Monday, 25th November 2024

ಆಗಸ್ಟ್ ೧ ರಿಂದ ೧೫ ವರೆಗೆ ರಿಯಾಯಿತಿ ದರದಲ್ಲಿ ಲಿವರ್ ಪರೀಕ್ಷೆ

ಫೈಬ್ರೋ ಸ್ಕಾನ್ ಪರೀಕ್ಷಾ ಕೇಂದ್ರಕ್ಕೆ ಚಾಲನೆ

ತುಮಕೂರು:ಸಿದ್ಧಗಂಗಾ ಆಸ್ಪತ್ರೆ ಜಿಲ್ಲೆಯ ಜನರಿಗೆ ಸೂಪರ್ ಸ್ಪೆಷಾಲಿಟಿ ಸೇವೆ ಒದಗಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯೋನ್ಮುಖವಾಗಿದ್ದು ಇದರ ಅಂಗವಾಗಿ ಜುಲೈ 28ರ ವಿಶ್ವ ಹೆಪಟೈಟಿಸ್ ದಿನದ ಅಂಗವಾಗಿ ಲಿವರ್ ಪರೀಕ್ಷೆಗಾಗಿಯೇ ನೂತನ ಫೈಬ್ರೋಸ್ಕಾನ್ ಪರೀಕ್ಷೆ ಪರಿಚಯಸಲಾಗುತ್ತಿದೆ. ಲಿವರ್ ಆನಾರೋಗ್ಯದಿಂದ ಬಳಲುತ್ತಿರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.

ಸಿದ್ಧಗಂಗಾ ಆಸ್ಪತ್ರೆಯಲ್ಲಿ  ಫೈಬ್ರೋ ಸ್ಕಾನ್ ಪರೀಕ್ಷಾ ಕೇಂದ್ರಕ್ಕೆ ಚಾಲನೆ ನೀಡಿ ಮಾತ ನಾಡಿ, ಪ್ರಸ್ತುತ ದಿನಗಳಲ್ಲಿ ಅಸಮರ್ಪಕ ಅಹಾರ ಪದ್ಧತಿ, ಅತಿಯಾದ ಬೊಜ್ಜು, ಮದ್ಯ ಪಾನದಂತಹ ಸೇರಿದಂತೆ ಇನ್ನಿತರ ಕಾರಣದಿಂದ ಮನುಷ್ಯನ ಲಿವರ್ ಹಾನಿಗೊಳ ಗಾಗುತ್ತಿದ್ದು ಫೈಬ್ರೋಸ್ಕಾನ್‌ನಂತಹ ಪರೀಕ್ಷೆಗಳು ಲಿವರ್‌ನ ಸಮಗ್ರ ಅರೋಗ್ಯವನ್ನು ಪತ್ತೆಹಚ್ಚಲು ನೆರವಾಗಲಿವೆ ಎಂದರು.

ಹೈಪಟೈಟಿಸ್ ಸ್ಪೆಷಲಿಸ್ಟ್ ಹಾಗೂ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ಈಶ್ವರ್ ಅಮಲಝರಿ ಮಾತನಾಡಿ ಲಿವರ್‌ನ ಆರೋಗ್ಯ ಪರೀಕ್ಷೆಗಾಗಿ ಇದುವರೆಗೂ ನಾವು ರಕ್ತಪರೀಕ್ಷೆ ಹಾಗೂ ಅಲ್ಟಾçಸೌಂಡ್ ಪರೀಕ್ಷೆಗಳನ್ನು ಮಾಡಬೇಕಿತ್ತು ಇದರಿಂದ ನಿಖರ ಹಾಗೂ ಸಂಪೂರ್ಣ ಫಲಿತಾಂಶ ಪಡೆಯುವುದು ಕಷ್ಟಕರವಾಗುತ್ತಿತ್ತು. ಈಗ ಪರಿಚಯಿಸುತ್ತಿರುವ ಫೈಬ್ರೋ ಸ್ಕಾö್ಯನ್ ಪರೀಕ್ಷೆಯಲ್ಲಿ ಲಿವರ್‌ನ ಎಲಾಸ್ಟಿಸಿಟಿ ಸೇರಿದಂತೆ ಲಿವರ್‌ನ ಸಮಸ್ಯೆಗಳ ನಿಖರ ಫಲಿತಾಂಶ ದೊರೆಯಲಿದ್ದು ನಿಖರ ಚಿಕಿತ್ಸೆಗೆ ಸಹಾಯಕವಾಗಲಿದೆ ಎಂದರು.

ಸೂಪರ್‌ಸ್ಪೆಷಾಲಿಟಿ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಹೃದ್ರೋಗ ತಜ್ಞ ಡಾ.ಭಾನು ಪ್ರಕಾಶ್ ಮಾತನಾಡಿ ಲಿವರ್ ಆರೋಗ್ಯದ ಬಗೆಗಿನ ಜನರ ನಿರ್ಲಕ್ಷ್ಯ ಹಾಗೂ ಪರೀಕ್ಷಾ ಕೇಂದ್ರಗಳ ಕೊರತೆಯಿಂದ ಜಿಲ್ಲೆಯ ಜನರು ಬೆಂಗಳೂರಿನಂತಹ ನಗರಗಳನ್ನೇ ಅವಲಂಬಿಸಬೇಕಿತ್ತು. ಆದರೆ, ನಮ್ಮ ಆಸ್ಪತ್ರೆಯಲ್ಲಿ ಪರಿಚಯಿಸುತ್ತಿರುವ ಇಂತಹ ವಿಶ್ವದರ್ಜೆಯ ಪರೀಕ್ಷಾ ಕೇಂದ್ರಗಳು ಬೆಂಗ ಳೂರಿನ ಅವಲಂಬನೆ ಕಡಿಮೆ ಮಾಡುವುದಲ್ಲದೆ ಲಿವರ್ ಸಮಸ್ಯೆ ಉಳ್ಳವರಿಗೆ ಹೊಸ ಆಶಾಕಿರಣವಾಗಿದೆ ಎಂದರು.

****

ಸಿದ್ಧಗಂಗಾ ಆಸ್ಪತ್ರೆಯಲ್ಲಿ ಹೆಪಟೈಟಿಸ್ ಮಾಸಾಚರಣೆ ಅಂಗವಾಗಿ  ಆಗಸ್ಟ್ 1 ರಿಂದ 15ರ ವರೆಗೆ ರಿಯಾಯಿತಿ ದರದಲ್ಲಿ ಲಿವರ್ ಪರೀಕ್ಷೆ ನಡೆಯುತ್ತಿದೆ. ಕೇವಲ 999 ರೂಗಳಿಗೆ ಲಿವರ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಸಂದರ್ಶನ ಸೇರಿ,ಆರ್‌ಬಿಎಸ್,ಹೆಚ್‌ಬಿಎಸ್‌ಎಜಿ,ಹೆಚ್‌ಸಿವಿ,ಲಿಪಿಡ್ ಪ್ರೊಫೈಲ್,ಎಲ್‌ಎಫ್‌ಟಿ, ಫೈಬ್ರೋಸ್ಕಾನಿಂಗ್,ಅಲ್ಟ್ರಾಸೌಂಡ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ ಅಗತ್ಯ ಉಳ್ಳವರು ಉಪಯೋಗಿಸಿಕೊಳ್ಳಬೇಕು ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.