Sunday, 5th January 2025

ಯೋಚಿಸಬೇಡ, ಗೆಲ್ಲಲೇಬೇಕಾದ ಒಂದು ದಿನ ಇರುತ್ತೆ

ಪರಿಶ್ರಮ

parishramamd@gmail.com

ಬದುಕಿನಲ್ಲಿ ಏನಾದರೂ ಸಾಧಿಸಿ ಅದ್ಭುತಗಳನ್ನ ನಿರೀಕ್ಷೆ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಗೆಲುವು ಬೇಕೇಬೇಕಿರುತ್ತದೆ. ಗೆಲುವುದೆನಿದೇ ಬಿಡಿ ಎಲ್ಲರನ್ನ ನಮ್ಮವರೆನ್ನಿಸಿ ಬಿಡುತ್ತೆ. ಸೋಲಿದೆಯಲ್ಲ ಅದು ಪ್ರಪಂಚ ಏನೆಂದು ಅರ್ಥಮಾಡಿಸುತ್ತದೆ. ಗೆದ್ದಾಗ ನೀವು ಪ್ರಪಂಚಕ್ಕೆ ಗೊತ್ಗಾತ್ತೀರಾ.

ಸೋತಾಗ ಪ್ರಪಂಚವೆನೆಂದು ನಿಮ್ಮಗೆ ಗೊತ್ತಾಗುತ್ತದೆ. ಆದರೂ ನಾವೆಲ್ಲರೂ ಗೆಲ್ಲಲ್ಲೇ ಬೇಕಾದ ಒಂದು ದಿನ ಇರುತ್ತೆ. ಹೈಸ್ಕೂಲ್‌ನಲ್ಲಿ, ಕಾಲೇಜಿನಲ್ಲಿ ಪದೇ ಪದೇ ಸೋತು ವೈದ್ಯರಾಗ್ತೀನಿ, ಐಐಟಿ ಮಾಡ್ತೀನಿ, ಐಎಎಸ್ ಮಾಡ್ತೀನಿ ಅಂತ ಕನಸು ಕಂಡು ಬೆಂಗಳೂರಿಗೆ ಬರುವಂತಹ ಬಹಳಷ್ಟು ವಿದ್ಯಾರ್ಥಿಗಳು ಗೆಲ್ಲಲ್ಲೇ ಬೇಕಾದ ಒಂದು ದಿನ ಇರುತ್ತೆ. ಪ್ರತಿ ಚಿಕ್ಕ ಪುಟ್ಟ ಸಂಬಂಧಗಳನ್ನು ಕೋಪದಿಂದ ದೂರ ಮಾಡಿಕೊಂಡು ಆದರೂ ಎಲ್ಲರನ್ನೂ ಗಳಿಸುತ್ತೇನೆ ಎಂದು ಹೆಜ್ಜೆ ಇಡುವ ಮಧ್ಯಮ ವರ್ಗದ ಯುವಕ-ಯುವತಿಯು ಗೆಲ್ಲಲ್ಲೇ ಬೇಕಾದ ದಿನ ಒಂದು ಇರುತ್ತದೆ.

ದಾಂಪತ್ಯದಲ್ಲಿ ಬಿರುಕು ಸಾಮರಸ್ಯದ ಕೊರತೆ ಇದ್ದರೂ ಸಹ ಆದರ್ಶ ದಂಪತಿಗಳಂತೆ ಸಮಾಜಕ್ಕೆ ಕಾಣಿಸಬೇಕೆಂದು ಬಯಕೆ ಬಹಳಷ್ಟು ದಂಪತಿಗಳಲ್ಲಿರುತ್ತದೆ. ಅವರು ಗೆಲ್ಲಲ್ಲೇ ಬೇಕಾದ ದಿನ ಒಂದು ಇರುತ್ತದೆ. ಹೊಸ ವ್ಯಾಪಾರಕ್ಕೆ ಕೈ ಹಾಕಿ ಧೈರ್ಯದ ಕೊರತೆಯಿಂದ ಬಂಡವಾಳ ಇದ್ದರೂ ಸಹಾ, Background ಇದ್ದರೂ ಸಹಾ ಗುಂಡಿಗೆ ಎಂಬ ground ನಲ್ಲಿ ಧೈರ್ಯದ ಕೊರತೆ ಯಿಂದ ಏನೂ ಸಾಧಿಸಲಾಗದೆ ಉಳಿದು ಹೋಗಿ ಬಿಲ್ ಗೇಟ್ಸ್, ವಾರನ್ ಬಫೆಟ್ ಮತ್ತು ಬಹಳಷ್ಟು ದೊಡ್ಡ ದೊಡ್ಡ ವ್ಯಕ್ತಿ ಗಳಿಂದ ಸೂರ್ತಿ ಪಡೆಯುತ್ತಿರುವ ನವೋದ್ಯೋಗಿಗಳು ಗೆಲ್ಲಲ್ಲೇ ಬೇಕಾದ ದಿನ ಒಂದಿರುತ್ತದೆ.

ಆತಂಕ, ಬೆಸರ, ಹತಾಶೆ, ಒಂಟಿತನದಿಂದಲ್ಲೇ ಕಳೆದು ಹೋಗುವ ಬಹಳಷ್ಟು ಜನ ಯುವಕ-ಯುವತಿಯರು ಬದುಕಿನಲ್ಲಿ ಏನಾದರೂ ಸಾಧಿಸಿ ತೋರಿಸುತ್ತೀನಿ. ನಾನೆಂದು prove ಮಾಡ್ತೀನಿ ಅಂತ ಎಷ್ಟೇ ಛಲ ಪಟ್ಟರೂ ಏನೂ ಮಾಡಲಾಗದೆ ಉಳಿದು ಹೋಗುತ್ತಾರೆ. ಅವರು ಗೆಲ್ಲಲ್ಲೇ ಬೇಕಾದ ದಿನ ಒಂದಿರುತ್ತದೆ. ಇಷ್ಟಕ್ಕೂ ಆ ದಿನ ಯಾವಾಗ ಬರುತ್ತದೆ. ಇಷ್ಟಕ್ಕೂ ಗೆಲ್ಲಲ್ಲೇ ಬೇಕಾದ
ದಿನ ಯಾವಾಗ? ಯಾರಿಗೆ ಗೊತ್ತು! ನಿಮ್ಮ ಧೈರ್ಯ, ನಿಮ್ಮ ಆತ್ಮವಿಶ್ವಾಸ ಪ್ರಪಂಚವನ್ನ ಎದುರಿಸುವ ನಿಮ್ಮ ಸಾಮರ್ಥ್ಯ ಮೂರು ಒಂದಾದಾಗ ಆ ದಿನ ಬಂದೇ ಬರುತ್ತದೆ. ಯಾವುದೇ ಪರೀಕ್ಷೆ ಬರೆದರೂ ಸಾಮಾನ್ಯ ಅಂಕಗಳಿಂದ ತೇರ್ಗಡೆಯಾದ ವಿದ್ಯಾರ್ಥಿ ಐಎಎಸ್ ಆಗಿರುವ ಉದಾಹರಣೆಗಳನ್ನ ನೋಡಿದ್ದೇವೆ. ನೀವು ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ್ದರೆ,
ನೀವು ಹತ್ತನೇ ತರಗತಿಯಲ್ಲಿ ಚಂದವಾಗಿ ಓದಿದ್ದೀರಾ ಎಂಬುದಷ್ಟೇ ಅರ್ಥ.

ಅದರ ಅರ್ಥ ನಾವು ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಬಂದಿದ್ದೆ ಎಂದರೆ ಮುಂದೆ ಬರುವ ಎಲ್ಲಾ ಪರೀಕ್ಷೆಯಲ್ಲೂ Toppers ಆಗುತ್ತಾರೆ ಎಂದಲ್ಲ. ಪ್ರತಿ ವರ್ಷನೂ ನಿಮ್ಮದೇ ಆದಂತಹ effort ಆ ಪರೀಕ್ಷೆ ಬೇಡುತ್ತದೆ. ಯಾವುದೋ ಕೆಲಸದಲ್ಲಿ ಸೇರಿ ಕೊಂಡು ಅಲ್ಲಿ ಯಶಸ್ಸನ್ನ ಕಂಡು ನಂತರ ಸ್ವಂತ ವ್ಯಾಪಾರದಲ್ಲಿ ಯಶಸ್ವಿಯಾಗುತ್ತೇನೆಂದು ಬಯಸುವುದು ತಪ್ಪಲ್ಲ. ಅದರೆ ಅದಷ್ಟು ಸುಲಭವೂ ಅಲ್ಲ. ಕಷ್ಟ-ಸುಖ, ಕಣ್ಣೀರು ಸ್ಪರ್ಧೆಯೆಂಬ ಜಗತ್ತಿನಲ್ಲಿ ಕುಸಿದು ಹೋಗಿ ಬಿಡುವ  ಅಸಹಾಯಕತೆ, ಎಲ್ಲವೂ ಪಾಠ ಕಲಿಸುತ್ತಾ ಬರುತ್ತದೆ.

ದಾಂಪತ್ಯದಲ್ಲಿ ಬಿರುಕಿದ್ದರೂ ಸಹ ಆದರ್ಶ ದಂಪತಿಗಳಂತೆ ಕಾಣಲು ಪ್ರಯತ್ನ ಪಡುವ ಬಹಳಷ್ಟು ಮಂದಿ ಅವರುಗೆಲ್ಲಲ್ಲೇ ಬೇಕಾದ ದಿನ ಒಂದಿರುತ್ತೆ. ಕ್ರೀಡೆಯಲ್ಲೂ, ಮತ್ಯಾವುದೋ ಅವರ ಇಷ್ಟಪಟ್ಟ ಕ್ಷೇತ್ರದಲ್ಲಿ ಗೆಲ್ಲಬೇಕೆಂದು ಬಯಸುವವರು ಶ್ರದ್ಧೆಯ ಕೊರೆತೆ ಕಾಣುತ್ತಿರುತ್ತದೆ. ಪ್ರೀತಿಯ ಯುವಕ-ಯುವತಿಯರೇ ಗೆಲುವು ಅಷ್ಟು ಸುಲಭವಾಗಿ ಬರುವುದಿಲ್ಲ. ಅದರೆ ದುರಾದೃಷ್ಟ ನೋಡಿ ಬಂದವರಿಗೆ ಮತ್ತೆ ಮತ್ತೆ ಗೆಲುವು ಬರುತ್ತಿರುತ್ತದೆ. ಸೋತವರು ಮತ್ತೆ ಮತ್ತೆ ಸೋಲುತ್ತಾ ಇರುತ್ತಾರೆ. ಗೆಲುವಾಗಲಿ, ಸೋಲಾಗಲಿ ಅದು ನಿಮ್ಮ ತಯಾರಿ ಮೇಲೆ ಅಷ್ಟೇ ಮಾತ್ರವಲ್ಲ, ನಿಮ್ಮ ಆತ್ಮವಿಶ್ವಾಸ, ದೃಢಸಂಕಲ್ಪದ ಮೇಲೆಯೂ ನಿಂತಿರುತ್ತದೆ. ಗೆಲ್ಲಬೇಕೆಂದು ಹೊರಟವರು ಮೊದಲು ಮಾಡಬೇಕಾದ ಕೆಲಸ Formula 1.

ಅವರಿವರ ಅಭಿಪ್ರಾಯಕ್ಕೆ ಕಿವಿ ಕೊಡುವುದನ್ನು ನಿಲ್ಲಿಸಿಬಿಡಿ.

Formula 2  ಗೆಲ್ಲಕ್ಕೆ ಹೋರಾಟಾಗ ಕಿವಿ ಮುಚ್ಚಿಕೊಳ್ಳಿ, ಗೆದ್ದ ಮೇಲೆ ಬಾಯಿ ಮುಚ್ಚಿಕೊಳ್ಳಿ.

Formula 3. ನೀವು ಕೈ ಹಾಕಿದ ಕೆಲಸ ಯಶಸ್ವಿಯಾಗ ಬೇಕಾದರೆ ಅದು ಪರೀಕ್ಷೆಯೋ, ವ್ಯಾಪಾರವೋ ಒಂದು, ಎರಡು-ಮೂರು ವರುಷಗಳ ಕಾಲ ನಿರಂತರವಾಗಿ ಅದರ ಮೇಲೆ ಏಕಾಗ್ರತೆ, ಶ್ರದ್ಧೆಯನ್ನು ಗಳಿಸಿ.

Formula 4. ಗೆದ್ದ ಜೀವಿಯಿಂದ Inspiration ಪಡೆದು ಸೋತವರಿಂದ ಪಾಠ ಕಲಿಯಲೇ ಬೇಕಾಗಿರುತ್ತದೆ.

ಗೆದ್ದವರನ್ನೇ ಮಾತ್ರ ಸೂರ್ತಿಯಾಗಿ ತೆಗೆದುಕೊಳ್ಳಬೇಡಿ, ಸೋತವರು ನಮಗೆ ಸ್ಫೂರ್ತಿಯಾಗಬಲ್ಲರು. ಗೆದ್ದವರು ಏನು ಮಾಡಬೇಕೆಂದು ಹೇಳಿಕೊಟ್ಟರೆ, ಸೋತವರು ಎನು ಮಾಡಬಾರದೆಂದು ಹೇಳಿಕೊಡುತ್ತಾರೆ.

Formula5. ನೀವು ಏನೇ ಪ್ರಯತ್ನಕ್ಕೆ ಕೈ ಹಾಕಿದರೂ, ಸಹಜವಾಗಿ ನಿಮ್ಮ ಸುತ್ತ-ಮುತ್ತಲಿನ ಜನ ಇದು ಅಷ್ಟು ಸುಲಭನಾ? ಅಷ್ಟು ಸುಲಭಕ್ಕಾಗುತ್ತಾ? ಎಂದು ಕೊಂಕ ಕಟ್ಟಿ ಮಾತಾನಾಡುತ್ತಾರೆ don’t worry.

Formula6. ಗೆಲವು ಹತ್ತಿರದಲ್ಲಿದ್ದಾಗಲೇ ಕೈ ಚೆಲ್ಲಬೇಡಿ.

Formula7. ನೀವು ಮಾಡುವ ಕೆಲಸ ಅಷ್ಟು ಸುಲಭವಲ್ಲವೆಂದು ಭಾವಿಸಿ ಕೆಲಸಕ್ಕೆ ಕೈ ಹಾಕಿ, ನೀವು ಮಾಡುವ ಕೆಲಸ ಅಷ್ಟು ಸುಲಭವಾಗಿ ದ್ದರೆ, ಬೀದಿಯ ಹತ್ತತ್ತು ಮಂದಿ ಆ ಕೆಲಸ ಮಾಡಿ ತೋರಿಸುತ್ತಿದ್ದರು. ಅದಕ್ಕೇ, ನೀನು ಕನಸು ಕಂಡಿರುವ
ಕೆಲಸ ಅಷ್ಟು ಸುಲಭದ್ದಲ್ಲ.

Formula8. ಏನೇ ಸಾಧಿಸ ಬೇಕೆಂದರೂ ಆರ್ಥಿಕ ಚೈತನ್ಯವೇ ಇರಬೇಕೆಂದು ತಪ್ಪು ತಿಳಿಯಬೇಡಿ. ಆರ್ಥಿಕ ಚೈತನ್ಯವೂ ಮುಖ್ಯ, ಅದರೆ ಅದನ್ನು ದಾಟಿದ್ದು ಆತ್ಮವಿಶ್ವಾಸವೆಂದು ನಂಬಿ.

Formula9. ಅದ್ಭುತಗಳನ್ನ ಸಾಧಿಸಬೇಕಾದರೆ ಶಾಲಾ ಮತ್ತು ಕಾಲೇಜಿನಲ್ಲಿ Topper ಆಗಿರಬೇಕೆಂದು ಭಾವಿಸಬೇಡಿ. ಬಿಲ್ ಗೇಟ್ಸ್ ಒಂದು ಮಾತು ಹೇಳುತ್ತಾರೆ. ನಾನು ಹೈಸ್ಕೂಲಿನಲ್ಲಿರಬೇಕಾದರೆ ಒಂದು-ಒಂದು ವಿಷಯದಲ್ಲಿ ಫುಲ್ ಆಗುತ್ತಿದೆ, ಆದರೆ ನನ್ನ ಸ್ನೇಹಿತ ಎಲ್ಲದರಲ್ಲೂ ಪಾಸ್ ಆಗುತ್ತಿದ್ದ. ಇವತ್ತು ಪಾಸ್ ಆಗಿದ್ದ ನನ್ನ ಸ್ನೇಹಿತ ಮೈಕ್ರೋಸಾ- ಎಂಬ ಸಂಸ್ಥೆ ಯಲ್ಲಿ ಇಂಜಿನಿ ಯರ್.

ಒಂದೊಂದರಲ್ಲಿ ಫೇಲ್ ಆಗುತ್ತಿದ್ದ ನಾನು ಆ ಕಂಪನಿಗೆ ಮಾಲೀಕ ಎಂದು. ಯಾವುದನ್ನೂ ಅಷ್ಟು ಸುಲಭವೆಂದು ಕಡೆಗಣಿಸ ಬೇಡಿ. Finally ಗೆಲ್ಲಲ್ಲೇ ಬೇಕೆಂದು ಹೋರಟಾಗ ಸೋತುಬಿಡುತ್ತೀರಾ, ಕಣ್ಣೀರು ಹಾಕುತ್ತೀರಾ. ಪರವಾಗಿಲ್ಲ ಮತ್ತೊಮ್ಮೆ ಮಗದೊಮ್ಮೆ ಪ್ರಯತ್ನಿಸಿ. ನಿಮ್ಮ ಬದುಕು ನಿಮ್ಮ destiny ಅದೇ. ಆದಾಗ ಪದೇ ಪದೇ ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ.

ಒಮ್ಮೆದೊಮ್ಮೆಲೆ ಯಶಸ್ಸನ್ನು ಬಯಸಬೇಡಿ. ಮತ್ತೇ ಅದು ಬಂದ ಹಾಗೆಯೇ ಹೋಗಿಬಿಡುತ್ತದೆ. ಸೋಲು ಬಂದಾಗ ಹೇಗೆ ಸೋಲು ಶಾಶ್ವತವಲ್ಲ ಎಂದು ಭಾವಿಸುತ್ತೀರೋ ಹಾಗೆ, ಗೆಲುವು ಕೂಡ ಶಾಶ್ವತವಲ್ಲ ಎಂದು ಭಾವಿಸಬೇಕು. ಏನೇ ಆಗಲಿ ಸೋತಾಗ ಸಮಾಜವನ್ನು ದ್ವೇಷಿಸುವುದು, ಗೆದ್ದಾಗ ನಾನೇ ಕಡೆದು ಕಟ್ಟೆ ಹಾಕಿದೆ ಎಂದು ಭಾವಿಸುವುದು ಅದು ಯಶಸ್ಸಲ್ಲ.

