ಕೋಲಾರ: ಸ್ವತಂತ್ರ ಭಾರತದ ೭೫ ನೇಯ ವರ್ಷಾಚರಣೆಯ ಪ್ರಯುಕ್ತ ಆಜಾದಿಕಾ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ರಾಷ್ಟ್ರಧ್ವಜ ಮಾರಾಟ ಮಳಿಗೆಯನ್ನು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ ಮಾತನಾಡುತ್ತಾ ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಪ್ರೇಮದ ಪ್ರತೀಕವಾಗಿ ಪ್ರತಿ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಸರಕಾರ ಹರ್ ಘರ್ ತಿರಂಗಾ ಎಂಬ ವಿನೂತನ ಕಾರ್ಯಕ್ರಮ ಹಾಕಿಕೊಂಡಿದ್ದು, ಅದರ ಅಂಗವಾಗಿ ಪ.ಪಂ ಕಾರ್ಯಾಲಯ ದಲ್ಲಿ ರಾಷ್ಟ್ರಧ್ವಜ ಮಾರಾಟ ಮಳಿಗೆ ಪ್ರಾರಂಭಿಸಿದ್ದು ಸರಕಾರದ ನಿಯಮದಂತೆ ಪ್ರತಿ ಧ್ವಜಕ್ಕೆ ೨೨ ರೂ ಗಳ ದರ ನಿಗದಿ ಪಡಿಸಿದ್ದು ಪಟ್ಟಣದ ನಾಗರಿಕರು ಹೆಸರು ನೊಂದಾ ಯಿಸಿ ರಾಷ್ಟ್ರಧ್ವಜ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.