Saturday, 23rd November 2024

ಶಿಕ್ಷಣದಿಂದ ಪ್ರಗತಿ ಸಾಧಿಸಲು ಸಾಧ್ಯ: ಸಮಾಜ ಸೇವಕ ರಾಮಚಂದ್ರಪ್ಪ

ಪಾವಗಡ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಶ್ರಮಿಸುವ ಅನಿವಾರ್ಯವಿದೆ ಎಂದು ಸಮಾಜ ಸೇವಕ ರಾಮಚಂದ್ರಪ್ಪ ತಿಳಿಸಿದರು.

ಮುಗದಾಳಬೆಟ್ಟ ಗ್ರಾಮದ ರಾಷ್ಟ್ರಪ್ರಗತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳ ವಿತರಣೆ ಮಾಡಿ ಮಾತನಾಡಿ ದರು. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆ ಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡಿ, ಹಲವು ರಂಗಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಮತ್ತು ಕ್ರಾಂತಿಗೆ ಸರ್ಕಾರ ವಿಶೇಷ ಯೋಜನೆಗಳನ್ನು ಜಾರಿ ಗೊಳಿಸಿ ಶ್ರಮಿಸಬೇಕಿದ್ದು ನಮ್ಮ ಗಡಿನಾಡಿ ನಲ್ಲಿ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಬೇಕಿದೆ ಎಂದರು.

ರಾಜ್ಯ, ದೇಶ ಸೇರಿದಂತೆ ವಿದೇಶಗಳಲ್ಲೂ ಗ್ರಾಮೀಣಿಗರದೇ ಮೇಲುಗೈ ಆಗಿದ್ದು ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉನ್ನತ ಉದ್ಯೋಗ ಗಳಿಸಿ ಮುನ್ನಡೆಯುತ್ತಿದ್ದಾರೆ. ಗಡಿನಾಡು ಪಾವಗಡ ತಾಲೂಕಿನಲ್ಲಿ ಪ್ರತಿಭೆಗಳಿಗೆ ಬರವಿಲ್ಲ, ಆದರೆ ಬಡತನ ಮತ್ತು ಸರ್ಕಾರದ ನಿರ್ಲಕ್ಷದಿಂದಾಗಿ ಯಾವುದೇ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ ಎಂದರು. ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿ ಸಲು ಮತ್ತು ಸ್ಪರ್ಧಾ ಮನೋಭಾವ ಬೆಳೆಸಲು ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಪುಸ್ತಕಗಳು ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸಲಾಗಿದೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡುವ ಹಂಬಲ ಹೊಂದಿದ್ದು ಜನರ ಸಲಹೆ ಮತ್ತು ಪ್ರೋತ್ಸಾಹ ನನಹ ಅನಿರ್ವಾಯವಾಗಿದೆ ಅ೦ದರು.

ಇದೇ ವೇಳೆ ರಾಷ್ಟ್ರಪ್ರಗತಿ ಶಾಲೆಯ ನೂರಾರು ಮಕ್ಕಳಿಗೆ ಉಚಿತವಾಗಿ ಶಾಲಾ ಪರಿಕರಗಳನ್ನು ಸಮಾಜ ಸೇವಕ ರಾಮಚಂದ್ರಪ್ಪ ವಿತರಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು.

ಸಂದರ್ಬದಲ್ಲಿ ರಾಷ್ಟ್ರಪ್ರಗತಿ ಶಾಲೆಯ ಅಧ್ಯಕ್ಷ ಡಿ.ರಾಮಯ್ಯ, ಮುಖ್ಯ ಶಿಕ್ಷಕ ಶಿವರಾಜು, ಶಿಕ್ಷಕರಾದ ಗೋವಿಂದ ರೆಡ್ಡಿ, ಲಕ್ಷ್ಮಣಮೂರ್ತಿ, ತಿಪ್ಪೇಸ್ವಾಮಿ, ಹನುಮಪ್ಪ, ನರಸಿಂಹಪ್ಪ, ಸಣ್ಣರಾಮಪ್ಪ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಇದರು.