Monday, 28th October 2024

ಪ್ಲಾಸ್ಟಿಕ್ ವಸ್ತುಗಳ ಮಾರಾಟ: ವಿವಿಧ ಅಂಗಡಿಗಳ ಮೇಲೆ ಏಕಾಏಕಿ ದಾಳಿ

ಕೊಲ್ಹಾರ: ಸರಕಾರ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿ ಸಿದ್ದರೂ ಕೂಡ ಅಕ್ರಮವಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸಹಿತ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಪಟ್ಟಣ ಪಂಚಾಯತ್ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಸುಮಾರು ೧ ಕ್ವಿಂಟಾಲ್ ಗಿಂದ ಅಧಿಕ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸಹಿತ ಇತರ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪಟ್ಟಣದ ವ್ಯಾಪ್ತಿಯ ಹೋಲ್ ಸೇಲ್ ಅಂಗಡಿ, ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ ಸಹಿತ ಅನೇಕ ಅಂಗಡಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದುಕೊಂಡರು.

ಸರಕಾರ ಸಂಪೂರ್ಣವಾಗಿ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿಸಿದೆ, ಪ್ಲಾಸ್ಟಿಕ್ ಮಾರಾಟ ಮಾಡುವುದು ಅಪರಾಧವಾಗುತ್ತದೆ ಹೀಗಾಗಿ ಇನ್ನೊಮ್ಮೆ ಪ್ಲಾಸ್ಟಿಕ್ ಮಾರಾಟಕ್ಕೆ ಮುಂದಾಗಬಾರದು ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

ದಾಳಿ ಸಂದರ್ಭದಲ್ಲಿ ಪ.ಪಂ ಅಧಿಕಾರಿಗಳಾದ ನಿಖಿಲ್ ಪಾಟೀಲ್, ತಾಜುದ್ದೀನ್ ಹನುಮಸಾಗರ, ಗೌಡಪ್ಪ ಕಾರಜೋಳ, ಮಂಜುನಾಥ ಚಿತ್ತರಗಿ ಇತರರು ಇದ್ದರು.

***

ಕೋಟ್- ಕ್ಯಾರಿಬ್ಯಾಗ್ ಇನ್ನಿತರ ಪ್ಲಾಸ್ಟಿಕ್ ಮಾರಾಟ ಮತ್ತು ಬಳಿಕೆ ಮಾಡುವದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು.
ವಿರೇಶ ಹಟ್ಟಿ, ಮುಖ್ಯಾಧಿಕಾರಿಗಳು ಪ.ಪಂ ಕೊಲ್ಹಾರ.