Saturday, 23rd November 2024

ಬಲೂಚಿಸ್ತಾನದಲ್ಲಿ ಮಳೆ ಅಬ್ಬರ: 62 ಮಂದಿ ಬಲಿ

ಇಸ್ಲಾಮಾಬಾದ್ : ಬಲೂಚಿಸ್ತಾನದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, 24 ಮಕ್ಕಳು ಸೇರಿದಂತೆ 62 ಜೀವಗಳು ಬಲಿ ಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೋಲನ್, ಕ್ವೆಟ್ಟಾ, ಝೋಬ್, ಡಕ್ಕಿ, ಖುಜ್ದಾರ್, ಕೊಹ್ಲು, ಕೆಚ್, ಮಸ್ತುಂಗ್, ಹರ್ನೈ, ಕಿಲಾ ಸೈಫುಲ್ಲಾ ಮತ್ತು ಸಿಬಿಯಲ್ಲಿ ಸಾವುಗಳು ಸಂಭವಿಸಿದೆ.

ಭಾರೀ ಮಳೆಯಿಂದಾಗಿ, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ವಿವಿಧ ಅಪಘಾತ ಗಳಲ್ಲಿ ಸುಮಾರು 48 ಜನರು ಗಾಯಗೊಂಡಿದ್ದು, 670 ಕ್ಕೂ ಹೆಚ್ಚು ಮನೆಗಳು ಕುಸಿದಿವೆ.

ಸೋಮವಾರ, ಕರಾಚಿಯು ಕೋರಂಗಿ, ಸದ್ದಾರ್, ನಿಪಾ ಚೌರಂಗಿ, ಪೀಪಲ್ಸ್ ಚೌರಂಗಿ, ಸುಪರ್ ಹೈವೇ ಮತ್ತು ನಗರದ ಇತರ ಭಾಗಗಳಲ್ಲಿ ಭಾರಿ ಮಳೆ ಯಾಗಿದೆ. ಭಾರೀ ಮಳೆಯ ನಂತರ ನಗರದ ಕೆಲವು ಭಾಗಗಳು ಮುಳುಗಿವೆ. ಪ್ರಾಂತೀಯ ಅಧಿಕಾರಿಗ ಪರಿಸ್ಥಿತಿ ನಿಭಾಯಿಸಲು ಮಳೆ ತುರ್ತು ಪರಿಸ್ಥಿತಿ ಯನ್ನು ಘೋಷಿಸಿದ್ದಾರೆ.

ಭಾರೀ ಮಳೆಯಿಂದಾಗಿ ಗಾರ್ಡನ್ಸ್ ಶೂ ಮಾರ್ಕೆಟ್ ಪ್ರದೇಶದಲ್ಲಿ ಇಬ್ಬರು ಸೇರಿದಂತೆ ಮೂವರು ವಿದ್ಯುತ್ ಸ್ಪರ್ಶದಿಂದ ಹಾಗೂ ಕೋರಂಗಿಯ ಬಿಲಾಲ್ ಕಾಲೋನಿ ಪ್ರದೇಶದಲ್ಲಿ ವಿದ್ಯುತ್ ಸ್ಪರ್ಶದಿಂದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.