Sunday, 24th November 2024

15 ಸಾವಿರದ 528 ಹೊಸ ಕೋವಿಡ್ ಪ್ರಕರಣ ಪತ್ತೆ

ನವದೆಹಲಿ: ದೇಶದಲ್ಲಿ 15 ಸಾವಿರದ 528 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 25 ಸಾವು ಸಂಭವಿಸಿದೆ. ದೇಶದಲ್ಲಿ ಸಕ್ರಿಯ ಕೋವಿಡ್ ಸೋಂಕಿತರ ಸಂಖ್ಯೆ 1 ಲಕ್ಷದ 43 ಸಾವಿರದ 654 ಆಗಿದೆ.

ಕಳೆದ 24 ಗಂಟೆಗಳಲ್ಲಿ 16 ಸಾವಿರದ 113 ಮಂದಿ ಗುಣಮುಖರಾಗಿದ್ದು, 4 ಕೋಟಿಯ 31 ಲಕ್ಷದ 13 ಸಾವಿರದ 623 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ 5 ಲಕ್ಷದ 25 ಸಾವಿರದ 785 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್ ಲಸಿಕೆ ಅಭಿಯಾನದಲ್ಲಿ ಇಲ್ಲಿಯವರೆಗೆ 200 ಕೋಟಿಯ 33 ಲಕ್ಷದ 55 ಸಾವಿರದ 257 ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 27 ಲಕ್ಷದ 78 ಸಾವಿರದ 013 ಡೋಸ್ ಗಳನ್ನು ವಿತರಿಸಲಾಗಿದೆ.