Monday, 25th November 2024

18,930 ಹೊಸ ಕೋವಿಡ್ ಪ್ರಕರಣ ದೃಢ

covid

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 18,930 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ.

35 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,35,66,739ಕ್ಕೆ ಏರಿಕೆಯಾಗಿದೆ. ಇದುವರೆಗೆ 4,29,21,977 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 1,19,457 ಸಕ್ರಿಯ ಪ್ರಕರಣಗಳಿದ್ದು, ದೈನಂದಿನ ಪಾಸಿಟಿವಿಟಿ ದರ ಶೇ 4.32 ರಷ್ಟಿದೆ.

ಕೇರಳದಲ್ಲಿ 30,169, ಮಹಾರಾಷ್ಟ್ರದಲ್ಲಿ 19,981, ತಮಿಳುನಾಡಿನಲ್ಲಿ 17,717, ಪಶ್ಚಿಮ ಬಂಗಾಳದಲ್ಲಿ 14,270, ಕರ್ನಾಟಕದಲ್ಲಿ 6,481 ಸಕ್ರಿಯ ಪ್ರಕರಣಗಳಿವೆ. ದೇಶದಾದ್ಯಂತ ಒಟ್ಟು 198.33 ಕೋಟಿ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ.