ಅಲೆಮಾರಿಯ ಡೈರಿ
mehandale100@gmail.com
ರೈತರು ಬೆಳೆಯನ್ನು ಹೆದ್ದಾರಿ ಬಾಗಿಲಿಗೆ ಗುಂಪಾಗಿ ಸೇರಿಸಿಟ್ಟು ಅಲ್ಲಿಯೇ ಮಲಗಿ ಬಿಡುತ್ತಾರೆ. ಲಾರಿಗಳ ಮೂಲಕ ಮಧ್ಯವರ್ತಿ ಗಳು ಅಲ್ಲಿಯೇ ಹಣ ಏಣಿಸಿ ಎತ್ತಿಕೊಂಡು ಹೋಗುತ್ತಾರೆ. ಜತೆಗೆ ಬೇಕಾದಷ್ಟು ತಂಬಾಕು ಎಲೆ ಮತ್ತು ಬೀಡಿ ಪೂರೈಕೆಯೂ ಆಗುತ್ತದೆ ಇನ್ನೇನು ಬೇಕಿದೆ?
ಪರ್ವತದ ಇಳಿಜಾರಿನಲ್ಲಿ ಬೇರೆ ವ್ಯವಸಾಯಕ್ಕೆ ಏಗಲಾಗದೆ ಕೈಗೆ ಸಿಕ್ಕ, ಬೆಳೆ ಬೆಳೆದರೆ ಇರಲಿ ಎಂದು ಕಸಿ ಮಾಡಿದ್ದ ಬೀಜಗಳನ್ನು ಅದೂ ಸಾಮಾನು ಪೂರೈಸುವ ಟ್ರಕ್ ಡ್ರೈವರ್ನೊಬ್ಬ ನೀಡಿದ್ದ ಕಾರಣ ರೈತನೊಬ್ಬ ಗುಡ್ಡದ ಬುಡಕ್ಕೆ ಸುರಿದಿದ್ದ. ಕೇವಲ ಬಟಾಟೆ ಮತ್ತು ಅನಾಮತ್ತಾಗಿ ಎಂದರಲ್ಲಿ ಬಿಸಾಕಿದರೂ ಬೆಳೆಯುತ್ತಿದ್ದ ಅನಾನಸು ಬಿಟ್ಟರೆ, ಬಿದಿರು ಬೆಳೆ ಮಾತ್ರ ವ್ಯವಹಾರ ಮಾಡಿ ರೋಸಿ ಹೋಗಿದ್ದ ಕಾಲದಲ್ಲಿ ಅವನ ಕೈಗೆ ಒಂದು ಹಿಡಿ ಬೀಜ ಸಿಕ್ಕಿತ್ತು.
ಅಂದ ಹಾಗೆ ಅಲ್ಲ ಟ್ರಕ್ ಡ್ರೈವರ್ಗಳೇ ಸಕಲ ಕಾರ್ಯಕ್ಕೂ ಅನಿವಾರ್ಯ. ಕಾರಣ ಪ್ರತಿ ಯೊಂದು ವಸ್ತು ಕೊನೆಗೆ ಉಪ್ಪು ಸಹಿತ ಎಲ್ಲ ಮೇಲೇರಿ ಬರುವುದೇ ಟ್ರಕ್ಕುಗಳ ಮೂಲಕ ಮತ್ತು ಪೆಟ್ರೋಲ್ ವಾಹನಗಳ ಮೂಲಕ. ಹಾಗಾಗಿ ಕೆಳಗಿನಿಂದ ಹೊರಡುವ ಪ್ರತಿ ತೈಲ ವಾಹನಗಳ ಡೀಟೈಲ್ ಇಲ್ಲಿ ಒಳನಾಡ ಜನರ ಬಳಿ ಇರುತ್ತದೆ. ಕಾರಣ ತೈಲದ ಜತೆ ಜನರ ಅಗತ್ಯಗಳನ್ನು ಪೂರೈಸುವ ಇವರಿಗೆ ಪ್ರತಿಯಾಗಿ ಊಟ, ಸ್ನಾನಕ್ಕೆ ಜಾಗ ಮತ್ತು ನೆಮ್ಮದಿ ನಿzಗೂ ಆಯ ದಕ್ಕುತ್ತದೆ.
ಅಷ್ಟೇ ಒಂದು ಮಳೆಗಾಲ ಕಳೆಯುವಷ್ಟರ ಎರಡೂವರೆ ಅಡಿ ಬೆಳೆದು ನಿಂತಿದ್ದ ಅಪರೂಪದ ಜಾತಿಯ ಮರವಾಗುವ ಲಕ್ಷಣ ಇದ್ದ ಗಿಡ ಆ ಭಾಗದ ಜನರ ಭಾಗ್ಯ ಬದಲಾಯಿಸಲಿದೆ ಎಂದು ಆವತ್ತಿಗೆ ಗೊತ್ತಿರಲಿಕ್ಕಿಲ್ಲ. ಅದರೆ ಜಾಗರೂಕವಾಗಿ ಅದನ್ನು ಬೆಳೆಸಿದ ರೈತನಿಗೆ ಮೊದಲ ವರ್ಷವೇ ಬಂಪರ್ ಲಾಭ ಬಂದುಬಿಟ್ಟಿತ್ತು. ಮೈ ತುಂಬ ರಂಗುಬಿರಂಗಿ ಕಿತ್ತಳೆ ನೇತಾಡುತ್ತಿದ್ದವು.
ರೈತನಿಗೆ ನೆನಪಾಗಿ ಟ್ರಕ್ ಡ್ರೈವರ್ ಪೂರೈಸಿದ್ದ ಮೂಲ ಹಿಡಿದು ಹೋಗಿ ಮರು ವರ್ಷ ಮತ್ತೆ ಇನ್ನಿಷ್ಟು ಬೀಜ ಬಿಸಾಕಿದ. ಅರ್ಧ ದಶಕದ ಅವಧಿಯಲ್ಲಿ ಅವನ ಅರ್ಧ ಜಮೀನು ಪೂರ್ತಿ ಹೊಸತಳಿಗೆ ಮೀಸಲಾಗುವುದರೊಂದಿಗೆ, ಮುಂದಿನ ಎರಡೇ ದಶಕದ ಅವಧಿಯಲ್ಲಿ ಜಿಲ್ಲೆಯ ಒಳನಾಡು ಪೂರ್ತಿ ಅದೇ ಆವರಿಸಿಕೊಂಡಿತ್ತು. ನೋಡು ನೋಡುತ್ತಿದ್ದಂತೆ ಸ್ಥಳೀಯ ಆಡಳಿತ ಎಚ್ಚೆತ್ತು ಕೊಂಡು ಅದಕ್ಕೆ ಪ್ರೊತ್ಸಾಹ ನೀಡತೊಡಗಿ ಕೊನೆಗೆ ಪೂರ್ತಿ ರಾಜ್ಯದ ಜಿಲ್ಲೆ ತೆಂಮೇನ್ ಗ್ಲಾಂಗ್ ಕಿತ್ತಳೆ ಜಿಲ್ಲೆಯಾಗಿ ಗುರುತಿಸ ಲ್ಪಟ್ಟಿತು.
ಇಲ್ಲಿ ರೈತರೆಂದರೆ ಬುಡಕಟ್ಟುಗಳ, ಸಂಪ್ರದಾಯ ಬದ್ಧ ರೈತರ, ಆಯಾ ಸಮುದಾಯವಾರು ಗುಂಪುಗಳ ಜಿಲ್ಲೆ. ಹೆಸರಿಗೆ ಪೊಲೀಸು ಮತ್ತು ಜಿಽಕಾರಿ ವ್ಯವಸ್ಥೆಗಳಿವೆ ಯಾದರೂ ಈಗಲೂ ಸಂಜೆಯ ಐದಕ್ಕೆ ಊರ ಹೊರಗಿನ ಕಮಾನಿಗೆ ಬೋರ್ಡ್ ತಗುಲಿಸಿ ಟೋಲ್ಗೇಟ್ ಮಾದರಿ ಕಂಬ ಎಳೆದುಬಿಡುತ್ತಾರೆ. ಸಂಜೆಯ ನಂತರ ಊರು ಪ್ರವೇಶಿಸಿದರೆ ನಿಮ್ಮ ನಿಮ್ಮ ಜವಾಬ್ದಾರಿ ಎಂದು ಹೆದ್ದಾರಿ ಮೇಲೆ ತಿರುಗುವ ಮೊದಲೇ ಪೋಲಿಸರು ಕೈತೊಳೆದುಕೊಂಡು ಬಿಟ್ಟಿರುತ್ತಾರೆ.
