Friday, 22nd November 2024

ರಸ್ತೆಯೋ, ಕೆಸರಗದ್ದೆಯೋ? ನರಕಯಾತನೆ ಅನುಭವಿಸುತ್ತಿರುವ ಸಾರ್ವಜನಿಕರು

ಇಂಡಿ: ಸರಕಾರ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ ಎಂದು ಪುಂಕಾನುಪು0ಕವಾಗಿ ಹೇಳಿದ್ದೆ ಹೇಳಿದ್ದು ಆದರೆ ತಾಂಡಾ ಕಂದಾಯ ಗ್ರಾಮಗಳು ಮಾಡುವುದರ ಅರ್ಥ ತಾಂಡಾಗಳಿಗೆ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶವಾಗಿದೆ. ಆದರೆ ಪಟ್ಟಣದ ವಿಜಯಪೂರ ರಸ್ತೆಯ ೨೪*೦೭ ನೀರು ಸರಬರಾಜು ಟ್ಯಾಂಕ ಹತ್ತಿರ ಮದ್ದನ ತಾಂಡಾದ ನಿವಾಸಿಗಳು ಆದಿವಾಸಿಗಳಂತೆ ಜೀವನಸಾಗಿಸುತ್ತಿದ್ದಾರೆ. ಮಳೆಗಾಲ ಬಂದರೆ ಸಾಕು ಇಲ್ಲಿನ ರಸ್ತೆಗಳು ಕೆಸರಿನ ಗದ್ದೆಯಂತಾಗಿ ಸಾರ್ವ ಜನಿಕರು. ವಿಧ್ಯಾರ್ಥಿಗಳು , ತಾಂಡಾವಾಸಿಗಳು ನರಕಯಾತೆ ಅನುಭವಿಸು ವಂತಾಗಿದೆ.

ಮದ್ದನ ತಾಂಡಾ ವಾರ್ಡ ನಂಬರ್ ೨೨ ರಲ್ಲಿ ಬರುತ್ತದೆ. ಮದ್ದನ ತಾಂಡಾಕ್ಕೆ ಪ್ರಮುಖವಾಗಿ ಎರಡು ರಸ್ತೆಗಳು ಹಾದು ಹೋಗು ತ್ತವೆ. ಮಹಾವೀರ ವೃತ್ತದಿಂದ ಹಳೆಯ ಬೋಳೆಗಾಂವ ರಸ್ತೆ. ಇನ್ನೊಂದು ವಿಜಯಪೂರ ಮಖ್ಯ ರಸ್ತೆ ಅಂದರೆ ೨೪*೦೭ ನೀರಿನ ಟ್ಯಾಂಕನಿ0ದ ಹಳೆಯ ಬೋಳೆಗಾಂವ್ ರಸ್ತೆ ಸೇರಿಕೊಳ್ಳುತ್ತದೆ.

ಈ ರಸ್ತೆಗಳ ಮೂಲಕ ಚಲಿಸುತ್ತಾ ಸಾಗಿದರೆ ಕೆ.ಇ.ಬಿ ತಾಂಡಾ , ಗಣಪತಿ ನಗರ, ಸಿದ್ದಲಿಂಗೇಶ್ವರ ನಗರ, ಮದ್ದನ ತಾಂಡಾ, ಓಂಕಾರಾಶ್ರದ ಶ್ರೀಸಿದ್ದಾರೂಢಮಠ, ಆದರ್ಶ ಶಾಲೆ, ಮೋನಪ್ಪ ನಗರ, ಬೋಳೆ ಗಾಂವ್ ಗ್ರಾ, ತಡವಲಗಾ ಗ್ರಾಮ ಹೀಗೆ ನೂರಾರು ಜನಜಂಗುಳಿ ದಿನನಿತ್ಯೆ ಅಲೇದಾಡುತ್ತಿರುವುದರಿಂದ ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಾಗಿ ಸಾರ್ವಜನಿಕರು ತಾಂಡಾ ನಿವಾಸಿಗಳು ಹಾಗೂ ಅದರ್ಶ ಶಾಲೆ ವಿಧ್ಯಾರ್ಥಿಗಳು, ವಾಹನಗಳ ಸವಾರರು ,ಶ್ರೀಸಿದ್ದಾರೋಢ ಮಠಕ್ಕೆ ಹೋಗುವ ಭಕ್ತಾದಿಗಳು ಬೀಳುತ್ತಾ ಎಳುತ್ತಾ ಎನಾಗಲಿ ಮಂದೆ ಸಾಗು ನೀ ಎನ್ನುವಂತ ಪರಸ್ಥಿತಿ ನಿರ್ಮಾಣವಾಗಿದೆ.

