ.