Thursday, 5th December 2024

ಝಿರೋ ಟ್ರಾಫಿಕ್ ಮೂಲಕ ಕರೆ ತಂದು ನ್ಯಾಯಾಧೀಶರಿಗೆ ಚಿಕಿತ್ಸೆ

ತುಮಕೂರು: ನ್ಯಾಯಾಧೀಶರೊಬ್ಬರನ್ನು ಶಿವಮೊಗ್ಗದಿಂದ ತುಮಕೂರಿನವರೆಗೆ ಝಿರೋ ಟ್ರಾಫಿಕ್ ಮೂಲಕ ಕರೆತಂದು ಚಿಕಿತ್ಸೆ ನೀಡುತ್ತಿರುವ ಘಟನೆ ನಡೆದಿದೆ.

ಶಿವಮೊಗ್ಗ ಗ್ರಾಹಕರ ಕೋಟ್೯  ನ್ಯಾಯಾಧೀಶರಾದ ಸದಾನಂದ ಎಂ.ಕಲಾಲ್ ಅವರಿಗೆ ಬುಧವಾರ ಹೃದಯಘಾತ ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಝೀರೋ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಕರೆದು ಹೋಗುತ್ತಿದ್ದಾಗ, ಮಾರ್ಗಮಧ್ಯೆ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ತಿಪಟೂರು, ಗುಬ್ಬಿ ಹಾಗೂ ತುಮಕೂರು ನಗರದಲ್ಲಿ ಪೊಲೀಸರು ಝಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.

ಪ್ರಸ್ತುತ ಶಿವಮೊಗ್ಗದಲ್ಲಿ ಕನ್ಸೂಮರ್ ಕೋರ್ಟ್ನಲ್ಲಿ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಧಾರವಾಡದಲ್ಲಿ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದ್ದರು.