ಇಂಡಿ : ಪಟ್ಟಣದ ಸಾತಪೂರದಲ್ಲಿರುವ ಆರ್.ಎಮ್. ಶಹಾ ಪಬ್ಲಿಕ್ ಶಾಲೆಯಲ್ಲಿ ೧೦ನೇ ವರ್ಷದ ಶಾಲಾ ಸಂಸತ್ತಿನ ಪ್ರತಿನಿಧಿ ಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ಶನಿವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಿ.ಐ.ಜಿ.ಪಿ (ಕೆಎಸ್‌ಆರ್‌ಪಿ)ಎಮ್. ವಿ ರಾಮಕೃಷ್ಣ ಪ್ರಸಾದ ಅವರು ಮಕ್ಕಳಿಗೆ ಪ್ರತಿಜ್ಞಾವಿಧಿ ಯನ್ನು ಬೋಧಿಸಿ ಮಾತನಾಡಿ, ಸಮಾಜದ ಬಗ್ಗೆ ಪ್ರೀತಿ ಇರುವ ವ್ಯಕ್ತಿಗಳು ನಿರ್ಮಾಣವಾಗಬೇಕಾದರೆ ಹಾಗೂ ನಾಯಕತ್ವದ ಗುಣಗಳಾದ ಆತ್ಮವಿಶ್ವಾಸ, ಸಹಕಾರ, ಶಾಂತಿ ಮುಂತಾದ ಗುಣಗಳು ಬೆಳೆಯಬೇಕಾದರೆ ಪ್ರತಿಜ್ಞಾವಿಽ ಸ್ವೀಕಾರ ಪ್ರಮುಖ ಪಾತ್ರ ವಹಿಸುತ್ತದೆ.
ಜೊತೆಗೆ ಮಕ್ಕಳು ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ. ಮಕ್ಕಳ ಸರ್ವ ತೋಮುಖ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಪ್ರಮುಖವಾದದ್ದು. ಮಕ್ಕಳಲ್ಲಿ ಸಾಧಿಸುವ ಛಲ, ಸೋಲನ್ನು ಸ್ವೀಕರಿಸುವ ಮನೋಭಾವವಿದ್ದಾಗ ಮಾತ್ರÀ ತಮ್ಮ ಜೀವನದ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಮಾಂಡAಟ್ ೬ನೇ ಬಟಾಲಿಯನ್, ಕಲಬುರಗಿಯ ಬಸವರಾಜ ಎಸ್ ಝಿಲ್ಲೆ ಮಾತನಾಡಿ, ಸಂಸ್ಥೆಯಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು,ಈ ವರ್ಷದಿಂದ ಈ ಶಾಲೆಯಲ್ಲಿ ಸ್ಟುಡೆಂಟ್ ಪೋಲೀಸ್ ಕೆಡಿಟ್ ಕೋರ್ಸ್ನ್ನು ಆರಂಭಿಸಲಾಗುವುದು ಎಂದು ಹೇಳಿದರು. ಅಲ್ಲದೇ ಮಕ್ಕಳು ರಾಷ್ಟನಾಯಕರ ನಾಯಕತ್ವದ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಿ ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಮಾತನಾಡಿ,ಮುಂದೆ ಗುರಿ ಇರಲಿ ಹಿಂದೆ ಒಬ್ಬ ಗುರುವಿರಲಿ ಎಂಬAತೆ ಮಕ್ಕಳಲ್ಲಿ ಆತ್ಮ ಸ್ಥೆöÊರ್ಯವನ್ನು ತುಂಬಲು ಶಿಕ್ಷಕರ ಮಾರ್ಗದರ್ಶನದ ಜೊತೆಗೆ ತಂದೆ-ತಾಯಿಗಳು ಸಂಸ್ಕಾರವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಯನ್ನು ತಲುಪಲು ಸಾಧ್ಯ. ಅಲ್ಲದೇ ಮಕ್ಕಳಲ್ಲಿ ವಿನಯತೆ, ಶಿಸ್ತು-ಸಂಯಮ ಬೆಳೆಸಲು ಈ ಪ್ರತಿಜ್ಞಾ ವಿಽ ಸ್ವೀಕಾರ ಕಾರ್ಯಕ್ರಮವು ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಮಾಂಡAಟ್ ಇಂಡಿಯಾ ರಿಜರ್ವ್ ಬಟಾಲಿಯನ್, ವಿಜಯಪುರದ ಎನ್.ಬಿ. ಮೆಳ್ಳಗಟ್ಟಿ , ಸಂಸ್ಥೆಯ ಕಾರ್ಯದರ್ಶಿ ಮಹೇಶ ಶಹಾ, ಆಡಳಿತಾಧಿಕಾರಿ ಕಲ್ಪನಾ ಶಹಾ, ಸದಸ್ಯರಾದ ನೀರಜಾಕ್ಷಿ ಕೆ, ಸುನೀಲ ಕುಲಕರ್ಣಿ, ನಿರಂಜನ ಶಹಾ, ಮಾಣಿಕ ಶಹಾ, ಹಾಗೂ ಪದವಿಪೂರ್ವ ವಿಭಾಗದ ಪ್ರಾಂಶುಪಾಲೆ ಪರವೀಣ ಜಮಾದಾರ ,ಶಾಲಾ ವಿಭಾಗದ ಪ್ರಾಚಾರ್ಯ ಪ್ರಕಾಶ ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕುಮಾರಿ ಸುಪ್ರಿಯಾ ಕುಲಕರ್ಣಿ, ಸಿದ್ಧಿಕಾ ನಾಗಠಾಣ, ಸಾವಿತ್ರಿ ಕರ್ನಾಕ್ ನಿರೂಪಿಸಿದರು, ಕುಮಾರಿ ಸೌಜನ್ಯ ಬಿದನೂರ ವಂದಿಸಿದರು. ಶಿಕ್ಷಕ ಭೀ.ಎ.ಕಡಿಹಳ್ಳಿ ಹಾಗೂ ಸವಿತಾ ಸಾಲಿ ವರದಿ ವಾಚಿಸಿದರು.