ಶಿರಸಿ : ಶಿರಸಿ ಪತ್ರಿಕೋದ್ಯಮದಲ್ಲಿ ೨೫ ವರ್ಷಗಳಿಂದ ತಮ್ಮದೇ ಛಾಪು ಮೂಡಿಸಿರುವ ಕನ್ನಡ ಜನಾಂತರಂಗ ವರದಿಗಾರ ಪ್ರದೀಪ ಶೆಟ್ಟಿ ಅವರಿಗೆ ೨೦೨೨ನೇ ಸಾಲಿನ ಮಾಧ್ಯಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರಶಸ್ತಿಯು ೩ ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಪ್ರದೀಪ ಶೆಟ್ಟಿ ಅವರು ಪತ್ರಿಕೋದ್ಯಮಕ್ಕೆ ನೀಡಿದ ಸೇವೆಗಾಗಿ ಶಿರಸಿ ತಾಲೂಕಾ ಪತ್ರಿಕಾ ಸಂಘ ಪ್ರಶಸ್ತಿ ಪ್ರಕಟಿಸಿದೆ.
ಕರಾವಳಿ ಸುಪ್ರಭಾತ, ವಿಜಯ ಕರ್ನಾಟಕ, ಜನಮಾಧ್ಯಮ ಪತ್ರಿಕೆಯಲ್ಲಿ ಕೆಲಸ ಮಾಡಿ ೨೦ ವರ್ಷಗಳಿಂದ ಕನ್ನಡ ಜನಾಂತರ0ಗ ದಲ್ಲಿ ಶಿರಸಿ ವರದಿಗಾರರಾಗಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೨೦೦೩ ರಲ್ಲಿ ರೋಟರಿಯಿಂದ ಕ್ರೀಯಾಶೀಲ ಪತ್ರಕರ್ತ ರೆಂದು ಸಾರ್ವಜನಿಕ ಸನ್ಮಾನ ಮಾಡಲಾಗಿದೆ. ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ರಾಗಿಯೂ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೂರು ಬಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆ ಮಾಡಿ ರುವ ಹೆಗ್ಗಳಿಕೆ ಅವರದ್ದಾಗಿದೆ.
ಮೈಸೂರಿನಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಪ್ರದೀಪ ಶೆಟ್ಟಿಯವರು ತಮ್ಮ ಸಾಮಾಜಿಕ ಕೆಲಸದಿಂದಲೂ ಶಿರಸಿ ಯಲ್ಲಿ ಗುರುತಿಸಿಕೊಂಡಿದ್ದಾರೆ. ಕರೋನಾ ಸಂದರ್ಭದಲ್ಲಿ ಸರ್ಕಸ್ ಕಂಪನಿ, ನಾಟಕ ಕಂಪನಿಯವರಿಗೆ ದಿನನಿತ್ಯದ ವಸ್ತು ಗಳನ್ನು ಒದಗಿಸಿಕೊಡುವಲ್ಲಿ ಅವರ ಮಾತ್ರ ಮಹತ್ವದ್ದಿದೆ.
ಈ ಎಲ್ಲಾ ಕಾರ್ಯದಿಂದ ಅವರಿಗೆ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಕಾರ್ಯದರ್ಶಿ ಕೃಷ್ಣ ಮೂರ್ತಿ ಕೆರೆಗದ್ದೆ ತಿಳಿಸಿದ್ದಾರೆ.