Monday, 25th November 2024

ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್: ಅವಳಿ ಕಂಚು ಗೆದ್ದ ಮಾಜಿ ಶಾಸಕ

ತಿರುವನಂತಪುರಂ: ಕೇರಳದ ಪಿರಾವೋಂ ಕ್ಷೇತ್ರದ ಮಾಜಿ ಶಾಸಕ ಎಂ ಜೆ ಜೇಕಬ್ ಅವರು ಫಿನ್‍ಲ್ಯಾಂಡ್‍ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 200 ಮೀ ಮತ್ತು 80 ಮೀ ಓಟದ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದು ತಮ್ಮ ರಾಜ್ಯಕ್ಕೆ ಹೆಮ್ಮೆಯುಂಟು ಮಾಡಿದ್ದಾರೆ.

ಜೇಕಬ್ ಅವರು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಈ ಹಿಂದೆ ಫ್ರಾನ್ಸ್, ಆಸ್ಟ್ರೇಲಿಯಾ, ಸ್ಪೇನ್‍ನಲ್ಲಿ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್‍ ನಲ್ಲಿ ಹಾಗೂ ಜಪಾನ್, ಸಿಂಗಾಪುರ್, ಚೀನಾ ಮತ್ತು ಮಲೇಷಿಯಾದ ಏಷ್ಯನ್ ಮಾಸ್ಟರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಚೆನ್ನೈಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ಜಯ ಗಳಿಸಿದ್ದರು.

ತಮ್ಮ ಶಾಸಕರ ನಿಧಿ ಬಳಸಿ ಮಣಿಮಲಕುನ್ನು ಸರಕಾರಿ ಕಾಲೇಜು ಸ್ಟೇಡಿಯಂ ನಿರ್ಮಿಸುವಲ್ಲಿ ಜೇಕಬ್ ಪ್ರಮುಖ ಪಾತ್ರ ವಹಿಸಿ ದ್ದರು. ಶಾಲೆಯಲ್ಲಿರುವಾಗಲೇ ಅವರು ಅಥ್ಲೆಟಿಕ್ಸ್ ನಲ್ಲಿ ಚಾಂಪಿಯನ್ ಆಗಿದ್ದರು. ವಿಶ್ವವಿದ್ಯಾಲಯ ಮಟ್ಟದಲ್ಲಿ 400 ಮೀಟರ್ ಹರ್ಡಲ್ಸ್‍ನಲ್ಲಿ ದಾಖಲೆ ಸೃಷ್ಟಿಸಿದ್ದರು.

2006ರಲ್ಲಿ ಅವರು ಪಿರವೊಮ್ ಕ್ಷೇತ್ರದಲ್ಲಿ ನಾಲ್ಕು ಬಾರಿಯ ಶಾಸಕ ಟಿ ಎಂ ಜೇಕಬ್ ಅವರನ್ನು ಸೋಲಿಸಿ ಸಿಪಿಐ(ಎಂ) ಪಕ್ಷ ದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿದ್ದ ವೇಳೆ ಅವರ ಹಳೆಯ ಸ್ನೇಹಿತರು ಎರ್ಣಾಕುಳಂನ ಮಹಾರಾಜ ಕಾಲೇಜಿ ನಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದರು.