ನಾವೆಲ್ಲ ಭಾವಿಸದಂತೆ ದೇಶದಲ್ಲಿ ಕಳೆದು ಎರಡು ವರ್ಷಗಳಲ್ಲಿ ಅತಿ ಹೆಚ್ಚು ಸಾವು ಸಂಭವಿಸಿರುವುದು ಕರೋನಾ ಸಾಂಕ್ರಾಮಿಕದಿಂದ
ಅಲ್ಲ. ಅಥವಾ ಹೃದಯಾಘಾತ, ಕ್ಯಾನ್ಸರ್ ಅಥವಾ ಇನ್ನಾವುದೇ ರೋಗಗಳಿಂದಲೂ ಅಲ್ಲ.
ಬದಲಿಗೆ ಅವೆಲ್ಲವುಗಳಿಗಿಂತ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆಯೇ ಹೆಚ್ಚು ಎಂಬುದು ನಿಜಕ್ಕೂ ಆಗಾಥಕಾರಿ ಸಂಗತಿ. ಇದನ್ನು ಸಾಧ್ಯವಾದಷ್ಟು ಮಟ್ಟದಲ್ಲಿ ತಪ್ಪಿಸಲು ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಯು ಪ್ರಯತ್ನವನ್ನು ನಡೆಸು ತ್ತಿದ್ದರೂ, ಅಪಘಾತದ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ.
ಹೆದ್ದಾರಿಗಳಲ್ಲಿ ಅಪಘಾತ ಗಳು ಮತ್ತು ಸಾವು ನೋವುಗಳ ಅಂಕಿಅಂಶವನ್ನು ಅವಲೋಕಿಸುವುದಾದರೆ 2021-22ರಲ್ಲಿ, ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬರು, ದಿವಸವೊಂದಕ್ಕೆ 4115 ಮತ್ತು ವರ್ಷಕ್ಕೆ ಸರಾಸರಿ ೧.೫ ಲಕ್ಷ ಜನರು ರಸ್ತೆ ಅಪಘಾತ ದಿಂದ ಮೃತಪಡುತ್ತಿದ್ದಾರೆ ಎಂದರೆ ಸನ್ನಿವೇಶದ ಗಾಂಭೀರ್ಯವನ್ನು ಅರ್ಥಮಾಡಿ ಕೊಳ್ಳಬಹುದು. ಕೇಂದ್ರ ಸರಕಾರ ಇದರ ಸಂಖ್ಯೆಯನ್ನು ಇಳಿಮುಖ ಮಾಡಲು ಸಾಕಷ್ಟು ಬದಲಾವಣೆಯನ್ನು ತಂದಿದೆ.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಚಾಲನಾ ಪರವಾನಗಿ ಇಲ್ಲದೇ ವಾಹನ ಒಡಿಸುವವರಿಗೆ ದೊಡ್ಡ ಮೊತ್ತದ ದಂಡ ಅಥವಾ ಶಿಕ್ಷೆ ವಿಧಿಸ ಲಾಗುತ್ತಿದೆ. ಇದರ ಜತೆಗೆ, ವಾಹನ ತಯಾರಿಕಾ ಸಂಸ್ಥೆಗಳಿಗೂ ಹೊಸ ಷರತ್ತನ್ನು ವಿಧಿಸಿದೆ. ಆದರೆ, ಸರಕಾರದ ಮಟ್ಟದಲ್ಲಿ ಎಷ್ಟೇ ಕ್ರಮ ತೆಗೆದುಕೊಂಡರೂ, ಅದನ್ನು ಸಾರ್ವಜನಿಕರಿಗೆ ತಲುಪಿಸಬೇಕಾದವರು ಸಾರಿಗೆ ಇಲಾಖೆ ಮತ್ತು ಅಲ್ಲಿನ ಅಧಿಕಾರಿಗಳು. ಕಾನೂನು ಬಿಗಿಯಾದಷ್ಟು ಅದನ್ನು ಉಲ್ಲಂಘಿಸುವವರೂ ಇರುತ್ತಾರೆ ಎನ್ನುವುದನ್ನು ಅರಿತೂ ಅಧಿಕಾರಿಗಳು ಸುಮ್ಮನಾದರೆ ಅಪಘಾತದ ಸಂಖ್ಯೆಗಳು ಹೆಚ್ಚಾಗುತ್ತವೆ. ಸಂಚಾರ ನಿಯಮ ಉಲ್ಲಂಘನೆ ಮನೋಭಾವ ನಮ್ಮಲ್ಲಿ ಹೆಚ್ಚಿದೆ.
ಅದರಲ್ಲೂ ಬೆಳಗಾವಿ. ಕಲಬುರಗಿ, ಬಾಗಲಕೋಟೆಯಂಥ ಜಿಲ್ಲೆಗಳಲ್ಲಿ ಇದು ತೀರಾ ಹೆಚ್ಚು. ಇದು ಅಪಘಾತಕ್ಕೆ ಕಾರಣವಾಗುತ್ತಿದೆ. ಇದರೊಂದಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರವೂ ಅಪರಾಧಕ್ಕೆ ಕುಮ್ಮಕ್ಕು ನೀಡುತ್ತಿದೆ. ವಾಹನ ತಪಾಸಣೆ, ಸಂಚಾರ ನಿಯಮದ ಹೆಸರಿನಲ್ಲಿ ಹಾದಿ ಬದಿಯಲ್ಲೇ ಲಂಚಕ್ಕೆ ಕೈಯೊಡ್ಡುವ ಸಿಬ್ಬಂದಿ ಅನಗತ್ಯ ಗೊಂದಲವನ್ನು ಸೃಷ್ಟಿಸುವುದು ನಿತ್ಯದ ದೃಶ್ಯವಾಗಿದೆ. ಎಷ್ಟೋ ವೇಳೆ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲೇ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡ ಎಷ್ಟೋ ಉದಾಹರಣೆಗಳಿವೆ.
ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮಹತ್ವದ ಆದೇಶ ಹೊರಡಿಸಿದ್ದು, ಎಲ್ಲೆಂದರಲ್ಲಿ ವಾಹ
ನ ತಡೆದು ತಪಾಸಣೆ ನಡೆಸುವಂತಿಲ್ಲ ಎಂದು ಸೂಚಿಸಿದ್ದಾರೆ. ಸುರಕ್ಷತೆ, ಶಿಸ್ತು ಪಾಲನೆಯ ದೃಷ್ಟಿಯಿಂದ ದಂಡ ಇತ್ಯಾದಿಗಳು ಅನಿವಾರ್ಯವೇ ಆಗಿದ್ದರೂ, ಸಾರ್ವಜನಿಕರಿಗೆ ಅನಗತ್ಯ ಕಿರುಕುಳ ಆಗಬಾರದೆಂಬ ದೃಷ್ಟಿಯಿಂದ ಈ ಆದೇಶ ಮಹತ್ವದ್ದು. ಜತೆಗೆ ಸಾರ್ವಜನಿಕರೂ ಸಂಚಾರ ನಿಯಮಗಳು, ವಾಹನಗಳ ಸುಃಸ್ಥಿತಿಯ ವಿಚಾರದಲ್ಲಿ ಶಿಸ್ತಿಗೆ ಒಳಪಡುವುದು ಅತ್ಯಗತ್ಯ.