Sunday, 5th January 2025

ಉಚಿತ ಮಾಸ್ಕ್ ಕೊಡುಗೆ

ಬೆಂಗಳೂರು:

ಕೋವಿಡ್-19 ಹಿನ್ನೆಲೆ ಸುರಕ್ಷತೆಯ ದೃಷ್ಟಿಯಿಂದ Atria Convergence Technologies Limited (ACT) ಸಂಸ್ಥೆಯು ಪಾಲಿಕೆಗೆ 1 ಲಕ್ಷ ಮಾಸ್ಕ್ ಗಳನ್ನು ಉಚಿತವಾಗಿ ನೀಡುತ್ತಿದ್ದು, ಇಂದು ಪಾಲಿಕೆ ಕೇಂದ್ರ ಕಛೇರಿ ಮುಂಭಾಗ ACT ಸಂಸ್ಥೆ ಸಿ.ಇ.ಒ ಬಾಲ ಮಲ್ಲದಿ ರವರು ಪೂಜ್ಯ ಮಹಾಪೌರರು ರವರಿಗೆ ಪತ್ರ ನೀಡುವ ಮೂಲಕ ಹಸ್ತಾಂತರಿಸಿತು.

ಈ ವೇಳೆ ಉಪಮಹಾಪೌರರು ಶ್ರೀ ರಾಮಮೋಹನ ರಾಜು, ವಿರೋಧ ಪಕ್ಷದ ನಾಯಕರು ಶ್ರೀ ಅಬ್ದುಲ್ ವಾಜೀದ್, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು ಶ್ರೀ ಮಂಜುನಾಥ ರಾಜು.ಜಿ, ಆಯುಕ್ತರು ಶ್ರೀ ಬಿ.ಹೆಚ್.ಅನಿಲ್ ಕುಮಾರ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.

ಕೋವಿಡ್-19 ಸೋಂಕು‌ ನಿಯಂತ್ರಿಸುವ ನಿಟ್ಟಿನಲ್ಲಿ ACT ಸಂಸ್ಥೆಯು 1 ಲಕ್ಷ ಮಾಸ್ಕ್ ಗಳನ್ನು ಪಾಲಿಕೆಗೆ ಉಚಿತವಾಗಿ ನೀಡಿದೆ.

ಕೋವಿಡ್-19 ಹಿನ್ನೆಲೆ ಪಾಲಿಕೆಯು ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅದರ ಜೊತೆಗೆ ಹಲವಾರು ಸಂಘ ಸಂಸ್ಥೆಗಳು, ದಾನಿಗಳು ಮುಂದೆ ಬಂದು ಸಹಾಯ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ಮಹಾಪೌರರು ತಿಳಿಸಿದರು.

 

Leave a Reply

Your email address will not be published. Required fields are marked *