ಶಾಸಕರ ಅನುದಾನದಲ್ಲಿ ಬಸ್ ಖರೀದಿ: ವಿದ್ಯಾರ್ಥಿಗಳ ಸೆಳೆಯಲು ಹೊಸ ಯೋಜನೆ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಅನೇಕರಿಗೆ ಅಚ್ಚರಿಯಾಗುವಂತೆ ರಾಜ್ಯ ಸರಕಾರ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ.
ಇನ್ನು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಮನೆಯ ಮುಂದೆ ಶಾಲಾ ವಾಹನ ಬರುವಂತೆ, ಸರಕಾರಿ ಶಾಲೆಗಳ ಮಕ್ಕಳಿಗೂ ವ್ಯವಸ್ಥೆ ಮಾಡಲಾಗುತ್ತದೆ. ಹೌದು, ತಮ್ಮದೇ ಆದ ಸ್ವಂತ ವಾಹನಗಳ ಖರೀದಿಗೆ ಸರಕಾರಿ ಶಾಲೆಗಳಿಗೆ ರಾಜ್ಯ ಸರಕಾರ ಒಪ್ಪಿಗೆ ನೀಡಿದ್ದು, ಇದಕ್ಕೆ ತಗಲುವ ಅನುದಾನವನ್ನು ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಿಂದ ಭರಿಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ರಾಜ್ಯ ಸರಕಾರದಿಂದ ಈಗಾಗಲೇ ಆದೇಶ ಹೊರಟಿದ್ದು, ಯಾವ ರೀತಿಯ ವಾಹನ, ನಿರ್ವಹಣೆ ಹೇಗೆ ಎನ್ನುವ ಬಗ್ಗೆ ಶೀಘ್ರವೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸ ಲಿದೆ ಎಂದು ತಿಳಿದುಬಂದಿದೆ. ವಾಹನ ಖರೀದಿಸಿದ ಬಳಿಕ ಅವುಗಳ ನಿರ್ವಹಣೆಗೆ ಸ್ಥಳೀಯ ಎಸ್ಡಿಎಂಸಿ ಅನುದಾನ ಬಳಸಿಕೊಂಡು ಡಿಸೇಲ್, ಚಾಲಕರಿಗೆ ವೇತನ, ವಾಹನಗಳ ನಿರ್ವಹಣೆ ವೆಚ್ಚ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಆದರೆ, ವಾಹನಗಳನ್ನು ನಿರ್ವಹಣೆ ಮಾಡುವಷ್ಟು ಅನುದಾನ ಎಸ್ಡಿಎಂಸಿ ಬಳಿಯಿರುವುದಿಲ್ಲ ಎನ್ನುವ ತಕರಾರರನ್ನು ಕೆಲವರು ಎತ್ತಿದ್ದಾರೆ.
ಮಕ್ಕಳ ಸಂಖ್ಯೆ ನೋಡಿ ನಿರ್ಧಾರ: ಯಾವ ರೀತಿಯ ವಾಹನವನ್ನು ಖರೀದಿಸಬೇಕು ಎನ್ನುವುದನ್ನು ಶಾಲೆಯಲ್ಲಿರುವ ವಿದ್ಯಾರ್ಥಿಗಳ
ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ. ಕಡಿಮೆ ಮಕ್ಕಳಿರುವ ಕಡೆಯಲ್ಲಿ ಚಿಕ್ಕ ವಾಹನ, ಹೆಚ್ಚು ವಿದ್ಯಾರ್ಥಿಗಳಿಗೆ ಬಸ್ ಖರೀದಿ
ಮಾಡುವ ಲೆಕ್ಕಾಚಾರದಲ್ಲಿ ಇಲಾಖೆ ಇದೆ. ಶಾಸಕರು ತಮ್ಮ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಖರೀದಿಸಬಹುದು ಎಂದು
ಅಽಕಾರಿಗಳು ಹೇಳಿದ್ದಾರೆ. ಈ ಸುತ್ತೋಲೆ ಈಗಷ್ಟೇ ಬಿಡುಗಡೆಯಾಗಿದ್ದು, ಯಾವ ರೀತಿಯಲ್ಲಿ ಇರಬೇಕು ಎನ್ನುವುದನ್ನು ಮುಂದಿನ
ಕೆಲವೇ ತಿಂಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಲಾಗಿದೆ.
ಸರಕಾರಿ ಶಾಲೆಗೂ ಹೈಟೆಕ್ ಸ್ಪರ್ಶ: ಸರಕಾರದ ಈ ತೀರ್ಮಾನದಿಂದ ಸರಕಾರಿ ಶಾಲೆಗಳಿಗೂ ಹೈಟೆಕ್ ಸ್ಪರ್ಶ ಬಂದಿದೆ ಎನ್ನುವ
ಮಾತುಗಳು ಕೇಳಿಬರುತ್ತಿದೆ. ಅನೇಕ ಪೋಷಕರು, ತಮ್ಮ ಮಕ್ಕಳು ವಾಹನಗಳಲ್ಲಿಯೇ ಶಾಲೆಗಳಿಗೆ ಹೋಗಬೇಕು ಎನ್ನುವ ಮನಸ್ಥಿತಿ ಯಲ್ಲಿರುವುದರಿಂದ, ಖಾಸಗಿ ಶಾಲೆಗೆ ಕಳಿಸುತ್ತಾರೆ. ಸರಕಾರಿ ಶಾಲೆಗಳಿಗೂ ವಾಹನಗಳ ಸೌಲಭ್ಯವನ್ನು ಒದಗಿಸಿದರೆ, ಸರಕಾರಿ ಶಾಲೆಗಳತ್ತ ಒಲವು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ವಾಹನ ಖರೀದಿಸಿದ ಬಳಿಕ ಅವುಗಳ ನಿರ್ವಹಣೆಗೆ ಸ್ಥಳೀಯ ಎಸ್ಡಿಎಂಸಿ ಅನುದಾನ ಬಳಸಿಕೊಂಡು ಡಿಸೇಲ್, ಚಾಲಕರಿಗೆ ವೇತನ, ವಾಹನಗಳ ನಿರ್ವಹಣೆ ವೆಚ್ಚ ನಿರ್ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಆದರೆ, ವಾಹನಗಳನ್ನು ನಿರ್ವಹಣೆ ಮಾಡುವಷ್ಟು ಅನುದಾನ ಎಸ್ಡಿಎಂಸಿ ಬಳಿಯಿರುವುದಿಲ್ಲ ಎನ್ನುವ ತಕರಾರರನ್ನು ಕೆಲವರು ಎತ್ತಿದ್ದಾರೆ.
ಮಕ್ಕಳ ಸಂಖ್ಯೆ ನೋಡಿ ನಿರ್ಧಾರ: ಯಾವ ರೀತಿಯ ವಾಹನವನ್ನು ಖರೀದಿಸಬೇಕು ಎನ್ನುವುದನ್ನು ಶಾಲೆಯಲ್ಲಿರುವ ವಿದ್ಯಾರ್ಥಿಗಳ
ಆಧಾರದ ಮೇಲೆ ತೀರ್ಮಾನಿಸಲಾಗುತ್ತದೆ. ಕಡಿಮೆ ಮಕ್ಕಳಿರುವ ಕಡೆಯಲ್ಲಿ ಚಿಕ್ಕ ವಾಹನ, ಹೆಚ್ಚು ವಿದ್ಯಾರ್ಥಿಗಳಿಗೆ ಬಸ್ ಖರೀದಿ
ಮಾಡುವ ಲೆಕ್ಕಾಚಾರದಲ್ಲಿ ಇಲಾಖೆ ಇದೆ. ಶಾಸಕರು ತಮ್ಮ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಖರೀದಿಸಬಹುದು ಎಂದು
ಅಧಿಕಾರಿಗಳು ಹೇಳಿದ್ದಾರೆ. ಈ ಸುತ್ತೋಲೆ ಈಗಷ್ಟೇ ಬಿಡುಗಡೆಯಾಗಿದ್ದು, ಯಾವ ರೀತಿಯಲ್ಲಿ ಇರಬೇಕು ಎನ್ನುವುದನ್ನು ಮುಂದಿನ
ಕೆಲವೇ ತಿಂಗಳಲ್ಲಿ ತೀರ್ಮಾನಿಸಲಾಗುವುದು ಎಂದು ಹೇಳಲಾಗಿದೆ.
ಸರಕಾರಿ ಶಾಲೆಗೂ ಹೈಟೆಕ್ ಸ್ಪರ್ಶ: ಸರಕಾರದ ಈ ತೀರ್ಮಾನದಿಂದ ಸರಕಾರಿ ಶಾಲೆಗಳಿಗೂ ಹೈಟೆಕ್ ಸ್ಪರ್ಶ ಬಂದಿದೆ ಎನ್ನುವ
ಮಾತುಗಳು ಕೇಳಿಬರುತ್ತಿದೆ. ಅನೇಕ ಪೋಷಕರು, ತಮ್ಮ ಮಕ್ಕಳು ವಾಹನಗಳಲ್ಲಿಯೇ ಶಾಲೆಗಳಿಗೆ ಹೋಗಬೇಕು ಎನ್ನುವ ಮನಸ್ಥಿತಿ ಯಲ್ಲಿರುವುದರಿಂದ, ಖಾಸಗಿ ಶಾಲೆಗೆ ಕಳಿಸುತ್ತಾರೆ. ಸರಕಾರಿ ಶಾಲೆಗಳಿಗೂ ವಾಹನಗಳ ಸೌಲಭ್ಯವನ್ನು ಒದಗಿಸಿದರೆ, ಸರಕಾರಿ ಶಾಲೆಗಳತ್ತ ಒಲವು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಮಾದರಿ ಶಾಲೆಗಳಿಗೆ ಬಸ್
ಬಸ್ಗಳನ್ನು ರಾಜ್ಯದಲ್ಲಿರುವ ಎಲ್ಲ ಶಾಲೆಗಳಿಗೆ ಖರೀದಿಸುವ ಬದಲು, ಹೋಬಳಿ ಮಟ್ಟದಲ್ಲಿರುವ ಮಾದರಿ ಶಾಲೆಗಳಿಗೆ ಖರೀದಿಸಿ, ಅಲ್ಲಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಮಕ್ಕಳನ್ನು ಕರೆದುಕೊಂಡು ಬರುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ. ಪ್ರಾಥಮಿಕ ಹಂತದಲ್ಲಿ ಈ
ರೀತಿ ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಯೋಜನವೇನು?
? ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೆ ಹೊಸ ಆಕರ್ಷಣೆ
? ಖಾಸಗಿ ಶಾಲಾ ಮಕ್ಕಳಂತೆ ಸರಕಾರಿ ಶಾಲಾ ಮಕ್ಕಳ ಮನೆ ಮುಂದೆ ಬಸ್
? ಸರಕಾರಿ ಶಾಲಾ ಮಕ್ಕಳಲ್ಲಿ ಇರುವ ಕೀಳರಿಮೆ ಹೊಗಲಾಡಿಸಲು ಅನುಕೂಲ
? ದೂರದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರ ಆತಂಕ ದೂರ
? ಗ್ರಾಮೀಣರು ಕೂಲಿ, ರೈತಾಪಿ ಪೋಷಕರ ಬಹುದೊಡ್ಡ ಸಮಸ್ಯೆಗೆ ಪರಿಹಾರ