‘ರೆಸ್ಪೆಕ್ಟ್ ಫಾರ್ ಮ್ಯಾರೇಜ್ ಆಕ್ಟ್’ ಎಂಬ ಶೀರ್ಷಿಕೆಯ ಶಾಸನವು 267 ರಿಂದ 157 ಮತಗಳಲ್ಲಿ ಅಂಗೀಕರಿಸಲ್ಪಟ್ಟಿದೆ. 47 ರಿಪಬ್ಲಿಕನ್ನರು ಈ ಕ್ರಮವನ್ನು ಬೆಂಬಲಿಸಿದ್ದಾರೆ. ಆದರೆ ಸೆನೆಟ್‌ನಲ್ಲಿ ಅನಿಶ್ಚಿತವಾಗಿವೆ. 100 ಸದಸ್ಯರಿರುವ ಸೆನೆಟ್‌ನಲ್ಲಿ ಡೆಮೋ ಕ್ರಾಟ್ ಗಳು 50 ಸ್ಥಾನಗಳನ್ನು ಹೊಂದಿದ್ದಾರೆ.
ಮಸೂದೆಯು ಅಮೆರಿಕಾದ ರಾಜ್ಯಗಳಲ್ಲಿ ಮತ್ತೊಂದು ರಾಜ್ಯದಲ್ಲಿ ನಡೆದ ಮದುವೆ ಯನ್ನು ಮಾನ್ಯಗೊಳಿಸಲು ಒತ್ತಾಯಿಸು ತ್ತದೆ. ಜೊತೆಗೆ ಈ ಮಸೂದೆಯು 1996 ರ ಮದುವೆಯ ರಕ್ಷಣಾ ಕಾಯಿದೆಯನ್ನು ರದ್ದುಗೊಳಿಸುತ್ತದೆ. ಆ ಕಾಯಿದೆಯಲ್ಲಿ ಮದುವೆ ಎನ್ನುವುದು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆಯ ನಡುವಿನ ಸಂಬಂಧ ಎಂದು ವ್ಯಾಖ್ಯಾನಿಸುತ್ತದೆ.
ಸುಪ್ರೀಂಕೋರ್ಟ್ ಜೂನ್ 24 ರಂದು ರಾಷ್ಟ್ರವ್ಯಾಪಿ ಗರ್ಭಪಾತದ ಹಕ್ಕುಗಳನ್ನು ಪ್ರತಿಪಾದಿಸುವ 1973 ರ ತೀರ್ಪು ರೋಯ್ ವಿ ವೇಡ್ ಅನ್ನು ರದ್ದುಗೊಳಿಸಿತು.
ಮೇ ತಿಂಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಶೇಕಡಾ 71 ರಷ್ಟು ಅಮೆರಿಕನ್ನರು ಸಲಿಂಗಿಗಳ ಸಂಬಂಧಗಳನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.