Monday, 25th November 2024

ಮಳೆ ಹನಿಯುತಿದೆ…ರಾಜಮಾಚಿ ಕರೆಯುತಿದೆ

ಅಲೆಮಾರಿಯ ಡೈರಿ

mehandale100@gmail.com

ಈ ಪ್ರವಾಸದ ಬೋನಸ್ ಎಂದರೆ ಮನರಂಜನ ಕೋಟೆ ಮತ್ತು ಶ್ರೀವರ್ಧನ ಕೋಟೆ ಎಂಬೆರಡು ಕಿಗಳು ದಾರಿಯ ಮೇಲೆ ದಕ್ಕುತ್ತವೆ. ಅಪರೂಪದ ಪಶ್ಚಿಮ ಘಟ್ಟ ಶ್ರೇಣಿಯ ಹಸಿರು ಸೆರಗಿನ ಸಾಲು ಇವೆರಡೂ ಕೋಟೆಯ ತುದಿಗಳಿಂದ ಅದ್ಭುತ ಎಂದರೆ ಕಮ್ಮಿಯಾದೀತು.

ನಿಮಗೆ ಕಠಿಣ ರಸ್ತೆ ಬೇಕಾ? ಸುಲಭ ರಸ್ತೆ ಬೇಕಾ? ಒಂದೇ ದಿನ ಟ್ರೆಕ್ ಮಾಡ್ತೀರಾ, ಎರಡು ದಿನವೂ ಎಂಜಾಯ್‌ಮೆಂಟ್ ಬೇಕಾ..? ಬರೀ ಮಳೆ ಮಾತ್ರವಲ್ಲದೆ, ಅದರ ಜತೆ ಇಂಥ ಥ್ರಿಲ್ಲಿಂಗ್ ಅನುಭವ.

ಒಂದಕ್ಕೆ ಒಂದು ಫ್ರೀ ಅಲ್ಲ, ಇಲ್ಲಿ ಒಂದಕ್ಕೆರಡು ಫ್ರೀ ಆಫರ್. ಬರೀ ಆರುನೂರು ವರ್ಷದ ಇತಿಹಾಸ ಅರಸಿ ಹೊರಟರೆ ಸಿಕ್ಕೋದು ಇತಿಹಾಸ ಪೂರ್ವದ ಇತಿಹಾಸ. ಎಲ್ಲದಕ್ಕೂ ಮಿಗಿಲು ಮಳೆಗಾಲದಲ್ಲಿ ಮಾತ್ರವೇ ಅನುಭವಿಸಿ ಆಮೋ ದಕ್ಕೂ ತೆರೆದುಕೊಳ್ಳುವ ನೆಲ ಎಂದಿದ್ದರೆ ಈ ಕುಗ್ಗದ ಜಗ್ಗದ ಕೋಟೆ ಮತ್ತು ಇತಿಹಾಸ. ಬಾಕಿ ಹೊತ್ತಲ್ಲಿ ಬೋಳು ಬಿಸಿಲು ಗುಡ್ಡೆಯಾಗಿ ಕಾಲು ನೆತ್ತಿ ಎರಡೂ ಸುಡುತ್ತ, ಒಳಗಿದ್ದ ತೇವವನ್ನೂ ಆವಿಯಾಗಿಸುತ್ತ ಯಾಕಾದರೂ ಹತ್ತುವ ಸಾಹಸಕ್ಕೆ ಇಳಿದೆವೆನ್ನಿಸುವಂತೆ ಮಾಡುವ ಚಾರಣ ಮತ್ತು ಪ್ರವಾಸಕ್ಕೆ ಸಿದ್ಧರಿದ್ದರೆ ನಿಮ್ಮ ಆಯ್ಕೆ ನಿಮ್ಮದು.

