Monday, 6th January 2025

ಪೂರ್ವ ಲಿಬಿಯಾದ ಸಂಸತ್‌ ಭವನಕ್ಕೆ ಬೆಂಕಿ

ಟ್ರಿಪೋಲಿ: ಸರ್ಕಾರದ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು ‌ಪೂರ್ವ ಲಿಬಿಯಾದ ಟೊಬ್ರೂಕ್‌ನಲ್ಲಿರುವ ಸಂಸತ್‌ ಭವನಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಸಂಸತ್‌ ಭವನದ ಕಡೆಗೆ ಮೆರವಣಿಗೆ ಹೊರಟಿದ್ದ ಪ್ರತಿಭಟನಾ ಕಾರರನ್ನು ತಡೆಯ ಲಾಗಿದೆ. ಈ ವೇಳೆ, ಭದ್ರತಾ ಸಿಬ್ಬಂದಿ ವಿರುದ್ಧ ರೊಚ್ಚಿಗೆದ್ದ ಪ್ರತಿಭಟನಾ ಕಾರರು ಸಂಸತ್‌ ಭವನಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.

ಟ್ರಿಪೋಲಿ, ಟೊಬ್ರೂಕ್‌ ಸೇರಿದಂತೆ, ಲಿಬಿಯಾದ ಇತರ ನಗರಗಳಲ್ಲಿ ಸರ್ಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಲಾಗಿದೆ. ಸಂಸತ್ತಿನ ಕಟ್ಟಡ ಮೇಲೆ ದಾಳಿ ಮಾಡಿರುವುದನ್ನು ವಿಶ್ವಸಂಸ್ಥೆ ಖಂಡಿಸಿದೆ.

ಶಾಂತಿಯುತವಾಗಿ ಪ್ರತಿಭಟಿಸುವ ಜನರ ಹಕ್ಕನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು. ಆದರೆ, ಗಲಭೆಗಳು ಮತ್ತು ವಿಧ್ವಂಸಕ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.