– ಹೊಚ್ಚ ಹೊಸ XT NRG ವೈವಿಧ್ಯವನ್ನು ಸೇರಿಸುವ ಮೂಲಕ ರೇಂಜ್ನ ಉನ್ನತೀಕರಣ
ಬೆಂಗಳೂರು, 3 ಆಗಸ್ಟ್, 2022: ತನ್ನ ‘ಎಂದೆಂದಿಗೂ ಹೊಸತು(New Forever)’ ಸಿದ್ಧಾಂತಕ್ಕೆ ಅನುಗುಣವಾಗಿ ಮತ್ತು ಟಿಯಾಗೊ ಎನ್ಆರ್ ಜಿನ 1ನೆ ವಾರ್ಷಿಕೋತ್ಸವವನ್ನು ಆಚರಿಸುತ್ತಾ, ಭಾರತದ ಮುಂಚೂಣಿ ಆಟೋಮೋಟಿವ್ ಬ್ರ್ಯಾಂಡ್ ಟಾಟಾ ಮೋಟರ್ಸ್ ರೂ. INR 6.42 lakhs ಲಕ್ಷಗಳಲ್ಲಿ ಹೊಸ XT NRG ವೈವಿಧ್ಯವನ್ನು ಪರಿಚಯಿಸಿತು.
ತಾನು ಪರಿಚಯಗೊಂಡಾಗಿನಿಂದಲೂ ಟಿಯಾಗೊ ಎನ್ಆರ್ ಜಿ, ತನ್ನ ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯ ಪಡೆದುಕೊಂಡಿದೆ. ಟಿಯಾಗೊ ಪೆಟ್ರೋಲ್ ವೈವಿಧ್ಯದ ಮಾರಾಟದ 15%ಗೆ ಕೊಡುಗೆ ಸಲ್ಲಿಸುತ್ತಿರುವ ಅದು ತನ್ನ ಎಸ್ಯುವಿಯಂತಹ ವಿನ್ಯಾಸ, ತನ್ನ ವರ್ಗದಲ್ಲಿ ಅತ್ಯುತ್ತಮ ಸುರಕ್ಷತೆ ರೇಟಿಂಗ್(GNCAP ದಿಂದ 4 ನಕ್ಷತ್ರಗಳು)ನೊಂದಿಗೆ ಕಠಿಣವಾದ ರಸ್ತೆ ಸಾಮರ್ಥ್ಯಕ್ಕಾಗಿ ಮೆಚ್ಚುಗೆ ಪಡೆದುಕೊಂಡಿದೆ. ಈ ಹೊಸ ವೈವಿಧ್ಯದ ಸೇರ್ಪಡೆಯೊಂದಿಗೆ ಟಿಯಾಗೊ ಎನ್ಆರ್ ಜಿ ಈಗ ಎರಡು ಟ್ರಿಮ್ಗಳಲ್ಲಿ, ಅಂದರೆ, ಟಿಯಾಗೊ XT NRG ಮತ್ತು ಟಿಯಾಗೊ XZ NRG ವೈವಿಧ್ಯಗಳಲ್ಲಿ ಲಭ್ಯವಾಗಲಿದೆ.
ಹೊಸ ಟಿಯಾಗೊ NRG XT ವೈವಿಧ್ಯವು ಹೊಸ 14” ಹೈಪರ್ ಸ್ಟೈಲ್ ವ್ಹೀಲ್ಗಳು, ಹರ್ಮನ್ ಎಮ್ಟಿದಿಂದ(HarmanTM) 3.5” ಇನ್ಫೋಟೇನ್ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೇಲೆ ಅನುಷ್ಠಾನಗೊಳಿಸಲಾಗಿರುವ ನಿಯಂತ್ರಕಗಳು, ಎತ್ತರ ಸರಿಪಡಿಸಿಕೊಳ್ಳ ಬಹುದಾದ ಡ್ರೈವರ್ ಸೀಟ್, ಮುಂಬದಿ ಮಂಜು ದೀಪಗಳು, ಹಾಗೂ ಇನ್ನೂ ಅನೇಕ ಅಂಶಗಳಲ್ಲದೆ, 181 ಮಿ.ಮೀ ಹೈ ಗ್ರೌಂಡ್ ಕ್ಲಿಯರೆನ್ಸ್, ಒರಟಾದ ಕ್ಲ್ಯಾಡಿಂಗ್ಸ್, ರೂಫ್ ರೇಲ್ಸ್ ಮತ್ತು ಇದ್ದಿಲುಕಪ್ಪು ಒಳಾಂಗಣಗಳಿರುವ ಇನ್ಫಿನಿಟಿ ಬ್ಲ್ಯಾಕ್ ರೂಫ್ ಮುಂತಾದ ಎನ್ಆರ್ ಜಿ ವಿನ್ಯಾಸ ಅಂಶಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದೆ.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ.,ನ ಮಾರಾಟ, ಮಾರುಕಟ್ಟೆ ಮತ್ತು ಗ್ರಾಹಕ ಕೇರ್ ವಿಭಾಗದ ಉಪಾಧ್ಯಕ್ಷ ಶ್ರೀ ರಾಜನ್ ಅಂಬ,“ಟಿಯಾಗೊ ಎನ್ಆರ್ ಜಿಯನ್ನು ನಾವು ಪರಿಚಯಿಸಿದಾಗಿನಿಂದಲೂ ಅದು ನಮ್ಮ ಗ್ರಾಹಕರ ಕಲ್ಪನೆಗಳನ್ನು ಹಿಡಿದಿಟ್ಟು ಸಾಧಕರು ಮತ್ತು ಜೀವನವನ್ನು ಸಂಪೂರ್ಣ ಅನುಭವಿಸ ಬೇಕೆನ್ನುವವರಿಗೆ ಕಠಿಣ ಟೆರೇನ್ ಕಾರ್ಯಕ್ಷಮತೆ ಒದಗಿಸುವ ಅತ್ಯಂತ ನೆಚ್ಚಿನ ಹ್ಯಾಚ್ಬ್ಯಾಕ್ ಆಗಿದೆ. ಈ ಹಬ್ಬದ ಋತುವಿನಲ್ಲಿ ಪ್ರಾರಂಭಿಸಿ, ಟಿಯಾಗೊ XT NRGCಅನ್ನು ನಮ್ಮ ಗ್ರಾಹಕರಿಗೆ ಪರಿಚಯಿಸುತ್ತಿರುವುದಕ್ಕೆ ನಮಗೆ ಬಹಳ ಹರ್ಷವಾಗುತ್ತಿದೆ.
ಆಕರ್ಷಕ ಬೆಲೆಯಿರುವ ಈ ವೈವಿಧ್ಯವು ಉತ್ತಮ ಪ್ಯಾಕೇಜ್ ಹೊಂದಿದ್ದು ಚಾಲಕ ಅನುಭವವನ್ನು ವರ್ಧಿಸುತ್ತದೆ. ಅಂಶ ಸಮೃದ್ಧವಾಗಿರುವ ಈ XT ವೈವಿಧ್ಯದ ಸೇರ್ಪಡೆಯು ಎನ್ಆರ್ ಜಿಯನ್ನು ಮತ್ತು ಒಟ್ಟಾರೆ ಟಿಯಾಗೊ ಪೋರ್ಟ್ ಪೋಲಿಯೊ ವನ್ನು ಇನ್ನಷ್ಟು ಬಲಪಡಿಸಿ ಅವುಗಳ ಮಾರಾಟ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂಬ ವಿಶ್ವಾಸ ನಮಗಿದೆ”ಎಂದು ಹೇಳಿದರು.
ಈ ಆಚರಣೆಗೆ ಸೇರ್ಪಡೆಯಾಗಿ, ಟಾಟಾ ಮೋಟರ್ಸ್ ತನ್ನ ಪ್ರಸ್ತುತದ ಟಿಯಾಗೊ XT ವೈವಿಧ್ಯವನ್ನು ನವೀಕರಿಸಿದ್ದು ಇದನ್ನು ಇನ್ನಷ್ಟು ಕೌತುಕಮಯವಾದ ಆಯ್ಕೆಯನ್ನಾಗಿ ಮಾಡಿದೆ. ಇವು, 14” ಹೈಪರ್ ಸ್ಟೈಲ್ ವ್ಹೀಲ್ಗಳು, ಸರಿಪಡಿಸಿಕೊಳ್ಳಬಹುದಾದ ಡ್ರೈವರ್ ಸೀಟ್, ಹಿಂದಿನ ಪಾರ್ಸಲ್ ಶೆಲ್ಫ್ ಮತ್ತು ಇತರ ಅಂಶಗಳನ್ನು ಒಳಗೊಂಡಿವೆ. ಈ ಅಂಶಗಳನ್ನು ಟಿಯಾಗೊ XT, XTA ಮತ್ತು iCNG ಒಳಗೊಂಡಂತೆ, ಎಲ್ಲಾ XT ಶ್ರೇಣಿಯಾದ್ಯಂತ ಲಬ್ಯಗೊಳಿಸಲಾಗುತ್ತದೆ.
ಟಿಯಾಗೊ XT ಪೆಟ್ರೋಲ್ ವೈವಿಧ್ಯಕ್ಕಾಗಿ ಸಂಸ್ಥೆಯು ಐಚ್ಛಿಕ ರಿದಮ್ ಪ್ಯಾಕ್ ಸೇರಿಸಿದ್ದು ಇದು 7” ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್, ಹಿಂಬದಿ ಕ್ಯಾಮರಾ ಮತ್ತು 4 ಟ್ವೀಟರ್ ಗಳನ್ನು ಹೊಂದಿದೆ. ಹೊಸ ಟಿಯಾಗೊ XT ಟ್ರಿಮ್ನಲ್ಲಿ ಹೆಚ್ಚುವರಿ ರೂ. INR 30,000 ಪಾವತಿಸುವ ಮೂಲಕ ರಿದಮ್ ಪ್ಯಾಕ್ ಪಡೆದುಕೊಳ್ಳಬಹುದು. ಮೇಲಾಗಿ, ಹೊಸ XT ಟ್ರಿಮ್, ಪ್ರಸ್ತುತ ಇರುವ ಒಪಾಲ್ ವ್ಹೈಟ್, ಡೇಟೋನಾ ಗ್ರೇ, ಅರಿಝೋನಾ ಬ್ಲೂ, ಮತ್ತು ಫ್ಲೇಮ್ ರೆಡ್ ವರ್ಣ ಆಯ್ಕೆಗಳ ಜೊತೆಗೆ ಮಿಡ್ನೈಟ್ ಪ್ಲಾಟಿನಮ್ನ ಪರಿಚಯವನ್ನು ಒಳಗೊಂಡಿದೆ.
ಕೊಡುಗೆಗಳು ಹಾಗೂ ಕಾರು ಖರೀದಿ ಆಯ್ಕೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಡೀಲರ್ಶಿಪ್ಗೆ ಕರೆ ಮಾಡಿ ಅಥವಾ https://cars.tatamotors.com ಗೆ ಭೇಟಿ ನೀಡಿ.