Monday, 25th November 2024

ಕರೋನಾ: 16,678 ಹೊಸ ಪ್ರಕರಣಗಳು ಪತ್ತೆ

ನವದೆಹಲಿ: ದೇಶದಲ್ಲಿ ಕರೋನಾ ಪ್ರಕರಣಗಳ ಏರಿಕೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 16,678 ಹೊಸ ಪ್ರಕರಣಗಳು ಪತ್ತೆಯಾಗಿ, 26 ಸೋಂಕಿತರು ಮೃತಪಟ್ಟಿ ದ್ದಾರೆ.

ಒಟ್ಟಾರೇ 14,629 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 2,023 ಕೇಸ್ ಗಳು ಏರಿಕೆಯಾಗಿದ್ದು, ಒಟ್ಟಾರೇ ಗುಣಮುಖ ರಾದವರ ಸಂಖ್ಯೆ 4.29,83,162 ಆಗಿದೆ. ದೇಶದಲ್ಲಿ ಸದ್ಯ 1,30,713 ಕೋವಿಡ್-19 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ ಶೇ. 0.29 ರಷ್ಟು ಸಕ್ರಿಯ ಪ್ರಕರಣಗಳಿರುವುದಾಗಿ ಸಚಿವಾಲಯ ಹೇಳಿದೆ.

26 ಸೋಂಕಿತರು ಸಾವನ್ನಪ್ಪುವುದರೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 5,25,454ಕ್ಕೆ ಏರಿಕೆಯಾಗಿದೆ. ಐಸಿಎಂಆರ್ ನಿನ್ನೆ 2,78,266 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ಮಾಡಲಾಗಿದೆ. ಒಟ್ಟಾರೇ 198 ಕೋಟಿಗೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ.