ಒಂದಷ್ಟು ಹೊಸಬರೇ ಸೇರಿ ನಿರ್ಮಿಸಿ, ನಿರ್ದೇಶಿಸಿರುವ ವಿಭಿನ್ನ ಶೀರ್ಷಿಕೆಯ ತೂತು ಮಡಿಕೆ ಸಿನಿಮಾ ರಾಜ್ಯಾದ್ಯಂತ
ಬಿಡುಗಡೆ ಯಾಗಿದೆ.
ಪೋಸ್ಟರ್, ಟ್ರೇಲರ್ ಹಾಡುಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ತೂತುಮಡಿಕೆ, ಬಿಡುಗಡೆಗೂ ಮೊದಲೇ ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕು ಉತ್ತಮ ಮೊತ್ತಕ್ಕೆ ಮಾರಾಟ ವಾಗಿವೆ. ಹಾಗಾಗಿಯೇ ಸಿನಿಮಾ ಕುತೂಹಲ ಕೆರಳಿದಿದೆ. ಚಿತ್ರದಲ್ಲಿ ಏನೋ
ಹೊಸತನ ವಿರುವುದು ಖಚಿತವಾಗಿದೆ. ರಂಗಭೂಮಿ ಕಲಾವಿದ ಚಂದ್ರಕೀರ್ತಿ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ತೂತು ಮಡಿಕೆ ಎಂದಾಕ್ಷಣ ಇದು ಕಾಮಿಡಿ ಕಥೆಯ ಸಿನಿಮಾವೇ ಎಂಬುದು ಮನದಟ್ಟಾ ಗುತ್ತದೆ. ಅಂದುಕೊಂಡಂತೆ ಇದು ಹಾಸ್ಯಮಯ ಕಥೆಯ ಸಿನಿಮಾವಾಗಿದೆ. ಜತೆಗೆ ಥ್ರಿಲ್ಲರ್ ಸ್ಟೋರಿಯೂ ತೆರೆಯಲ್ಲಿ ಸಾಗುತ್ತದೆ. ಎಲ್ಲರಿಗೂ ಅನ್ವಯವಾಗುವ ಸಂದೇಶ ತೂತು ಮಡಿಕೆಯಲ್ಲಿ ಅಡಕವಾಗಿದೆ. ಅದೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಚಂದ್ರಕೀರ್ತಿ.
ಅತಿ ಆಸೆ ಗತಿಗೇಡು
ಜೀವನದಲ್ಲಿ ಆಸೆಯಿರಬೇಕು ನಿಜ ಆದರೆ ಅತಿಯಾಸೆ ಪಟ್ಟರೆ ಏನಾಗುತ್ತದೆ ಎಂಬುದೇ ಚಿತ್ರದ ಸಾರಾ. ಅದನ್ನು ನೇರವಾಗಿ ಹೇಳಲು ರುಚಿಸುವುದಿಲ್ಲ ಎಂಬ ಕಾರಣಕ್ಕೆ ಒಂದಷ್ಟು ಕಾಮಿಡಿ ಹಾಗೂ ಥ್ರಿಲ್ಲರ್ ಅಂಶ ಗಳನ್ನು ಹದವಾಗಿ ಬೆರೆಸಿ, ಅದೆಲ್ಲವನ್ನು ತೂಡು ಮಡಿಕೆಯ ಮೂಲಕ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಇಬ್ಬರು ಹುಡುಗಾಟದ ಹುಡುಗರು ಉತ್ತಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅಡ್ಡ ದಾರಿ ಹಿಡಿದಾಗ ಏನಾಗುತ್ತದೆ ಎಂಬುದನ್ನು ಎಲ್ಲರ ಮನ ಮುಟ್ಟವಂತೆ ಇಲ್ಲಿ ಹೇಳಲಾಗಿದೆ.
