Monday, 28th October 2024

ವಕೀಲರ ಸಂಘದ ಅಧ್ಯಕ್ಷನಾಗಿ ಬಿ.ಎಲ್.ನಾಗರಾಜು ಆಯ್ಕೆ

ಕೊರಟಗೆರೆ ಪಟ್ಟಣದ ವಕೀಲರ ಸಂಘ.. ವಕೀಲರ ಸಂಘದ ಅಭಿವೃದ್ದಿ ಸೇವೆ..

ಕೊರಟಗೆರೆ: ವಕೀಲರ ಸೇವೆಗಾಗಿ ಆಯ್ಕೆಮಾಡಿದ ವಕೀಲವೃಂದ್ದಕ್ಕೆ ತುಂಬು ಹೃದಯದ ಧನ್ಯವಾದ. ವಕೀಲರ ಸಂಘದ ಅಭಿವೃದ್ದಿ ಮತ್ತು ವಕೀಲರ ಸ್ನೇಹಿತನಾಗಿ ಸದಾ ಜೊತೆಯಲ್ಲಿ ಇರುತ್ತೇನೆ ಎಂದು ಕೊರಟಗೆರೆ ವಕೀಲರ ಸಂಘದ ಅಧ್ಯಕ್ಷ ಬಿ.ಎಲ್.ನಾಗ ರಾಜು ತಿಳಿಸಿದರು.

ಕೊರಟಗೆರೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ವಕೀಲರ ಸಂಘದ ಚುನಾವಣೆ ಯಲ್ಲಿ ಜಯಗಳಿಸಿದ ನಂತರ ಮಾತನಾಡಿದರು. ಕೊರಟಗೆರೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮಾತನಾಡಿ ಮುಂದಿನ ಎರಡು ವರ್ಷದ ಅವಧಿಗೆ ವಕೀಲರ ಸಂಘದ ಚುನಾವಣೆ ನಡೆದಿದೆ.

ಚುನಾವಣೆಯಲ್ಲಿ ಆಯ್ಕೆ ಮಾಡಿದ ವಕೀಲವೃಂದ್ದ ಧನ್ಯವಾದ ಅರ್ಪಿಸುತ್ತೇ£.ೆ ವಕೀಲರ ಸಂಘದ ಅಭಿವೃದ್ದಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ಕೊರಟಗೆರೆ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ್ ಮಾತನಾಡಿ ಹಿರಿಯ ವಕೀಲರ ಸಲಹೆ ಮತ್ತು ಕಿರಿಯ ವಕೀಲರ ಸಹಕಾರದೊಂದಿಗೆ ವಕೀಲರ ಸಂಘದ ಅಭಿವೃದ್ದಿಗೆ ಸದಾ ಮುಂದಾಗುತ್ತೇನೆ. ನನ್ನನ್ನು ಬಹುಮತ ನೀಡಿ ಆಯ್ಕೆ ಮಾಡಿದ ವಕೀಲವೃಂದ್ದಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಕೊರಟಗೆರೆ ವಕೀಲರ ಸಂಘದ ಅಧ್ಯಕ್ಷರಾಗಿ ಬಿ.ಎಲ್.ನಾಗರಾಜು, ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಿ ಕಾರ್ಜುನಯ್ಯ, ಜಂಟಿಕಾರ್ಯದರ್ಶಿ ಹುಸೇನ್‌ಪಾಷ, ಖಜಾಂಚಿ ಸಂತೋಷ್‌ಲಕ್ಷಿö್ಮÃ ಆಯ್ಕೆ ಆಗಿದ್ದಾರೆ. ವಕೀಲರ ಸಂಘದ ಚುನಾವಣಾ ಅಧಿಕಾರಿಯಾಗಿ ವಕೀಲರಾದ ನರಸಿಂಹರಾಜು ಕಾರ್ಯ ನಿರ್ವಹಣೆ ಮಾಡಿದ್ದಾರೆ.

ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜು, ವಕೀಲರಾದ ಡಿ.ಶಿವಣ್ಣ, ಜಿ.ಎಂ.ಕೃಷ್ಣಮೂರ್ತಿ, ಪುಟ್ಟರಾಜು, ಎ.ಎಂ.ಕೃಷ್ಣ ಮೂರ್ತಿ, ಶಿವರಾಮಯ್ಯ, ಟಿ.ಕೃಷ್ಣಮೂರ್ತಿ, ಸಂಜೀವರಾಜು, ಅನಿಲ್‌ಕುಮಾರ್, ಸಂತೋಷ್, ಮಧುಸೂಧನ್, ನಾಗೇಂದ್ರಪ್ಪ, ತಿಮ್ಮರಾಜು, ವೃಷಬೇಂದ್ರಸ್ವಾಮಿ, ನಾಗರಾಜು, ಹನುಮಂತರಾಜು, ಕೃಷ್ಣಪ್ಪ, ಮಂಜುನಾಥ, ರಾಮಚಂದ್ರಯ್ಯ, ರವಿಕುಮಾರ್, ವಿನೋದ್ ಸೇರಿದಂತೆ ಇತರರು ಇದ್ದರು.