ಹಾಗೊಮ್ಮೆ ಸ್ಥಳೀಯ ದುಭಾಶಿ ಕಮ್ ಗೈಡ್ ಓನಿಲ್ ಜತೆಗೆ ಯಾಂಗ್ಖುನ್ ಹತ್ತಿರ ಹಳ್ಳಿಯೊಂದನ್ನು ಪ್ರವೇಶಿಸಿ, ಆಮೇಲೆ ರಾತ್ರಿಯಿಡಿ ಅವರ ನಿಗಾದಲ್ಲಿ ಸಣ್ಣ ಶಾಲೆಯ ಕಟ್ಟೆಯ ಮೇಲೆ ನಾನು ರಾತ್ರಿಗಳೆದದ್ದು ಬೇರೆ ಕತೆ. ಅದಿನ್ನೊಮ್ಮೆ ಹೇಳುತ್ತೇನೆ.
ತೆಂಮೇನ್ಗ್ಲಾಂಗ್ ಜಿಲ್ಲೆಯ ಊರೂರಿಗೆ ದುಡ್ಡು ದುಗ್ಗಾಣಿ ಮಾಡಿಕೊಳ್ಳಲು ಅವಕಾಶ ಕೊಟ್ಟ ಕಿತ್ತಳೆ ಕ್ರಮೇಣ ಊರವರ ನಸೀಬು ಬದಲಾಯಿಸಿತು. ವಾರಕ್ಕೊಮ್ಮೆ ಬರುತ್ತಿದ್ದ ಟ್ರಕ್ಕು ಈಗ ದಿನಕ್ಕೊಮ್ಮೆ ಬಂದು ಒಯ್ಯತೊಡಗಿದವು.
ಮೊದಲೆಲ್ಲ ಬಟಾಟೆಗೂ ಅನಾನಸ್ಸಿಗೂ ದಿಕ್ಕು ತಪ್ಪುತ್ತಿದ್ದ ಬೆಲೆಯ ಏರಿಳಿತ ಇಲ್ಲವೇ ಇಲ್ಲ. ಜನ ಗುಬುರುಗುಬುರಾಗಿ ಬಿಟ್ಟರು. ಲೆಕ್ಕತಪ್ಪಿ ಕಂಡ ಕಂಡ ಪರ್ವತದ ಸೆರಗಿನಿಂದ ಇದ್ದಬದ್ದ ಕಣಿವೆಯ ಸಂದುಗಳಲ್ಲ ಬಿಡದೆ ಕಿತ್ತಳೆ ಕಸಿಯಾಗಿ ಹೋಯಿತು ನೋಡಿ. ಊರೆಲ್ಲ ಕೇಸರಿಮಯ. ಮನೆ ಮನೆಯೂ ಘಮಘಮ. ಬರೀ ಸುಮ್ಮನೆ ಉಸಿರೆಳೆದುಕೊಂಡರೂ ತಂಬಾಕಿನ ಘಾಟಿಗೆ ಅಮೇಲೇರುವಂತಿದ್ದ ಹವೆಯಲ್ಲಿಗ ಕಿತ್ತಳೆ ಘಮಲು. ಒಂದು ಹಣ್ಣು ಜಿಯ ಹಣೆ ಬರಹ ಬದಲಾಯಿಸಿತ್ತು. ಇವತ್ತು ಈಶಾನ್ಯ ರಾಜ್ಯಗಳ ಅತಿ ಹೆಚ್ಚು ಕಿತ್ತಳೆ ಬೆಳೆಯುವ ಮತ್ತು ರಫ್ತಿಗೂ ಕಳಿಸುವ ಜಿಲ್ಲೆ ತೆಂಮೇನ್ ಗ್ಲಾಂಗ್. ಮಣಿಪುರದ ವಿಭಿನ್ನತೆಯ ಮಧ್ಯೆ ಕಿತ್ತಳೆ ಕೃಷಿ ಜನರ ಬದುಕು ಬದಲಾಯಿಸಿತು.
ಇವತ್ತಿಗೂ ಸಕಲ ಸಂಪ್ರದಾಯ ಮಡಿವಂತಿಕೆ ಎಂದು ಬಡಿದಾಡುತ್ತಲೇ ಇರುವ ಬುಡಕಟ್ಟುಗಳು ಈ ವಿಷಯದಲ್ಲಿ ಮಾತ್ರ ಸಂಪೂರ್ಣ ಐಕ್ಯಮತ. ವರ್ಷಗಳು ಉರುಳಿದಂತೆ ಕಿತ್ತಳೆಗೆ ವಾಣಿಜ್ಯಾತ್ಮಕ ರೂಪ ದೊರಕಿ, ಕಿತ್ತಳೆ ಸುಂದರಿಯಾಗಿ ಆಯ್ಕೆ ಯಾಗಲು ಪೈಪೋಟಿಗೆ ಬೀಳುವ ಮಟ್ಟಕ್ಕೆ ಇಲ್ಲಿನ ಜನರ ಬದುಕು ಬದಲಾಯಿಸಿ ಬಿಟ್ಟಿದೆ. ಕಾರಣ ವರ್ಷಕ್ಕೊಮ್ಮೆ ಆಯೋಜಿಸು ತ್ತಿರುವ ಕಿತ್ತಳೆ ಹಬ್ಬ.
ತೆಂಮೇನ್ಗ್ಲಾಂಗ್ ಜಿಲ್ಲೆಯ ಅದ್ಭುತ ಮತ್ತು ಅಪರೂಪದ ಹಬ್ಬ ಹಾಗೂ ಪ್ರವಾಸಿ ಆಕರ್ಷಣೆಯಾಗಿ ಬೆಳೆದಿರುವುದು ‘ಆರೇಂಜ್ ಫೆಸ್ಟಿವಲ್’ ಎಂದೇ ಇದು ಹೆಸರುವಾಸಿ. ಮಣಿಪುರದ ಕಿತ್ತಳೆಯ ಕಣಜ ಎಂದೇ ತೆಂಮೇನ್ಗ್ಲಾಂಗ್ ಅನ್ನು ಕರೆಯಲಾಗುತ್ತಿದ್ದು, ಶೇ.೮೦ರಷ್ಟು ಕಿತ್ತಳೆಯ ಬೆಳೆಯನ್ನು ಕೇವಲ ತೆಂಮೇನ್ಗ್ಲಾಂಗ್ ಜಿಲ್ಲೆ ಪೂರೈಸುತ್ತಿದೆ. ಕನಿಷ್ಠ ನಾಲ್ಕರಿಂದ ಐದು ಲಕ್ಷ ಕಿತ್ತಳೆ ಗಿಡಗಳನ್ನು ಪ್ರತಿವರ್ಷ ಪೋಷಿಸಲಾಗುತ್ತಿದೆ.
ಪ್ರತಿ ಮನೆಯ ಅಂಗಳ ಹಿತ್ತಲಿನಲ್ಲಿ ಕಿತ್ತಳೆಯ ಗಿಡವನ್ನು ನೆಡುವ ಮತ್ತು ಪೋಷಿಸುವ ಜನರು ಪ್ರತಿ ಮನೆಯಲ್ಲೂ ಕನಿಷ್ಠ ಮೂರ್ನಾಲ್ಕು ಗಿಡಗಳನ್ನು ಸಾಕುತ್ತಿದ್ದಾರೆ. ಮೊದಲಿಗೆ ಕೇವಲ ಪ್ರಯೋಗಾತ್ಮಕವಾಗಿ ತೆಂಮೇನ್ ಗ್ಲಾಂಗ್ ಜಿಲ್ಲೆಯಲ್ಲಿ ಮಾತ್ರ 2011ರಲ್ಲಿ ಕಿತ್ತಳೆ ಉತ್ಸವ ಆಯೋಜಿಸಲಾಗಿತ್ತು. ಅಪರೂಪದಲ್ಲಿ ಅಪರೂಪದ ತಳಿಗಳಿಂತ ಹಿಡಿದು ಎಲ್ಲ ರೀತಿಯ ಕಿತ್ತಳೆಗಳು ಬಣ್ಣ ಕಟ್ಟಿಕೊಂಡು ಇಲ್ಲಿ ಮಾರುಕಟ್ಟೆಗೆ ಬಂದಿಳಿದವು. ಜನ ಎಲ್ಲಿಂದಲೋ ಕಿತ್ತಳೆ ನೋಡುವುದಕ್ಕಾಗೇ ಬಂದರು. ಬಂದವರು ಕೈಗೆ ದಕ್ಕಿದಷ್ಟು ಕಿತ್ತಳೆ ಜತೆಗೆ ತರಹೇವಾರಿ ಐಡಿಯಾಗಳನ್ನೂ ಹೊತ್ತೊಯ್ದರು.
ಮರುವರ್ಷ ಮತ್ತೆ ಬಂದರು ನೋಡಿ. ಆಡಳಿತಕ್ಕೆ ಸಂಭಾಳಿಸುವುದೇ ಕಷ್ಟವಾಗಿ ಹೋಗಿತ್ತು. ಅಷ್ಟೆ ಮತ್ತೆ ತೆಂಮೇನ್ ಗ್ಲಾಂಗ್ ಹಿಂದಿರುಗಿ ನೋಡಲಿಲ್ಲ. ಮರುವರ್ಷವೇ ಅದು ರಾಜ್ಯವ್ಯಾಪಿ ಉತ್ಸವವಾಗಿ ಬದಲಾಯಿತು. 2012ರಿಂದ ಇಲ್ಲಿಯವರೆಗೆ ಅದರ ವ್ಯಾಪ್ತಿ ಯಾವ ಮಟ್ಟದಲ್ಲಿ ಬೆಳೆದಿದೆ ಎಂದರೆ ಈ ಬಾರಿ ಮಣಿಪುರ ಸರಕಾರ ಸ್ವತಃ ಅದನ್ನು ವಿದೇಶಿ ಆಕರ್ಷಣೆಯ ಮೇಳವಾಗಿಸಿ ಪ್ರವಾಸೋದ್ಯಮವನ್ನಾಗಿಯೂ ವಿಸ್ತರಿಸಿತು. ಈಗ ಪ್ರತಿ ವರ್ಷ ಮುಖ್ಯಮಂತ್ರಿಯ ಅನುಮತಿ ಮತ್ತು ಲಭ್ಯತೆ ಇಲ್ಲದೆ ಕಿತ್ತಳೆ ಹಬ್ಬ ಆರಂಭವಾಗುವುದೇ ಇಲ್ಲ.
ಅದ್ಭುತ ಎನ್ನುವಂತಹ ಪ್ರವಾಸಿ ಬೆಳೆಯಾಗಿ, ವಾಣಿಜ್ಯ ಬೆಳೆಯಾಗಿ ಕಿತ್ತಳೆ ಮಣಿಪುರಿಗಳ ಬದುಕನ್ನೇ ಬದಲಾಯಿಸಿದ್ದಿದೆ. ಹಬ್ಬಕ್ಕೊಮ್ಮೆ ಪ್ರತಿ ತಾಲೂಕಿನ ಒಬ್ಬೊಬ್ಬ ಬೆಳೆಗಾರ ಲಕ್ಷ ರುಪಾಯಿಯ ಬಹುಮಾನ ಪಡೆಯುತ್ತಿದ್ದಾರೆ. ಪ್ರತಿವರ್ಷ ಜಿಲ್ಲೆಯ ಲೊಂಗಾಮೈ ಕ್ರೀಡಾಂಗಣದಲ್ಲಿ ಈ ಉತ್ಸವ ಆಯೋಜಿಸಲಾಗುತ್ತಿದ್ದು ಪ್ರವಾಸಿಗಳು ಡಿಸೆಂಬರ್ನ ಭಾಗದಲ್ಲಿ ಆ ಕಡೆ ಸಂಚರಿಸು ವಂತಿದ್ದರೆ ಇದು ಲಭ್ಯವಾಗುತ್ತದೆ. ಏನಿಲ್ಲವೆಂದರೂ ಸುಮಾರು ಹದಿನೈದು ದಿನಗಳ ಕಾಲ ಉತ್ಸವ ನಡೆಯುತ್ತಿದ್ದು ಈ ಪ್ರಯುಕ್ತ ಸೌಂದರ್ಯ ಸ್ಪರ್ಧೆ / ಕ್ರೀಡಾ ಸ್ಪರ್ಧೆ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮಗಳೂ ನಡೆಯುತ್ತಿದ್ದು ಬರುಬರುತ್ತ ಕಿತ್ತಳೆ ಉತ್ಸವ ಹೊಸ ಹೊಸ ರೂಪಗಳನ್ನು ಪಡೆಯುತ್ತಿದೆ.
