Monday, 6th January 2025

ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆ

ಹರಪನಹಳ್ಳಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಜೆಡಿಎಸ್ ಮತ್ತು ಬಿಜೆಪಿ ಮೂವತ್ತಕ್ಕೂ ಹೆಚ್ಚು ಕಾರ್ಯಕರ್ತರು ನಮ್ಮ ಪಕ್ಷದ ಬಾವುಟ ಹಿಡಿದು ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆ ಯಾದರು.

ತಾಲೂಕಿನ ಕಂಚಿಕೇರಿ ಗ್ರಾಮದ ಗುಡ್ಡದ ಕೋಡಿ ಶಿದ್ದೇಶ್ವರ ಸಮುದಾಯ ಭವನದಲ್ಲಿ ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾ ಧ್ಯಕ್ಷ ಶಂಕರನಹಳ್ಳಿ ಡಾ.ಉಮೇಶ್ ಬಾಬು ಅವರ ನೇತೃತ್ವದಲ್ಲಿ ಕಂಚಿಕೇರಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಕೇರಿ, ಅಳಿಗಂಚಿ ಕೇರಿ, ಬೆಂಡಿಗೇರಿ, ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ಸೇರ್ಪಡೆಯಾದರು.

ಈ ವೇಳೆ ಡಾ.ಶಂಕರನಹಳ್ಳಿ ಉಮೇಶ್ ಬಾಬು ಮಾತನಾಡಿ ಕೇಂದ್ರ, ಮತ್ತು ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಬೇಸತ್ತು ಇಂದು ಸುಮಾರು ಮೂವತ್ತಕ್ಕೂ ಹೆಚ್ಚು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ ನಮ್ಮ ಪಕ್ಷಕ್ಕೆ ಸೇರ್ಪಡೆ ಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಬಲ ಹೆಚ್ಚಾಗಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಇದು ಸಹಕಾರಿ ಯಾಗಲಿದೆ ಎಂದರು.

ಬಿಜೆಪಿ ಚುನಾವಣೆಗೂ ಮುನ್ನ ನೀಡಿದ ಭರವಸೆಗಳು ಇಡೇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಹೊರದೇಶದಲ್ಲಿರು ಕಾಂಗ್ರೆಸ್ ನಾಯಕರ ಕಪ್ಪು ಹಣವನ್ನು ತಂದು ಜನ್‌ಧನ್ ಖಾತೆಗೆ ಹದಿನೈದು ಲಕ್ಷ ರೂ ಹಾಕುತ್ತೇನೆ ಎಂದು ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದು ಇದುಯವರೆಗೂ ನಯಾ ಪೈಸೆ ಹಾಕಿಲ್ಲ. ಯುವಕರಿಗೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದು ಹೇಳಿ ಅಗ್ನಿಪಥ್ ಯೋಜನೆಯ ಮೂಲಕ ಯುವಕರನ್ನು ಕಡೆಗಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಿಜೆಪಿಯಿಂದ ದೇಶದ ಅಭಿವೃದ್ಧಿ ಕುಂಟಿತವಾಗಿದ್ದು ಬರೀ ಶಾಸಕರನ್ನು ಖರೀದಿ ಮಾಡುವ ಬ್ರೊಕರ್‌ಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದೆ. ಶಾಸಕ ಜಿ.ಕರಣಾಕರರೆಡ್ಡಿ ಅವರು ಕರೋನಾ ಸಮಯದಲ್ಲಿ ಜನರ ಬಳಿ ಬರದೆ ಬಳ್ಳಾರಿ ನಿವಾಸದಲ್ಲಿದ್ದು ಕೊಂಡು ಜನರಿಗೆ ಕಣ್ಣು ವರೆÀಸುವ ತಂತ್ರ ಮಾಡಿತ್ತಾ ಕಾಲಹರಣ ಮಾಡಿದ್ದಾರೆ ಇಂತಹ ಶಾಸಕರು ಹರಪನಹಳ್ಳಿಯ ಜನತೆಗೆ ಬೇಕಾ ಹಾಗಾಗಿ ಮುಂದಿನ ವಿಧನಾ ಸಭಾ ಚುನಾವಣೆಯಲ್ಲಿ ಸ್ಥಳಿಯ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಈ ಕ್ಷೇತ್ರದಲ್ಲಿ ಹೋರಗಿನವರೇ ಶಾಸಕರಾಗುತ್ತಿದ್ದಾರೆ ಆದರೆ ಸ್ಥಳೀಯರು ಯಾರು ಇಲ್ಲಿ ಗಂಡಸರಿಲ್ಲವಾ ಎಂದು ಪ್ರಶ್ನಿಸಿದ ಉಮೇಶ್ ಬಾಬು ಅವರು ತಾಲೂಕಿನ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯರಿಗೆ ಆಧ್ಯತೆ ನೀಡಿ ಹೊರಗಿನವರಿಗೆ ತಕ್ಕ ಪಾಠ ಕಲಿಸಿ ಸ್ಥಳೀಯ ಸೂಕ್ತ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಹಳ್ಳಿಕೇರಿ ರಾಹುಲ್ ಮಾತನಾಡಿ ನಾನು ಕಳೆದ ಹತ್ತು ವರ್ಷಗಳಿಂದ ಶಾಸಕ ಜಿ.ಕರುಣಾಕರರೆಡ್ಡಿ ಅವರಿಗೆ ಬೆಂಬಲಿಸಿಕೊAಡು ಬರುತ್ತಿದ್ದೆ ಆದರೆ ಬಿಜೆಪಿಯಿಂದ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಟಿತವಾಗಿದ್ದು ಮತ್ತು ಶಾಸಕ ಕರುಣಾಕರರೆಡ್ಡಿ ಅವರ ದುರಾಡಳಿತಕ್ಕೆ ಬೇಸತ್ತು ಸ್ಥಳೀಯರಾದ ಶಂಕರನಹಳ್ಳಿ ಉಮೇಶ್ ಬಾಬು ಅವರು ಕರೋನ ಸಮಯದಲ್ಲಿ ಮಾಡಿದ ಜನಸೇವೆ ಮೆಚ್ಚಿ ಇಂದು ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವುದರ ಜೊತೆಗೆ ಹಲವು ಮುಖಂಡರನ್ನು ಕರೆ ತಂದಿದ್ದೇನೆ ಮುಂದಿನದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು.

ಈ ಸಂದರ್ಭದಲ್ಲಿ ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಅತೀ ಹೆಚ್ಚು ಅಂಕ ಪಡೆದ ಕೊಟ್ಟೂರಿನ ಹಿಂದೂ ಕಾಲೇಜಿನ ವಿದ್ಯಾರ್ಥಿಗೆ ಸನ್ಮಾನಿಸಲಾಯಿತು. ಮುಖಂಡರಾದ ರಾಜು ಶಂಕರನಹಳ್ಳಿ, ರವಿ ಯು ಬಾಬು, ಗಣೇಶ್, ಕರಿಬಸಪ್ಪ, ಮಂಜು ನಾಥ್, ನಿಂಗರಾಜ್, ಹನುಮಂತಪ್ಪ, ಸಾರತಿ ಮಂಜಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.