ಮಳೆಗಾಲ ಚಳಿಗಾಲ ಮತ್ತು ಯಾವ ಕಾಲಕ್ಕೂ ಅದರದ್ದೇ ವೇಷ ಧರಿಸುವ ಇದು ಅಲೆಮಾ ರಿಗಳ ಆಯ್ಕೆಗೆ ತಕ್ಕಂತೆ ಲಭ್ಯ. ಆದರೆ, ಒಬ್ಬ ಅಲೆಮಾರಿಯಾಗಿ ಅನುಭವಕ್ಕೆ ಈಡಾಗುವು ದಾದರೆ ಮಳೆಗಾಲ ಆರಂಭವಾಗಿದೆ, ನಾಲ್ಕು ಇಂಬಳಗಳು ನಿಮ್ಮನ್ನು ಹಿಂಡಿದರೂ ಪರವಾಗಿಲ್ಲ ಅದಕ್ಕಾಗಿ ರಕ್ತದಾನ ಮಾಡಲು ಸಿದ್ಧರಾಗಿ ಹೊರಟು ಬಿಡಿ. ಮಳೆ ಮತ್ತು ಅದರ ಹೊತ್ತ ಅರಳುವ ಭೂಮಿಯ ಅಪರೂಪದ ದೃಶ್ಯ ವೈಭವಕ್ಕೆ ನೀವು ಸ್ವತಃ ಸಾಕ್ಷಿ ಯಾಗದಿದ್ದರೆ ಅಷ್ಟರ ಮಟ್ಟಿಗೆ ಆಗುವ ಮತ್ತು ಕಳೆದುಕೊಳ್ಳುವ ಲುಕ್ಸಾನು ನಿಮ್ಮದೆ, ಕಾರಣ ರಾಜಮಾಚಿಯಂತಹ ಇತಿಹಾಸ ಪ್ರಸಿದ್ಧ ಮತ್ತು ಹಸಿರು ಹೊದ್ದು ನಿಲ್ಲುವ ಸ್ಥಳ ಜೂನ್‌ನಿಂದ ಅಕ್ಟೋಬರ್ ಅಕ್ಷರಶಃ ಮಧ್ಯರಾತ್ರಿಯ ನವವಧು.

ತೀರ ಹದಿನಾರನೇ ಶತಮಾನದಲ್ಲಿ ಶಾತವಾಹನರಿಂದ ಆರಂಭಗೊಂಡು, ಭಾರತವನ್ನು ಬರಬಾದು ಮಾಡಲೆಂದೇ ಬಂದಿದ್ದ ತುರ್ಕರ ಕೈಗೆ ಸಿಕ್ಕಿ, ವಿಜಾಪುರದ ಅದಿಲ್‌ಶಾಹಿಗಳ ಕೈಗೆ ಹೋಗಿದ್ದ ಕೋಟೆಯ ಒಡೆತನವನ್ನು, ಶಿವಾಜಿ ಮಹಾರಾಜರು ಹಿಂದಕ್ಕೆ ಪಡೆಯುವುದರೊಂದಿಗೆ ತಳಕು ಹಾಕಿಕೊಳ್ಳುವ ಇದರ ಪ್ರಾಗೈತಿಹಾಸದ ಕಥಾನಕ ನಂತರ ಬ್ರಿಟಿಶ್ ವಶಕ್ಕೆ ಹೋಗಿ ಈಗ ಅಳಿದು ಳಿದ ಇಮಾರತ್‌ನಂತೆ ಬದಲಾಗಿರುವ ಇದಕ್ಕೆ ಒಮ್ಮೆಯಾದರೂ ಕಾಲಾಡಿಸದಿದ್ದರೆ ಆದೀತೆ? 1657ರಲ್ಲಿ ಶಿವಾಜಿಯ ಮೂಲಕ ತನ್ನ ಉತ್ತುಂಗದ ದಿನಗಳನ್ನು ಕಂಡ ರಾಜಾಮಾಚಿ ಮತ್ತು ಇದರ ಜತೆಗಿರುವ ಇತರ ಕೋಟೆಗಳ ಅವನತಿ ಆರಂಭವಾದದ್ದು ಮೊಘಲ್‌ನ ಮತಾಂಧ ದೊರೆ ಔರಂಗಜೇಬ್‌ನ ಆಕ್ರಮಣದೊಂದಿಗೆ.