ಉತ್ಸವ ಅಧಿಕೃತ ಹದಿನೈದೇ ದಿನವಿದ್ದರೂ ಪ್ರವಾಸಿ ಕಾರ್ಯಕ್ರಮವಾಗಿ ಮಾರ್ಪಟ್ಟಿರುವುದರಿಂದ ತಿಂಗಳು ಪೂರ್ತಿ ಕಿತ್ತಳೆ ಸಡಗರ ನಡೆದೇ ಇರುತ್ತದೆ. ಇತ್ತಿಚೆಗೆ ದೇಶಾದ್ಯಂತ ಮಾತ್ರವಲ್ಲ ವಿದೇಶಿ ಪ್ರವಾಸಿಗರು ಡಿಸೆಂಬರ್ ಅವಧಿಯ ಈ ಕಾರ್ಯಕ್ರಮ ವನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ತೆಂಮೇನ್ಗ್ಲಾಂಗ್ ಸ್ವರೂಪವೇ ಬದಲಾಗುತ್ತಿದೆ. ಸುತ್ತಲಿನ ಪ್ರವಾಸಿ ತಾಣಕ್ಕಿಂತ
ಇಲ್ಲಿಗೆ ತಲುಪುವ ರಸ್ತೆಯ ಪಯಣವೇ ಚೆಂದ. ಪ್ರತಿ ಹಳ್ಳಿಗಳ ಜನರು ಮುಖ್ಯರಸ್ತೆಗೆ ತಂತಮ್ಮ ಬೆಳೆಯನ್ನು ತಲುಪಿಸಿ ಕೈತೊಳೆ ದುಕೊಳ್ಳುತ್ತಾರೆ.
ಅಲ್ಲಿಂದ ಇಂಫಾಲದ ವ್ಯಾಪಾರಿಗಳು ಸಾಗಿಸಿಕೊಳ್ಳುತ್ತಾರೆ. ಹಾಗಾಗಿ ಹೊರ ಜಗತ್ತಿಗೆ ಇವರು ತೆರೆದುಕೊಳ್ಳುವುದೇ ಇಲ್ಲ. ಹಾಗೆ ಸ್ಥಳೀಯರು ಹೊರಗಿನ ವ್ಯವಹಾರಸ್ಥ ಪ್ರಪಂಚಕ್ಕೆ ತೆರೆದುಕೊಳ್ಳುವುದು, ತಂತಮ್ಮ ಲಾಭದ ಪಾಲು ಕಡಿಮೆಯಾಗುವುದೂ ಮಧ್ಯವರ್ತಿ ವ್ಯಾಪಾರಿಗಳಿಗೂ ಬೇಡ. ಹೆಚ್ಚಿನ ರೈತರು ಬೆಳೆಯನ್ನು ಹೆzರಿ ಬಾಗಿಲಿಗೆ ಗುಂಪಾಗಿ ಸೇರಿಸಿಟ್ಟು ಅಲ್ಲಿಯೇ ಮಲಗಿ ಬಿಡುತ್ತಾರೆ. ಲಾರಿಗಳ ಮೂಲಕ ಮಧ್ಯವರ್ತಿಗಳು ಅಲ್ಲಿಯೇ ಹಣ ಏಣಿಸಿ ಎತ್ತಿಕೊಂಡು ಹೋಗುತ್ತಾರೆ.
