Monday, 28th October 2024

ತ್ವರಿತ ಗತಿಯಲ್ಲಿ ಮಂಜೂರಾತಿ ಪತ್ರ ವಿತರಿಸಿ : ಜಿಲ್ಲಾಧಿಕಾರಿ

ಕೊಂತಿಹಳ್ಳಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ

ತುಮಕೂರು: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕರ‍್ಯಕ್ರಮ ಸಂಪರ‍್ಣವಾಗಿ ಜನರ ಕರ‍್ಯಕ್ರಮ. ಸರಕಾರದ ಒಂದು ಯೋಜನೆ ಯಶಸ್ವಿಯಾಗುವುದು ಸರಕಾರ ಮತ್ತು ಜನರ ಒಗ್ಗೂಡುವಿಕೆಯೊಂದಿಗೆ ಮಾತ್ರ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

Read This link

http://vishwavani.news/kid-touch-feet-of-soldier/

ತುಮಕೂರು ತಾಲ್ಲೂಕು ದೇವಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಂತಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕರ‍್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಮನವಿಗಳಿಗೆ ಸ್ಪಂದಿಸಿ ನೊಂದವರಿಗೆ ಅಭಯ ನೀಡಿದರು.

ನಿವೇಶನ ರಹಿತ, ವಸತಿರಹಿತ ರ‍್ಹ ಫಲಾನುಭವಿಗಳಿಗೆ ೧೫ ದಿನದೊಳಗೆ ಆದ್ಯತೆಯ ಮೇಲೆ ನಿವೇಶನ, ವಸತಿ ಮಂಜೂರಾತಿ ಪತ್ರ ವಿತರಿಸಬೇಕು ಎಂದು ದೇವಲಾಪುರ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.

ದೇವಲಾಪುರ ಗ್ರಾಮದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ೩ ತಿಂಗಳಿಂದ ಕೆಟ್ಟು ನಿಂತಿರುವ ಬಗ್ಗೆ ಗ್ರಾಮಸ್ಥರೊಬ್ಬರು ದೂರಿದಾಗ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಉಪಕರ‍್ಯರ‍್ಶಿ ಕೃಷ್ಣಮರ‍್ತಿಯವರು ಎಇಇ, ಪಿಡಿಓ ಅವರೊಂದಿಗೆ ಮಾತನಾಡಿ, ಕೂಡಲೇ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಧನಿಗೂಡಿಸಿದ ಜಿಲ್ಲಾಧಿಕಾರಿಗಳು ನೀರಿನ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಿದರು.

ದೇವಲಾಪುರ ಗ್ರಾಮದ ವಸಂತ ಎಂಬ ಮಹಿಳೆ ಮನೆಯಾಗಲೀ, ಹೊಲವಿಲ್ಲದೇ ಕೂಲಿ ಮಾಡಿ ಬದುಕುತ್ತಿದ್ದವೆ. ದಯವಿಟ್ಟು ಮನೆ ಕೊಡಿ ಎಂದು ಮನವಿ ಮಾಡಿದಾಗ ಸ್ಪಂದಿಸಿದ ಉಪ ವಿಭಾಗಾಧಿಕಾರಿ ವಿ. ಅಜಯ್ ಅವರು, ಸಂಬಂಧಿಸಿದ ಅಧಿಕಾರಿ ಗಳೊಂದಿಗೆ ರ‍್ಚಿಸಿ ಆಶ್ರಯ ಯೋಜನೆಯಡಿ ಮನೆ ಕಲ್ಪಿಸಿಕೊಡುವುದಾಗಿ ಹೇಳಿದರು.

ಬಿಟ್ಟನಕುರಿಕೆ ಗ್ರಾಮದ ರ‍್ವೆನಂಬರ್ ೨೮ ರಲ್ಲಿ ೪೦ಕ್ಕೂ ಹೆಚ್ಚು ದಲಿತ ಕುಟುಂಬಗಳು ಮೂವತ್ತಕ್ಕಿಂತ ಹೆಚ್ಚು ರ‍್ಷಗಳಿಂದ ವಾಸಿಸುತ್ತಿದ್ದಾರೆ. ಆ ಕುಟುಂಬಗಳು ಅಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ದರು.

ಈ ಕರ‍್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳ ತಂಡ ತಮ್ಮ ಗ್ರಾಮಕ್ಕೆ ಆಗಮಿಸಿ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಪರಿಹಾರಗಳನ್ನು ಕಂಡುಕೊಳ್ಳುವಂತಹ ಮತ್ತು ರ‍್ಕಾರದ ಮಟ್ಟದಲ್ಲಿ ಆಗುವಂತಹ ಕೆಲಸಗಳನ್ನು ರ‍್ಕಾರದ ಗಮನಕ್ಕೆ ತರುವಂತಹ ವಿನೂತನ ಕರ‍್ಯಕ್ರಮವಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗ್ರಾಮದ ರ‍್ಭಿಣಿಯರಿಗೆ ಸೀಮಂತ ಕರ‍್ಯವನ್ನು ನಡೆಸಿಕೊಟ್ಟರು. ಮಹಿಳಾ ಅಧಿಕಾರಿಗಳು ರ‍್ಭಿಣಿಯರಿಗೆ ಸೀರೆ, ಅರಶಿಣ, ಕುಂಕುಮ ನೀಡಿ ಗೌರವಿಸಿದರು. ಜಿಲ್ಲಾಧಿಕಾರಿಗಳು ಮಗುವೊಂದಕ್ಕೆ ಅನ್ನ ಪ್ರಾಶನ ಮಾಡಿದರು. ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ ೯ ಫಲಾನು ಭವಿಗಳಿಗೆ ಕರ‍್ಯದೇಶ ಪತ್ರಗಳನ್ನು ವಿತರಿಸ ಲಾಯಿತು.

ಕರ‍್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷ ಸಂಜೀವಯ್ಯ, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ರೇಷ್ಮೆ ಇಲಾಖೆ ಉಪನರ‍್ದೇಶಕ ಬಾಲಕೃಷ್ಣ, ಕೃಷಿ ಜಂಟಿ ನರ‍್ದೇಶಕಿ ರಾಜ ಸುಲೋಚನ, ತೋಟಗಾರಿಕಾ ಉಪನರ‍್ದೇಶಕ ರಘು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನರ‍್ದೇಶಕ ಶ್ರೀಧರ್, ಜಿಲ್ಲಾ ಕರ‍್ಮಿಕಾಧಿಕಾರಿ ರಮೇಶ್,ಡಿಡಿಎಲ್ಆರ್ ಸುಜಯ್ ಕುಮಾರ್, ತಹಶೀಲ್ದಾರ್ ಮೋಹನ್ ಕುಮಾರ್, ಭೂಮಿ ಕೇಂದ್ರದ ಅಧಿಕಾರಿ ನರಸಿಂಹರಾಜು, ಎಪಿಎಂಸಿ ನರ‍್ದೇಶಕ ಗಂಗಾಧರಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಜರಿದ್ದರು.