ಅಲ್ಲಿವರೆಗೆ ಅಂದರೆ ಸುಮಾರು 1704ವರೆಗೂ ಮರಾಠರ ವಶದಲ್ಲಿದ್ದ ಕೋಟೆಯನ್ನು ನಂತರದಲ್ಲಿ ಬ್ರಿಟಿಷರು ಪಡೆದ ಮೇಲೆ ಅತ್ಯಂತ ಪ್ರಮುಖ ಹಾಗೂ ಮುಂಬೈ ಮತ್ತು ಕೆಳಗಿನ ಕರಾವಳಿ ಮಧ್ಯ ವಾಣಿಜ್ಯ ಹೆzರಿಯಾಗಿಯೂ ರಾಜಾಮಾಚಿ ಹೆಗ್ಗುರುತಿಗೆ  ಕಾರಣವಾಗಿತ್ತು.ಗೈತಿಕಹಾಸದ ರಾಜಮಾಚಿ ಕೋಟೆ ಟ್ರೆಕ್ ಅಥವಾ ಪ್ರವಾಸ, ಅಸಲಿಗೆ ಎರಡು ಕೋಟೆಗಳನ್ನು, ಭಾರತದಲ್ಲಿ
ಎಣಿಕೆ ಆರಂಭವಾಗುವ ಮೊದಲೇ ಆರಂಭವಾದ ಇತಿಹಾಸದ ಭೌದ್ಧ ಬಿಕ್ಕುಗಳ ಸರಣಿ ಗುಹೆಗಳನ್ನೂ, ಅದಕ್ಕೂ ಮೊದಲು
ಮರಾಠ ಸಾಮ್ರಾಜ್ಯದ ಮೇರು ಬಾಜಿರಾವ್ ಸ್ಥಾಪಿಸಿ ಪೂಜಿಸಿದ್ದ ಶಿವನ ದೇವಾಲಯವನ್ನೂ ನಿಮ್ಮ ಲೆಕ್ಕಕ್ಕೆ ಜಮೆ ಮಾಡುವ ಇದು ಪಶ್ಚಿಮ ಘಟ್ಟ ಸರಣಿಯ ಅನೇಕ ಪರ್ವತ ಪ್ರದೇಶದಂತೆಯೇ ಇದ್ದು, ಅತ್ಯುತ್ತಮ ಮಳೆಗಾಲದ ತಾಣ.

ದೇಶದ ವಾಣಿಜ್ಯ ನಗರಿ ಮುಂಬಯಿಯಿಂದ ಈಗತ್ ಪುರಿಯ ಮೂಲಕ ಲೋನಾವಾಲ ಸೇರಿಕೊಂಡರೆ, ಮಳೆಯ ದೃಶ್ಯ ವೈಭವ ತುಂಬಿಕೊಳ್ಳಲೇ ಬರುವ ಲೆಕ್ಕ ಮತ್ತು ದಿಕ್ಕು ತಪ್ಪಿದ ಜನರ ಮಧ್ಯೆ ಇವೆಲ್ಲ ಹಳವಂಡಗಳನ್ನೂ ಮೀರಿ ನಮ್ಮನ್ನು ವಿಸ್ಮಿತರ ನ್ನಾಗಿಸುವ ಇಂಥ ಹಲವು ಸ್ಥಳಗಳಿಗೆ ನೀವು ಕೇವಲ ಹದಿನೈದೇ ಕಿ.ಮೀ. ದೂರ ಇರುತ್ತೀರಿ. ರಾಜಮಾಚಿ ಎನ್ನುವ ಹೆಸರಿನಿಂದಲೇ ಪ್ರಸಿದ್ಧ ಸ್ಥಳವಾಗಿರುವ ಇಲ್ಲಿ ಪ್ರತಿ ತಿರುವೂ, ಪ್ರತಿ ಸ್ಥಳವೂ ಫೋಟೊಜೆನಿಕ್.

ಅಲ್ಲಲ್ಲೇ ನಿಲ್ಲಿಸುವ ಹಲವು ಐತಿಹಾಸಿಕ ಸ್ಥಳಗಳ ಸಮೂಹ ಈ ಪ್ರವಾಸ. ನೀವು ಒಳ್ಳೆ ಚಾರಣಿಗರಾ? ಏರುಮುಖ ನಡಿಗೆಯೇ ನಿಮ್ಮ ಉದ್ದೇಶವಾದರೆ ನಿಮಗೆ ನಾನು ಬೇರೊಂದು ಮಾರ್ಗ ಸೂಚಿಸುತ್ತೇನೆ. ಇದು ಚಾರಣಿಗರಿಗೆಅಪ್ಪಟ ಸಾಹಸ. ಮಾಡರೇಟ್  ಮಟ್ಟದ ಚಾರಣ ಇದ್ದರೂ ಹೈರಾಣಾಗಿಸುವುದು ನಿಜ. ಹಾಗಾಗಿ ಲೊನಾವಾಲಾ ಬದಲಿಗೆ ಕರ್ಜತ್ ಮಾರ್ಗವನ್ನು ನಾನು ಸೂಚಿಸುತ್ತೇನೆ; ಈ ಗುಂಪಿಗೆ. ಇದನ್ನು ಒಂದಿನದ ಬದಲಿಗೆ ಎರಡು ದಿನದ ಚಾರಣವನ್ನಾಗಿಸಿಕೊಂಡರೆ ಅಪರೂ ಪದ ಕ್ಯಾಂಪಿಂಗ್ ಕೂಡ ಮಾಡಿಕೊಂಡು, ಬೆಳ್ಳಂಬೆಳಗ್ಗೆ ಪಕ್ಷಿವೀಕ್ಷಣೆಯಂತಹ ವಿಭಿನ್ನತೆಗೂ ಇದು ಅವಕಾಶ ಒದಗಿಸಲಿದೆ.

ಇದು ಕಲ್ಲು ಏರಿಳಿತ ಮತ್ತು ವಿಪರೀತ ಅಂಕುಡೊಂಕಿನ ಕೊರಕಲ ಕಣಿವೆ ಪ್ರದೇಶದ ದುರ್ಗಮ ದಾರಿಯಾಗಿದ್ದು, ಹಲವು
ಸಣ್ಣಸಣ್ಣ ಜಲಪಾತ ಮತ್ತು ನೀರಿನ ಹರಿವುಗಳನ್ನು ದಾಟುತ್ತ ನಿಸರ್ಗ ರಮಣೀಯ ಆಮೋದಕ್ಕೆ ಅವಕಾಶ ನೀಡುತ್ತದೆ.
ಕರ್ಜತ್‌ನಿಂದ ಕೊಂಡಾಣೆ ಅಥವಾ ಕೊಂಡವಾಡಿ ಎನ್ನುವ ಪ್ರದೇಶಕ್ಕೆ ಮೊದಲ ಹಂತದ ಪ್ರವಾಸ ಮುಗಿದು ಚಾರಣಕ್ಕೆ ನೀವು ಸಿದ್ಧವಾದರೆ, ಬೌದ್ಧ ಬಿಕ್ಕುಗಳ ಗುಹಾ ಸಮೂಹ ಈ ರಸ್ತೆಯ ಮೊದಲು ಸಿಕ್ಕುತ್ತದೆ. ಇತಿಹಾಸ ಆರಂಭವಾಗುವ ಮೊದಲೇ ಕ್ರಿಸ್ತ ಪೂರ್ವಕ್ಕೆ ಕರೆದೊಯ್ಯುವ ಈ ಹನ್ನೆರಡು ಸಾಲು ಗುಹೆಗಳ ವೈಶಿಷ್ಟ್ಯ ಎಂದರೆ ಎಲ್ಲವನ್ನೂ ಏಕಶಿಲಾ ಸಮೂಹದ ಪರ್ವತದಲ್ಲಿ ಕೊರೆಯಲಾಗಿದ್ದು, ಅಷ್ಟೂ ಗುಹೆಗಳನ್ನು ಅಲ್ಲಲ್ಲಿ ಅಗತ್ಯ ಮತ್ತು ಅನುಕೂಲ ನೋಡಿಕೊಂಡೂ ಕೊರೆದ ವೈಜ್ಞಾನಿಕತೆಗೆ ಒಂದು ಸೆಲ್ಯೂಟ್ ಹೊಡೆಯುತ್ತಿರಿ ನೀವು.

