ಬೆಂಗಳೂರು: ಅಮರನಾಥ ಗುಹೆಯ ಬಳಿ ಶುಕ್ರವಾರ ಸಂಜೆ ಮೇಘ ಸ್ಫೋಟ ಉಂಟಾಗಿದ್ದು, ತೀರ್ಥಯಾತ್ರೆಗೆ ತೆರಳಿದ್ದ ಭಕ್ತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದ ಯಾತ್ರಾರ್ಥಿಗಳು ಸಿಲುಕಿದ್ದು, ಅವರ ಸಹಾಯಕ್ಕೆ ಸರ್ಕಾರ ಸಹಾಯವಾಣಿ ಆರಂಭಿಸಿದೆ.
ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ದಯವಿಟ್ಟು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಿ. 080-1070, 22340676, ಇಮೇಲ್: incomedmkar@gmail.com
ಮೇಘಸ್ಫೋಟದಿಂದ ಉಂಟಾದ ಭಾರೀ ಪ್ರಮಾಣದ ಪ್ರವಾಹ ಭಕ್ತರು ವಾಸ್ತವ್ಯ ಹೂಡಿದ್ದ ಟೆಂಟ್‌ಗಳು ಮತ್ತು ಸಮುದಾಯ ಅಡುಗೆ ಮನೆಯತ್ತ ನುಗ್ಗಿ ಬಂದಿದೆ. ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಸದ್ಯಕ್ಕೆ ಸ್ಥಗಿತ ಗೊಳಿಸ ಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೇತೃತ್ವದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರೆಣೆ ನಡೆಸಲಾಗುತ್ತಿದೆ.
ಸಹಾಯವಾಣಿಯ ವಿವರ:
ಎನ್.ಡಿ.ಆರ್.ಎಫ್: 011-23438252, 011-23438253
ಕಶ್ಮೀರ್ ಡಿವಿಷನಲ್ ಹೆಲ್ಪ್ ಲ್ಲೈನ್: 0914- 2496240
ದೇವಸ್ಥಾನ ಮಂಡಳಿಯ ಸಹಯಾವಾಣಿ: 0194-2313149
ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ : 080-1070, 22340676
ಸಹಾಯವಾಣಿ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸಲಿದೆ.
ಮೇಘಸ್ಪೋಟದಿಂದ ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆಯಲ್ಲಿ 12 ಯಾತ್ರಿಗಳು ಮೃತ ಪಟ್ಟಿರುವ ಘಟನೆ ತೀವ್ರ ಆಘಾತಕಾರಿಯಾಗಿದೆ. ದೇವರು ಅಗಲಿದ ಆತ್ಮಗಳಿಗೆ ಶಾಂತಿ ಕರುಣಿಸಲಿ, ಅವರ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