ಮಿಥಾಲಿ ರಾಜ್ ಬಳಿಕ ಎಲ್ಲ ಮಾದರಿಗಳ ತಂಡವನ್ನು ಮುನ್ನಡೆಸಲಿರುವ ಹರ್ಮನ್ಪ್ರೀತ್ ಕೌರ್ ಪಾಲಿಗೆ ಇದೊಂದು ಸವಾಲಿನ ಸರಣಿ ಆಗುವುದರಲ್ಲಿ ಅನುಮಾನವಿಲ್ಲ. ವನಿತಾ ವಿಶ್ವಕಪ್ ಬಳಿಕ ಭಾರತ ಆಡುತ್ತಿರುವ ಮೊದಲ ಅಂತಾರಾಷ್ಟ್ರೀಯ ಮುಖಾಮುಖೀ ಆಗಿದ್ದು, ಮುಂಬರುವ ಕಾಮನ್ವೆಲ್ತ್ ಗೇಮ್ಸ್ ಮತ್ತು ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ಗಾಗಿ ಸಿದ್ಧತೆ ಮೊದಲ್ಗೊಳ್ಳಬೇಕಿದೆ.
ಭಾರತದ ಯಶಸ್ಸಿನಲ್ಲಿ ಸ್ಮತಿ ಮಂಧನಾ, ಶಫಾಲಿ ವರ್ಮ, ದೀಪ್ತಿ ಶರ್ಮ, ಪೇಸರ್ ಪೂಜಾ ವಸ್ತ್ರಾಕರ್ ಅವರ ಫಾರ್ಮ್ ನಿರ್ಣಾಯಕವಾಗಲಿದೆ.
ಆತಿಥೇಯ ಶ್ರೀಲಂಕಾ ಕಳೆದ ಪಾಕಿಸ್ಥಾನ ಪ್ರವಾಸದ ವೇಳೆ 0-3 ವೈಟ್ವಾಶ್ ಅನುಭವಿಸಿದ್ದು, ತಂಡದ ಮನೋಸ್ಥೈರ್ಯಕ್ಕೆ ಬಹಳಷ್ಟು ಧಕ್ಕೆಯಾಗಿದೆ. ಚಾಮರಿ ಅತಪಟ್ಟು ಪಡೆ ಭಾರತದ ಮೇಲೆರಗಿ ತವರಿನ ಅಂಗಳದ ಲಾಭ ವೆತ್ತಲು ಗರಿಷ್ಠ ಪ್ರಯತ್ನ ಮಾಡುವುದರಲ್ಲಿ ಅನುಮಾನವಿಲ್ಲ.
ಉಳಿದೆರಡು ಪಂದ್ಯ ಗಳು ಜೂ. 25 ಮತ್ತು 27ರಂದು ನಡೆಯಲಿವೆ. ಜುಲೈ ಒಂದರಂದು ಏಕದಿನ ಸರಣಿ ಮೊದಲ್ಗೊಳ್ಳಲಿದೆ. ಜು. 4 ಮತ್ತು 7ರಂದು ಉಳಿ ದೆರಡು ಪಂದ್ಯಗಳನ್ನು ಆಡಲಾಗುವುದು.
ಭಾರತ ತಂಡ
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮತಿ ಮಂಧನಾ (ಉಪನಾಯಕಿ), ಸಿಮ್ರನ್ ಬಹಾದೂರ್, ಯಾಸ್ತಿಕಾ ಭಾಟಿಯ, ರಾಜೇಶ್ವರಿ ಗಾಯಕ್ವಾಡ್, ರಿಚಾ ಘೋಷ್, ಎಸ್. ಮೇಘನಾ, ಮೇಘನಾ ಸಿಂಗ್, ಪೂನಂ ಯಾದವ್, ರೇಣುಕಾ ಸಿಂಗ್, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮ, ದೀಪ್ತಿ ಶರ್ಮ, ಪೂಜಾ ವಸ್ತ್ರಾಕರ್, ರಾಧಾ ಯಾದವ್.
ಶ್ರೀಲಂಕಾ ತಂಡ
ಚಾಮರಿ ಅತಪಟ್ಟು (ನಾಯಕಿ), ನೀಲಾಕ್ಷಿ ಡಿ ಸಿಲ್ವ, ಕವಿಶಾ ದಿಲ್ಹಾರಿ, ವಿಶ್ಮಿ ಗುಣರತ್ನೆ, ಅಮಾ ಕಾಂಚನಾ, ಹಂಸಿಮಾ ಕರುಣಾರತ್ನೆ, ಅಶಿನಿ ಕುಲಸೂರ್ಯ, ಸುಗಂಧಿಕಾ ಕುಮಾರಿ, ಹರ್ಷಿತಾ ಮಾಧವಿ, ಹಸಿನಿ ಪೆರೆರ, ಉದೇಶಿಕಾ ಪ್ರಬೋಧನಿ, ಒಶಾದಿ ರಣಸಿಂಘೆ, ಇನೋಕಾ ರಣವೀರ, ಸತ್ಯ ಸಂದೀಪನಿ, ತಾರಿಕಾ ಸೆವ್ವಂಡಿ.