Friday, 22nd November 2024

ಅಮರನಾಥ ಬಳಿ ಮೇಘಸ್ಫೋಟ: ಮೃತರ ಸಂಖ್ಯೆ 16ಕ್ಕೇರಿಕೆ

ನವದೆಹಲಿ/ಶ್ರೀನಗರ: ಜಮ್ಮು-ಕಾಶ್ಮೀರದ ಪವಿತ್ರ ಅಮರನಾಥ ಗುಹೆಯ ಬಳಿ ಮೇಘಸ್ಫೋಟದಿಂದ ಪ್ರವಾಹಕ್ಕೆ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೇರಿದೆ. 15 ಸಾವಿರ ಯಾತ್ರಿಕರನ್ನು ಪಂಜತರ್ನಿ ಮೂಲ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಗಡಿ ಭದ್ರತಾ ಪಡೆಯ ವಕ್ತಾರ ಈ ಕುರಿತು ಮಾಹಿತಿ ನೀಡಿ, ಬಲ್ತಲ್ ಗೆ 16 ಮೃತದೇಹಗಳನ್ನು ರವಾನಿಸಲಾಗಿದೆ. ತನ್ನ ಮಾರ್ಗ ವನ್ನು ಐಟಿಬಿಪಿ ವಿಸ್ತರಿಸಿದ್ದು ಪಂಜತರ್ನಿಯವರೆಗೆ ಪವಿತ್ರ ಗುಹೆಯ ಕೆಳಭಾಗದಿಂದ ಕಳುಹಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

ಜೂನ್ 30ರಂದು ಆರಂಭವಾಗಿದ್ದ ಪವಿತ್ರ ಅಮರನಾಥ ಯಾತ್ರೆ ನಂತರ ದುರಂತ ನಂತರ ಸ್ಥಗಿತಗೊಂಡಿತ್ತು.

16 ಮಂದಿ ಯಾತ್ರಿಕರು ಮೃತಪಟ್ಟಿದ್ದಾರೆ. ಇನ್ನೂ 40 ಮಂದಿ ಕಾಣೆಯಾಗಿದ್ದಾರೆ. ಮಳೆ ಸುರಿದಿಲ್ಲ, ರಕ್ಷಣಾ ಕಾರ್ಯ ನಿರಾತಂಕ ವಾಗಿ ಸಾಗುತ್ತಿದೆ. 4 ಎನ್ ಡಿಆರ್ ಎಫ್ ತಂಡ 100ಕ್ಕೂ ಹೆಚ್ಚು ಮಂದಿ ರಕ್ಷಣಾ ಕಾರ್ಯಕರ್ತರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ.