Monday, 28th October 2024

ರಾಜಸ್ಥಾನದ ವಲಸೆ ಕಾರ್ಮಿಕರಿಗಾಗಿ ಮೇ.13,14 ರಂದು ಜೋಧಪುರಕ್ಕೆ ವಿಶೇಷ ರೈಲು

ಧಾರವಾಡ:

ವವರವಾಡ ಜಿಲ್ಲೆಯಲ್ಲಿರುವ ರಾಜಸ್ಥಾನ ಮೂಲದ ವಲಸಿಗ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಲು ರೈಲ್ವೆ ಇಲಾಖೆ ಮೇ.13 ಹಾಗೂ 14 ರ ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿಯಿಂದ ಜೋಧಪುರದವರೆಗೆ ವಿಶೇಷ ರೈಲುಗಳು ಹೊರಡಿಸಲಿದೆ.

ಹುಬ್ಬಳ್ಳಿ ರೈಲು ನಿಲ್ದಾಣದಿಂದ ರೈಲ್ವೆಗಾಡಿ (ಸಂಖ್ಯೆ:07301) ಮೇ13 ಹಾಗೂ 14 ರಂದು ಮಧ್ಯಾಹ್ನ 12 ಗಂಟೆಗೆ ಹೊರಟು ಸಂಜೆ 5 ಗಂಟೆಗೆ ಮಿರಜ, ರಾತ್ರಿ 10 ಗಂಟೆಗೆ ಪುಣೆ, ಮತ್ತು ಮೇ.14 ರಂದು ಬೆಳಗಿನ 1-50 ಗಂಟೆಗೆ ವಾಸಾಯಿ ರೋಡ್, 6-30 ಕ್ಕೆ ವಡೋದರಾ, 8-10 ಕ್ಕೆ ಅಹಮದಾಬಾದ್, 10-05 ಕ್ಕೆ ಪಾಲನಪುರದಿಂದ ಹೊರಟು ಮಧ್ಯಾಹ್ನ 2-30 ಕ್ಕೆ ಜೋಧಪುರ ತಲುಪಲಿದೆ.

ಧಾರವಾಡ ಜಿಲ್ಲೆಯಿಂದ ರಾಜಸ್ಥಾನದ ಸುಮಾರು 1,452 ಜನ ವಲಸೆ ಕಾರ್ಮಿಕರು ಪ್ರಯಾಣಿಸಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯಿಂದ ವಲಸಿಗ ಕಾರ್ಮಿಕರ ಆರೋಗ್ಯ ತಪಾಸಣೆಗಾಗಿ 15 ವಿಶೇಷ ಕೌಂಟರ್‍ಗಳನ್ನು ತೆರೆಯಲಾಗಿದ್ದು, ಅಲ್ಲಿಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡ ನಂತರ ಅವರಿಗೆ ಆರೋಗ್ಯ ಪ್ರಮಾಣ ಪತ್ರ ಹಾಗೂ ರೈಲು ಪ್ರಯಾಣ ಟಿಕೇಟ್ ನೀಡಲಾಗುತ್ತದೆ.

ಇ-ಪಾಸ್ ಇಲ್ಲದಿದ್ದರೂ ಪ್ರಯಾಣಿಸಬಹುದು:

ಸೇವಾಸಿಂಧು ಪೋರ್ಟಲ್ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದರೂ ಸಹ ಇ-ಪಾಸ್ ಪಡೆಯಲು ಸಾಧ್ಯವಾಗದೇ ಇರುವವರು ಕೂಡಾ ಬೆಳಿಗ್ಗೆ 6 ಗಂಟೆಗೆ ರೈಲ್ವೆ ನಿಲ್ದಾಣದ ಎದುರಿನ ಪಾರ್ಕಿಂಗ್ ಆವರಣದಲ್ಲಿ ಹಾಜರಾಗಿ ಹೆಸರು ನೊಂದಾಯಿಸಿಕೊಂಡು ಟಿಕೇಟ್ ಪಡೆದು ಪ್ರಯಾಣಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.