Monday, 25th November 2024

ನೀಟ್-ಯುಜಿ 2022 ಮುಂದೂಡುವಂತೆ ಆನ್‌ಲೈನ್ ಪ್ರತಿಭಟನೆ

ನವದೆಹಲಿ: ಮುಂಬರುವ ಜುಲೈ 17, 2022 ರಂದು ನಡೆಯಲಿರುವ ನೀಟ್-ಯುಜಿ 2022 ಅನ್ನು ಮುಂದೂಡಲು ದೇಶಾದ್ಯಂತ ಆಕಾಂಕ್ಷಿಗಳು ಸಾಮಾಜಿಕ ಮಾಧ್ಯಮದಲ್ಲಿ ಆನ್‌ಲೈನ್ ಪ್ರತಿಭಟನೆ ನಡೆಸುತ್ತಿದ್ದಾರೆ.

Twitter ನಲ್ಲಿ #postponeetug2022 . ನೀಟ್-ಯುಜಿ ಇತರ ಪ್ರವೇಶ ಪರೀಕ್ಷೆಗಳಿಗೆ, ನಿರ್ದಿಷ್ಟವಾಗಿ CUET ಗೆ ತುಂಬಾ ಹತ್ತಿರದಲ್ಲಿ ನಿಗದಿಪಡಿಸಲಾಗಿದೆ ಎಂದು ಉಲ್ಲೇಖಿಸಿ ವಿದ್ಯಾರ್ಥಿಗಳ ಸಂಪೂರ್ಣ ಆನ್‌ಲೈನ್ ಪ್ರತಿಭಟನೆ ನಡೆಸಲಾಗುತ್ತಿದೆ.

NEET ಅನ್ನು CUET-UG 2022 ಮತ್ತು JEE ಮುಖ್ಯ 2022 ಪರೀಕ್ಷೆಗಳಿಗೆ ಒಂದೇ ಸಮಯಕ್ಕೆ ನಿಗದಿಪಡಿಸಲಾಗಿದೆ. ಎರಡು ಪರೀಕ್ಷೆಗಳ ನಡುವಿನ ಅಂತರ ಕಡಿಮೆ ಇದೆ. ಹೀಗಾಗಿ ಎಲ್ಲಾ ಪ್ರವೇಶ ಪರೀಕ್ಷೆಗಳಿಗೆ ತಯಾರಿ ಮಾಡುವುದು ತುಂಬಾ ಕಷ್ಟಕರ.ಇದು ಎಲ್ಲಾ ಆಕಾಂಕ್ಷಿಗಳಿಗೆ ಆತಂಕದ ಅನುಭವವಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದರು.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ)-ಯುಜಿ 2021 ರ ಕೌನ್ಸೆ ಲಿಂಗ್ ಮಾರ್ಚ್‌ನಲ್ಲಿ ಕೊನೆಗೊಂಡಿತು ಮತ್ತು 2022 ರ ಆವೃತ್ತಿಯನ್ನು ಜುಲೈ 17 ರಂದು ನಿಗದಿಪಡಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ ಮತ್ತು ಕೇವಲ 3 ರಲ್ಲಿ ಇಂತಹ ವಿಶಾಲವಾದ ಪಠ್ಯಕ್ರಮವನ್ನು ಹೇಗೆ ಪರಿಷ್ಕರಿಸಬೇಕು ಎಂದು ಎನ್‌ಟಿಎ ಯನ್ನು ಪ್ರಶ್ನಿಸುತ್ತಿದ್ದಾರೆ.

ಬೋರ್ಡ್ ಪರೀಕ್ಷೆಗಳು, CUCET, JEE ಮೇನ್ಸ್‌ನಂತಹ ಇತರ ಪ್ರಮುಖ ಪರೀಕ್ಷೆಗಳನ್ನು ಸಹ ಅದೇ ಸಮಯದಲ್ಲಿ ನಿಗದಿ ಪಡಿಸಲಾಗಿದೆ. ಮಹತ್ವದ ಪರೀಕ್ಷೆಗಳನ್ನು ಒಂದರ ನಂತರ ಒಂದರಂತೆ ನಿಗದಿಪಡಿಸುವುದರೊಂದಿಗೆ ನಾವು ವಿದ್ಯಾರ್ಥಿಗಳು ಅನುಭವಿಸುತ್ತಿರುವ ಭಯ ಮತ್ತು ಒತ್ತಡವನ್ನು ಊಹಿಸಿಕೊಳ್ಳಿ. ಇದು ನ್ಯಾಯಯುತ ನಿರ್ಧಾರವೇ? ಎಂದು ವಿದ್ಯಾರ್ಥಿಗಳ ಆನ್‌ಲೈನ್ ಅರ್ಜಿಯಲ್ಲಿ ಹೇಳಿದೆ.