ಜತೆಗೆ ಬೇಕಾದಷ್ಟು ತಂಬಾಕು ಎಲೆ ಮತ್ತು ಬೀಡಿ ಪೂರೈಕೆಯೂ ಆಗುತ್ತದೆ ಇನ್ನೇನು ಬೇಕಿದೆ? ಲ್ಲಿಗೆ ಚೆಂದದ ತೆಂಮೇನ್ಗ್ಲಾಂಗ್ ಹೇಗಿದೆಯೋ ಹಾಗೆ ಇದೆ. ಬಹುಶಃ ನಾನು ಇನ್ನೊಂದು ದಶಕ ನಂತರ ಕಾಲಿಟ್ಟರೂ ಹೆಚ್ಚು ಬದಲಾವಣೆ ಬಂದೀತು ಎಂದು ನನಗನ್ನಿಸುವುದಿಲ್ಲ. ಹಾಗಾಗಿ ಯಾವ ಬೆಳೆಗೆ ಎಲ್ಲಿ ಏನು ಸಿಗುತ್ತಿದೆ ಎನ್ನುವುದು ಅರಿವಾಗದ ಸ್ಥಿತಿಯನ್ನು ಸದ್ಯ ಕೃಷಿ ಮಾರುಕಟ್ಟೆ
ಹೋಗಲಾಡಿಸುತ್ತಿದೆ.
ಹೆಚ್ಚಿನ ಯೋಚನೆಗೆ ಎಡೆ ಕೊಡದೆ, ಕಿತ್ತಳೆ ಹಬ್ಬ ಕಣ್ತುಂಬಿಕೊಂಡು, ಆವತ್ತಿನ ರಾತ್ರಿಯೂ ಅಲ್ಲೇ ವಸತಿಯಾಗುವುದನ್ನು
ತಪ್ಪಿಸಲು ನಾನು ಪಕ್ಕದ ಸೇನಾಪತಿ ಜಿಗೆ ಹಿಂದಿರುಗಿದ್ದೆ. ಕಾರಣ ಇಲ್ಲಿಂದ ಇಂಫಾಲ ಹಾಯ್ದು ಮೇಲಕ್ಕೇರುವುದರ ಬದಲಿಗೆ ಅಡ್ಡದಾರಿಯಲ್ಲಿ, ಒಂದೆರಡು ಹಾಡಿಗಳ ಬಳಸು ದಾರಿಯಲ್ಲಿ ಕೊಂಚ ಅಪಾಯ ಎದುರಿಸಿ ನುಗ್ಗಿದರೆ ನೇರ ಉಕ್ರುಲ್ನ ಹೆಬ್ಬಾಲಿಗೆ ಸ್ಟ್ಯಾಂಡು ಹಾಕಬಹುದು.
ದಾರಿ ತೋರಿಸುವ ಥರೇನ್ ಯಾವ ಮುಲಾಜೂ ಇಲ್ಲದೆ ಕಾಲೆತ್ತಿ ಕೂತು ಬಿಡುತ್ತಿದ್ದ. ಮತ್ತೆ ಯೋಚಿಸದೆ ಹಾಗೆ ಮೂರುವರೆ
ತಾಸು ಗಾಡಿ ಓಡಿಸಿಕೊಂಡು ಕಾಲಿಟ್ಟಿದ್ದು ಕೊನೆಯ ಅದರೆ ಚೆಂದದ ಅನ್ನಿಸುವ ಇದ್ದುದರಲ್ಲಿ ಕೊಂಚ ಸುಧಾರಿಸಿದ್ದ ಜಿಲ್ಲೆ
ಉಖ್ರುಲ್ಗೆ. ಅದರ ಕತೆ ಇನ್ಯಾವಗಲಾದರೂ ಬರೆದೇನು.