ನಿಮ್ಮ ಬಳಿ ಯಶಸ್ಸಿದ್ದಾಗ, ನಿಮ್ಮ ಬಳಿ ಗೆಲುವಿದ್ದಾಗ ಈ ಸಮಾಜಕ್ಕೆ, ನಿಮ್ಮ ಸಂಬಂಧಿಕರಿಗೆ, ನಿಮ್ಮ ಸ್ನೇಹಿತರಿಗೆ, ನಿಮ್ಮ ಇಷ್ಟಪಡುವವರಿಗೆ ಏನೆಲ್ಲಾ ಮಾಡಲು ಸಾಧ್ಯವೋ ಮಾಡಿಬಿಡಿ. ಗೆದ್ದಾಗ ನಿಮ್ಮ ಪ್ರಯತ್ನ, ಪರಿಶ್ರಮ ಗೆದ್ದಿತು ಎಂದು ಹೇಳಿಕೊಳ್ಳುವುದು. ಸೋತಾಗ, ಸೋತರೆ ಪ್ರಪಂಚ ಹೇಗೆ ನೋಡುತ್ತದೆ ಎಂದು ಭಾವಿಸುವುದು ಎರಡು ತಪ್ಪು. ನಿಮ್ಮ ಗೆಲುವು ನಿಮ್ಮದೇ, ನಿಮ್ಮ ಸೋಲು ನಿಮ್ಮದೇ. ಈ ಪ್ರಪಂಚದಲ್ಲಿರುವ ಬಹಳಷ್ಟು ವ್ಯಕ್ತಿಗಳಿಗೆ ಅವರದೇ ಆದ ಕೆಲಸಗಳಿದೆ, ಅವರದೇ ಆದ
ನೋವುಗಳಿದೆ. ಮುಂಜಾನೆಯಿಂದ ಮುಸ್ಸಂಜೆಯವರೆಗೂ ನಿಮ್ಮ ಬಗ್ಗೆ ಯಾರೂ ಯೋಚಿಸುತ್ತಾ ಕುಳಿತುಕೊಳ್ಳುವುದಿಲ್ಲ.

ಏನೇ ಆಗಲಿ ಎಲ್ಲರೂ ಗೆಲ್ಲಲ್ಲೇ ಬೇಕಾದ ದಿನ ಒಂದು ಇರುತ್ತದೆ. ನೀವು ನಾನು ಎಲ್ಲರೂ ಮೊನ್ನೆ ಜುಲೈ 17, ನನ್ನ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಬರೆದಿದ್ದಾರೆ. ಆಗಸ್ಟ್ 2ನೇ ವಾರದಲ್ಲಿ ಫಲಿತಾಂಶ ಬರುತ್ತದೆ. ಅಂದು ನಾನು ಗೆಲ್ಲುವ ದಿನ. ಅಂದು ನನ್ನ ವಿದ್ಯಾರ್ಥಿಗಳು ಗೆಲ್ಲುವ ದಿನ. ಅಂದು ನಮ್ಮ ಕರ್ನಾಟಕದ ವಿದ್ಯಾರ್ಥಿಗಳು ಗೆಲ್ಲುವ ದಿನ. ನಾನು ನಂಬಿದ್ದೇನೆ. ಆ ಫಲಿತಾಂಶ ಕೇವಲ ಪರಿಶ್ರಮದ ಗರ್ಜನೆಯಲ್ಲ. ಮಧ್ಯಮ ವರ್ಗದ, ಕನ್ನಡದ ಹುಡುಗ ಕಟ್ಟಿ ಬೆಳೆಸಿದ ಕರ್ನಾಟಕದ ಸ್ವಾಭಿಮಾನದ ಸಿಂಹ ಗರ್ಜನೆ.