ದೊಡ್ಡ ತಾರಾಬಳಗ
ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಪ್ರಮೋದ್ ಶೆಟ್ಟಿ, ನಂದಗೋಪಾಲ್, ಚಂದ್ರಕೀರ್ತಿ, ಉಗ್ರಂ, ಗಿರಿ ಶಿವಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಂದ್ರಕೀರ್ತಿಗೆ ಜೋಡಿಯಾಗಿ ಪಾವನಾ ಗೌಡ ನಟಿಸಿದ್ದಾರೆ. ಪ್ರಮೋದ್ ಸೂತ್ರಧಾರನಾದರೆ, ಉಗ್ರಂ ಮಂಜು ಖದರ್ ಖಳನಾಗಿ ಕಾಣಿಸಿಕೊಂಡಿದ್ದಾರೆ. ಸರ್ವತ ಸಿನಿ ಗ್ಯಾರೇಜ್ ಮತ್ತು ಸ್ಪ್ರೆಡಾನ್ ಸ್ಟುಡಿಯೋ ಬ್ಯಾನರ್‌ನಲ್ಲಿ ಚಿತ್ರ
ನಿರ್ಮಾಣವಾಗಿದೆ. ನವೀನ್ ಚಲ್ಲ ಛಾಯಾಗ್ರಾಹಣ, ಉಜ್ವಲ್ ಚಂದ್ರ ಸಂಕಲನ ಈ ಸಿನಿಮಾಕ್ಕಿದೆ.
***
ಸಿನಿಮಾ ಅಂದುಕೊಂಡಂತೆ ಮೂಡಿಬಂದಿದೆ. ಎರಡೂವರೆ ವರ್ಷದಿಂದ ರಿಲೀಸ್‌ಗಾಗಿ ಕಾಯುತ್ತಿದ್ದೆವು. ಆ ಸುದಿನ ಈಗ ಬಂದಿದೆ. ಪ್ರೇಕ್ಷಕರು ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡಬೇಕು ಎಂಬುದು ನಮ್ಮ ಇಡೀ ಚಿತ್ರತಂಡದ ಕನಸಾಗಿತ್ತು. ಅದಕ್ಕಾಗಿಯೇ ಇಷ್ಟು ದಿನ ಕಾದಿದ್ದೆವು. ಅಂತೂ ಚಿತ್ರ ರಾಜ್ಯಾದ್ಯಂತ ತೆರೆಗೆ ಬಂದಿದೆ. ಪ್ರೇಕ್ಷಕರು ಖಂಡಿತಾ ನಮ್ಮ ಚಿತ್ರದ ಕೈಹಿಡಿಯುತ್ತಾರೆ ಎಂಬ ಭರವಸೆ ಇದೆ.
-ಚಂದ್ರಕೀರ್ತಿ ನಿರ್ದೇಶಕ
ತೂತು ಮಡಿಕೆಗೆ ಬಿಡುಗಡೆಗೂ ಮೊದಲೇ ಬೇಡಿಕೆ ಹೆಚ್ಚಿದೆ. ರಿಲೀಸ್ ಗೂ ಮೊದಲೇ ಒಟಿಟಿಗೆ ಒಳ್ಳೆಯ ಬೆಲೆಗೆ ಮಾರಾಟವಾಗಿದೆ. ಆದರೂ ನಮ್ಮ ಚಿತ್ರವನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ಮೊದಲು ಕಣ್ತುಂಬಿಕೊಳ್ಳಬೇಕು ಎಂಬುದು ನಮ್ಮ ಹೆಬ್ಬಯಕೆ ಯಾಗಿತ್ತು. ಅಂತೆಯೇ ಸಿನಿಮಾವನ್ನು ಬೆಳ್ಳಿತೆರೆಯಲ್ಲಿಯೇ ಬಿಡುಗಡೆ ಮಾಡುತ್ತಿದ್ದೇವೆ.
-ಶಿವಕುಮಾರ್ ನಿರ್ಮಾಪಕ