ಕಾರಣ ಹಾಗೆ ಒಂದು ಶಿಲಾ ಪರ್ವತದಲ್ಲಿ ಸಾಲುಸಾಲಾಗಿ ಲೆಕ್ಕ ಮತ್ತು ಹದ ಎರಡೂ ತಪ್ಪದಂತೆ ಗುಹೆಗಳನ್ನು ಕೊರೆದು ನಿಲ್ಲಿಸು ವುದಿದೆಯಲ್ಲ ಅದು ಸುಮ್ಮನೆ ಆಗುವ ಹೋಗುವ ಮಾತಲ್ಲ. ಈ ರಸ್ತೆಯ ಚಾರಣ ಅನುಭವಿಗಳಿಗಾದರೆ ಆರೆಂಟು ತಾಸು ಬೇಕಾಗುತ್ತದೆ. ಹೆಚ್ಚಿನವರು ಇದನ್ನು ಮೊದಲ ದಿನವೇ ಕೊಂಡಾಣೆ ಅಥವಾ ಕೊಂಡಿವಾಢೆಯಲ್ಲಿ ಬೇಸ್ ಕ್ಯಾಂಪಿಂಗ್
ಮಾಡಿಕೊಂಡು ಬೆಳಗ್ಗೆ ಹತ್ತಿ ಮಧ್ಯಾಹ್ನ ಇಳಿದು ಹಿಂದಿರುಗುವ ಎರಡು ದಿನದ ದಾರಿ ಮಾಡಿಕೊಂಡರೆ, ಕೆಲವು ಅನುಭವಿಗಳು ಮೊದಲ ದಿನಕ್ಕೆ ಮುಗಿಸಿ ಹಿಂದಿರುಗುತ್ತಾರೆ.

ಆದರೆ ಕರ್ಜತ್‌ನ ದಾರಿಯಾದರೆ ಮಾರ್ವೆಲಸ್, ಸ್ಟನ್ನಿಂಗ್, ಆಸಮ, ಅಹ್ ವಾಟ್ ಎ ಬ್ಯೂಟಿ… ಎಂದು ಉದ್ಘರಿಸುತ್ತ ಇಂಬಳಗಳ ಬಗ್ಗೆಯೂ ಕಣ್ಣಿಡುತ್ತ ಸಾಗುತ್ತೀರಿ. ಆದರೆ, ಚಾರಣದ ಅನುಭವ ಇಲ್ಲದ ಮತ್ತು ಸಹಜ ನಡಿಗೆಯ ಮೂಲಕ ತಲುಪಲು ಬಯಸುವ ಪ್ರವಾಸಿಯಾಗಿ ಭೇಟಿಗೆ ಮುಂದಾದರೆ ಲೋನಾವಾಲದಿಂದ ಹೊರಟು ಉಧೇವಾಡಿ ಮೂಲಕ ಬಂದುಬಿಡಿ.