***

ಮಹಾವೀರ ವೃತ್ತದಿಂದ ಬೋಳೆಗಾಂವ್ ರಸ್ತೆ ಇಂದು ಸಾಕಷ್ಟು ಜನಸಂಪರ್ಕ ಇದೆ. ಮುಖ್ಯ ರಸ್ತೆಯಲ್ಲಿ ವಾಹನಗಳ ಹಾವಳಿಗೆ ಅಂಜಿದ ವಯೋವೃದ್ದರು. ಮಹಿಳೆಯರು ಪಾದಾಚಾರಿಗಳು ಇಂದು ವಿಹಾರಕ್ಕೆ ಹಳೆಬೋಳೆಗಾಂವ ರಸ್ತೆಯ ಮೂಲಕ ವಾಕಿಂಗ್ ಮಾಡುತ್ತಾರೆ. ಈ ರಸ್ತೆಯ ಮೂಲಕ ನೂರಾರು ಆದರ್ಶ ಶಾಲೆ ,ವಸತಿ ನಿಲಯದ ವಿಧ್ಯಾರ್ಥಿಗಳು, ಸಿದ್ಧಾರೋಢ ಮಠದ ಭಕ್ತರು ಅಲೇದಾಡುತ್ತಾರೆ ಹೀಗಾಗಿ ಶಾಸಕ ಯಶವಂತರಾಯಗೌಡ ಪಾಟೀಲರ ಗಮನಕ್ಕೆ ತರುತ್ತೇನೆ. ಅನೇಕ ತಾಂಡಾಗಳು ಇರುವು ದರಿಂದ ಎಸ್.ಸಿ.ಪಿ, ಟಿ.ಎಸ್ .ಪಿ ಯೋಜನೆಯಡಿ ರಸ್ತೆ ಮಾಡಲು ಶಾಸಕರಿಗೆ ವಿನಂತಿಸುವದಾಗಿ ಹೇಳಿದರು.

ಮಾಜಿ ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ

ನಾನು ಅನೇಕ ಬಾರಿ ಪುರಸಭೆಯಲ್ಲಿ ಮದ್ದನ್ ತಾಂಡಾ ರಸ್ತೆಯ ಬಗ್ಗೆ ಹೇಳಿರುವೆ. ಅಭಿವೃದ್ದಿ ಹೊಂದಿಲ್ಲದ ವಾರ್ಡಗಳ ಬಗ್ಗೆ ಗಮನ ಹರಿಸುವುದಿಲ್ಲ. ನಾನು ೫-೬ ಟ್ರೀಪ್ ಮುರುಮ ರಸ್ತೆಗೆ ಹಾಕಿ ಪುಣ್ಯಕಟ್ಟಿಕೊಳ್ಳಿ ಎಂದರೂ ಕೂಡಾ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಹೋಗಲಿ ಒಂದೇರಡು ಎಲ್.ಈ ಡಿ ಬಲ್ಪ ಹಾಕಿ ಎಂದರೂ ನನ್ನ ಮಾತು ಕಿಂಚ್ಚಿತ್ತು ಕೇಳುತ್ತಿಲ್ಲ.
ಪುರಸಭೆ ಸದಸ್ಯ ಜಯರಾಂ ರಾಠೋಡ