ಬರ್ಮಿಂಗ್ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಕರೊನಾ ಪಾಸಿಟಿವ್ ಇದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯಾವಳಿ ಜುಲೈ 1 ರಿಂದ ಆರಂಭವಾಗ ಲಿದ್ದು, ಸದ್ಯ ನಾಯಕ ಕರೊನಾ ಚಿಕಿತ್ಸೆ ಪಡೆಯು ತ್ತಿರುವುದರಿಂದ ತಂಡ ವನ್ನು ಜಸಪ್ರೀತ್ ಬುಮ್ರಾ ಅಥವಾ ವಿಕೇಟ್ ಕೀಪರ್ ರಿಷಬ್ ಪಂಥ್ ಪಂದ್ಯ ವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಸದ್ಯ ಹೋಟೆಲ್ವೊಂದರಲ್ಲಿ ರೋಹಿತ್ ಅವರಿಗೆ ಬಿಸಿಸಿಐ ವೈದ್ಯರ ತಂಡದಿಂದಲೇ ವೀಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭಾನುವಾರ ಬಿಸಿಸಿಐ ಟ್ವೀಟ್ ಮೂಲಕ ತಿಳಿಸಿದೆ.