ರೋಹಿತ್ ರಂಜನ್ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿ ತಕ್ಷಣವೇ ಪ್ರಕರಣದ ವಿಚಾರಣೆ ಕೋರಿದ್ದರು. ರಜೆ ಪೀಠದ ನ್ಯಾ.ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಗುರುವಾರ ವಿಚಾರಣೆಗೆ ಪಟ್ಟಿ ಮಾಡಿತ್ತು.
ಪ್ರಕರಣದ ವಿಚಾರಣೆಯ ಹಂಚಿಕೆಯನ್ನು ಮುಖ್ಯನ್ಯಾಯಾಧೀಶರು ಮಾಡಬೇಕಾಗುತ್ತದೆ ಎಂದು ನ್ಯಾ.ಜೆ.ಕೆ ಮಹೇಶ್ವರಿ ಅವರೂ ಇದ್ದ ಪೀಠ ಹೇಳಿತ್ತು”.
ಸುದ್ದಿ ವಾಚಕ ರೋಹಿತ್ ರಂಜನ್ ಪರ ಹಾಜರಾದ ಹಿರಿಯ ಅಡ್ವೊಕೇಟ್ ಸಿದ್ಧಾರ್ಥ್ ಲೂಥ್ರಾ, ಈ ಹಿಂದೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಲಾಗಿತ್ತು. ಆದ್ದರಿಂದ ಶುಕ್ರವಾರ ಯಾವುದಾದರೂ ಪೀಠಕ್ಕೆ ಈ ಪ್ರಕರಣದ ವಿಚಾರಣೆ ವಹಿಸ ಬೇಕೆಂದು ಮನವಿ ಮಾಡಿದ್ದಾರೆ.
ಮನವಿಗೆ ಸ್ಪಂದಿಸಿದ ನ್ಯಾಯಾಲಯ, ಪ್ರಕರಣದ ಪೇಪರ್ ಗಳು ಸಿಜೆಐ ಬಳಿ ಇದೆ. ನಾಳೆ ಪ್ರಕರಣದ ವಿಚಾರಣೆ ನಿಗದಿ ಪಡಿಸು ವುದು ಸಿಜೆಐ ಅವರ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿರುತ್ತದೆ ಎಂದು ಪೀಠ ಹೇಳಿದೆ.