Sunday, 15th December 2024

17,092 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢ

#corona

ನವದೆಹಲಿ: ದೇಶದಲ್ಲಿ ಶನಿವಾರ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 17,092 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 17,092 ಮಂದಿಗೆ ಹೊಸದಾಗಿ ಕರೋನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ ಸೋಂಕಿನಿಂದ 29 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕರೋನಾ ಮಹಾ ಮಾರಿಗೆ ಬಲಿಯಾದವರ ಸಂಖ್ಯೆ 525168 ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 17,092 ಹೊಸ ಪ್ರಕರಣಗಳು, 14,684 ಚೇತರಿಕೆಗಳು ಮತ್ತು 29 ಸಾವುಗಳು ವರದಿಯಾಗಿವೆ.