ಇದಕ್ಕೆಲ್ಲ ಲೋನಾವಳ ರೈಲು ನಿಲ್ದಾಣದಿಂದಲೇ ನಿಮಗೆ ಟ್ಯಾಕ್ಸಿ ಇತ್ಯಾದಿಗಳ, ಗೈಡುಗಳ ಎಲ್ಲ ಸೌಲಭ್ಯ ಸಿಕ್ಕುತ್ತದೆ. ರೇಟು ಮತ್ತು ವ್ಯವಹಾರ ಕುದುರಿಸಿಕೊಳ್ಳುವುದು ಮಾತ್ರ ನಿಮ್ಮ ನಿಮ್ಮ ಕೆಪಾಸಿಟಿ. ಆದರೆ ಈ ರಸ್ತೆ ಕೂಡ ವಾಹನ ಬಳಕೆಗೆ ಸುಲಭ ಸಾಧ್ಯತೆ ಇಲ್ಲ. ಲೋನಾವಳದಿಂದ ರಾಜಮಾಚಿ ಬೇಸ್ ತಲುಪಲೇ ವಾಹನದಲ್ಲಿ ಹದಿನೇಳೇ ಕಿ.ಮೀ. ದೂರಕ್ಕೆ ಸುಮಾರು ಒಂದು ತಾಸು ಅವಧಿ ಬೇಡುವ ದುರ್ಗಮ ದಾರಿ ಇದು. ಮುಂಬಯಿಯಿಂದ ೬೦ ಕಿ.ಮೀ. ಪುಣೆಯಿಂದ ೮೫ ಕಿ.ಮೀ ದೂರದ ಲೋನಾವಳ ಅಥವಾ ಖಂಡಾಲ ಕಣಿವೆ ಪ್ರದೇಶ ಪ್ರವೇಶಿಕೆ ಯಾದರೆ ರಾಜಾಮಾಚಿ ದೂರವೇನಲ್ಲ.

ಇದರ ಹೊರತಾಗಿ ಈ ಪ್ರವಾಸದ ಬೋನಸ್ ಎಂದರೆ ಮನರಂಜನ ಕೋಟೆ ಮತ್ತು ಶ್ರೀವರ್ಧನ ಕೋಟೆ ಎಂಬೆರಡುಕಿಗಳು ದಾರಿಯ ಮೇಲೆ ದಕ್ಕುತ್ತವೆ. ಅಪರೂಪದ ಪಶ್ಚಿಮ  ಘಟ್ಟ ಶ್ರೇಣಿಯ ಹಸಿರು ಸೆರಗಿನ ಸಾಲು ಇವೆರಡೂ ಕೋಟೆಯ ತುದಿಗಳಿಂದ ಅದ್ಭುತ ಎಂದರೆ ಕಮ್ಮಿಯಾದೀತು. ಗಾಳಿಗೆ ಕಾಲು ಹಾರಿಸುತ್ತ ಕೋಟೆ ತುತ್ತ ತುದಿಯಲ್ಲಿ ಕೂತೆದ್ದು ಬರುವ ಮಜವೇ ಬೇರೆ. ಆಯ ತಪ್ಪಿದರೆ ಶಾರ್ಟ್ ಕಟ್ಲಿ ಕೆಳತುದಿ ತಲುಪುವದು ಮಜವೇ. ಆದರೆ ಅದು ಅರಿವಾಗುವ ಹೊತ್ತಿಗೆ ನೀವಿರುವುದಿಲ್ಲ. ಸುರಕ್ಷತೆಯ ಆಯ್ಕೆ ನಿಮ್ಮದು.

