Monday, 25th November 2024

ಸಾರ್ವತ್ರಿಕ ಚುನಾವಣೆ ಮೀರಿಸುವಂತೆ ನಡೆದ ಶಾಲಾ ಸಂಸತ್ ಚುನಾವಣೆ

ಕೊಲ್ಹಾರ: ಪ್ರಜಾಪ್ರಭುತ್ವದಲ್ಲಿ ಚುನಾವಣೆ ಹಾಗೂ ಮತದಾನದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳಲು ಸರ್ವ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ಹಮ್ಮಿ ಕೊಳ್ಳುವುದು ಹಾಗೂ ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಹಾಗೂ ಮತದಾನದ ಮಹತ್ವ ತೀಳಿಸುವುದು ಸರ್ವೆ ಸಾಮಾನ್ಯ. ಆದರೆ ಕೊಲ್ಹಾರ ತಾಲ್ಲೂಕಿನ ಮುಳವಾಡ ಗ್ರಾಮದ ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯು ವಿಶೇಷವಾಗಿ ಇ.ವಿ.ಎಂ ಮಷೀನ್ ಮಾದರಿ ಪ್ಯಾಡ್ ನಲ್ಲಿ ವೋಟಿಂಗ್ ಮಷೀನ್ ಮೂಲಕ ಮತದಾನ ಮಾಡುವ ಮೂಲಕ ಸಾರ್ವತ್ರಿಕ ಚುನಾವಣೆ ಮೀರಿಸುವಂತೆ ಚುನಾವಣಾ ಪ್ರಕ್ರಿಯೆಗಳು ನಡೆದವು ಒಟ್ಟು ಹತ್ತು ಹುದ್ದೆಗಳ ಪೈಕಿ ಒಂಬತ್ತು ಹುದ್ದೆಗಳು ಅವಿರೋಧ ವಾಗಿ ಆಯ್ಕೆಯಾಗಿ, ಪ್ರಧಾನ ಮಂತ್ರಿ ಹುದ್ದೆಗೆ ಮಾತ್ರ ವಿದ್ಯಾರ್ಥಿಗಳಲ್ಲಿ ಭಾರಿ ಪೈಪೋಟಿ ಕಂಡುಬಂತು.

ಹಾಗಾಗಿ ಇ.ವಿ.ಎಂ ಯಂತ್ರದ ಮೂಲಕ ಪ್ರಧಾನಮಂತ್ರಿ ಹುದ್ದೆಗೆ ಚುನಾವಣೆ ನಡೆಸ ಲಾಯಿತು. ಎಂಟು ಅಭ್ಯರ್ಥಿಗಳು ಪ್ರಧಾನ ಮಂತ್ರಿ ಹುದ್ದೆಗೆ ಸ್ಪರ್ಧಿಸಿದ್ದರು ಈ ಚುನಾ ವಣೆಯಲ್ಲಿ ಶೇಕಡಾ ೯೫ ರಷ್ಟು ಮತದಾನವಾಗಿ ೮೬ ಮತಗಳನ್ನು ಪಡೆದ ೭ನೇ ತರಗತಿಯ ವಿದ್ಯಾರ್ಥಿ ಕಿರಣ ಜಗಲಿ ಪ್ರಧಾನ ಮಂತ್ರಿ ಹುದ್ದೆಗೆ ಆಯ್ಕೆಯಾದನು.

ಚುನಾವಣಾ ಅಧಿಕಾರಿಯಾಗಿ ಎಸ್.ಎಂ ಗವೂರ , ಮೇಲ್ವಿಚಾರಕರಾಗಿ ಚಾಂದಬಿ ಬಿಜಾಪುರ್, ಟಿ.ವಿ ಮಲಗೊಂಡ, ಎಸ್.ಎಮ್ ಕತ್ನಳ್ಳಿ , ಪಿ,ಓ ಗಳಾಗಿ ಎಸ್.ಎಸ್ ಶಾಬಾದಿ, ಪಿ.ಎನ್ ಹೆಗಡಿಹಾಳ, ಚುನಾವಣಾ ಅಧಿಕಾರಿಗಳಾದ ಎಸ್ ಎಂ ಗವೂರ ಹಾಗೂ ಬಸವನ ಬಾಗೇವಾಡಿಯ ನೂತನ ಬಿ.ಆರ್.ಪಿ. ಎಸ್ ಎಂ ಪಾಟೀಲ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ಆಯ್ಕೆಯಾದಂತಹ ವಿದ್ಯಾರ್ಥಿಗೆ ಪ್ರಮಾಣ ಪತ್ರ ,ಹೂ ಗುಚ್ಚವನ್ನ ನೀಡಿ ಅಭಿನಂಧಿಸಿದರು ಮಕ್ಕಳು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಂತೋಷ ಪಟ್ಟರು.