Monday, 6th January 2025

ಪಂಜಾಬ್ ಪ್ರಾಂತ್ಯ ಮುಖ್ಯಮಂತ್ರಿಯಾಗಿ ಚೌಧರಿ ಪರ್ವೇಜ್ ಇಲಾಹಿ

ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಚೌಧರಿ ಪರ್ವೇಜ್ ಇಲಾಹಿ ಪ್ರಮಾಣ ವಚನ ಸ್ವೀಕರಿಸಿದರು. ಡೆಪ್ಯೂಟಿ ಸ್ಪೀಕರ್ ತೀರ್ಪನ್ನು ಪಾಕ್ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದ ಕೆಲವೇ ಗಂಟೆಗಳ ನಂತರ ಪಿಎಂಎಲ್-ಕ್ಯೂಪಕ್ಷ ಸಭೆ ಸೇರಿ ಹೊಸ ನಾಯಕನ ಆಯ್ಕ ನಡೆಸಿತ್ತು.

ಪಂಜಾಬ್ ಮುಖ್ಯಮಂತ್ರಿ ಆಯ್ಕೆ ವೇಳೆ 10 ಮತಗಳನ್ನು ತಿರಸ್ಕರಿಸಿದ ಡೆಪ್ಯುಟಿ ದೋಸ್ತ್ ಮುಹಮ್ಮದ್ ಮಜಾರಿ ಅವರ ವಿವಾದಾತ್ಮಕ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡರಾತ್ರಿ ಅಕ್ರಮ ಎಂದು ಘೋಷಿಸಿತು ಮತ್ತು ಇಲಾಹಿ ಅವರು ಹೊಸ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತೀರ್ಪು ನೀಡಿದರು.

ಇಲಾಹಿ ಮಂಗಳವಾರ ತಡರಾತ್ರಿ ಇಸ್ಲಾಮಾಬಾದ್‍ಗೆ ತೆರಳಿ ಸುಪ್ರೀಂ ಕೋರ್ಟ್ ಆದೇಶದಂತೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.