ಇಂಥಾ ಎತ್ತರಕ್ಕೆ ಭಾರಿ ಸೈಜುಗಳ ಕಲ್ಲುಗಳನ್ನು ಕಲಾತ್ಮಕವಾಗಿ ಕತ್ತರಿಸಿ, ಏರಿಸಿ ಅಲುಗಾಡಂತೆ ಬಿಗಿದ ಬಂಧವಿದೆಯಲ್ಲ
ಈಗಿನ ಸಿಮೆಂಟಿಗೆ ದಕ್ಕುವ ತಂತ್ರಜ್ಞಾನವೇ ಅಲ್ಲ. ಆ ನಿಟ್ಟಿನಲ್ಲಿ ಶಿಲಾ ಪರ್ವತದ ಮೇಲಿರುವ ಈ ಕೋಟೆಗಳ ವೈಶಿಷ್ಟ್ಯ ಗಮ
ನೀಯ. ಎತ್ತರ ಮತ್ತು ಕಡಿದಾದ ಅಂಚುಗಳನ್ನು ಬಳಸಿಕೊಂಡು ನಿರ್ಮಿಸಿದ ರಚನೆಗೆ ಸಾಟಿ ಇರಲಿಕ್ಕಿಲ್ಲ. 2750 ಅಡಿ
ಎತ್ತರಕ್ಕೆ ಆಯ್ಕೆ ಮಾಡಿರುವ ಕಾರಣ ಶತ್ರುಗಳ ಸುರಕ್ಷತೆ ಮತ್ತು ಏತ್ತರದಿಂದ ಯಾವ ಮೂಲೆಗೂ ನಿರುಕಿಸಿ ಅಪಾಯಗಳನ್ನು
ಎದುರಿಸಲು ಸನ್ನದ್ಧವಾಗಲು ಲಭ್ಯವಾಗುವ ಅವಕಾಶ.

ಇವೆಲ್ಲ ತಾಂತ್ರಿಕ ಕಾರಣಗಳನ್ನು ಹೊರತು ಪಡಿಸಿದರೆ, ಈ ಎತ್ತರ ಮತ್ತೆ ದುರ್ಗಮತೆ ಯಾಕಿದ್ದೀತು ನಮಗೆ ಎನ್ನಿಸದೇ ಇರಲಾ ರದು. ಕಾಲಕಾಲಕ್ಕೆ ತಕ್ಕಂತೆ ತಾಂತ್ರಿಕತೆಯನ್ನು ಬೆಳೆಸಿಕೊಂಡು ಬೆಳೆದ ಕೋಟೆಗಳಲ್ಲಿ ಈಗಲೂ ರಹಸ್ಯ ಕಂದಕಗಳು ಮತ್ತು ಅದರ ಬಾಗಿಲುಗಳು, ವಿಸ್ಮಯಕಾರಿ ಶತ್ರುಗಳ ಕಣ್ತಪ್ಪಿಸುವ ಗೋಡೆಗಳು, ಅಲ್ಲಲ್ಲಿ ಪಾಳು ಬಿದ್ದಿದ್ದರೂ ಎದ್ದು ಕಾಣುವ ವಸತಿ ಸಮುಚ್ಛಯದ ಬುನಾದಿಗಳು, ಆಡಳಿತಾತ್ಮಕ ವ್ಯವಹಾರದ ಹಜಾರಗಳು, ದೇವಸ್ಥಾನಗಳು ಮತ್ತು ಎರಡೂ ಕಣ್ಮನ ಸೆಳೆಯುವ ಗುಡ್ಡದಂಚಿನ ಕೋಟೆಗಳು ಸಾವಿರ ಅಡಿ ಎತ್ತರದ ತುದಿಯಲ್ಲಿದ್ದರೂ ಒಮ್ಮೆ ಉಸಿರುಗಟ್ಟಿ ಮೇಲಕ್ಕೇರಿ ನಿಂತಾಗ ಹೊರಡುವ ಸಣ್ಣ ಯಶಸ್ಸು ಎಲ್ಲ ಆಯಾಸ ಹಾರಿಸಿ ಬಿಡುತ್ತದೆ. ರಾಜಮಾಚಿ ನಿಜಕ್ಕೂ ರಮಣೀಯ.