Monday, 25th November 2024

ತಮ್ಮಡಿಹಳ್ಳಿ ಕೆರೆಗೆ ಗಂಗಾ ಪೂಜೆ, ಬಾಗಿನ ಅರ್ಪಣೆ

ತುಮಕೂರು: ಗ್ರಾಮಾಂತರ ಗೂಳೂರು ಹೋಬಳಿ,ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿ ಹಳ್ಳಿ ಗ್ರಾಮದ ಕೆರೆಯು ಸುಮಾರು 25 ವರ್ಷಗಳ ಬಳಿಕ ತುಂಬಿ ಕೋಡಿ ಹರಿಯುತ್ತಿದ್ದು, ಶ್ರೀ ಸಿದ್ದಲಿಂಗ ದೇಶಿಕೇಂದ್ರ ಸ್ವಾಮೀ ರವರ ಜೊತೆಗೂಡಿ ಶಾಸಕರಾದ ಗೌರಿಶಂಕರ್ ರವರು ಹಾಗೂ ಗೂಳೂರು ಜಿಲ್ಲಾ ಪಂಚಾಯತಿ ಜೆಡಿಎಸ್ ಅಧ್ಯಕ್ಷರಾದ  ಪಾಲನೇತ್ರಯ್ಯ, ತಮ್ಮಡಿ ಹಳ್ಳಿ ಹಾಗೂ ಅಕ್ಕ- ಪಕ್ಕದ ಗ್ರಾಮಸ್ಥರ ಸಮೂಹದೊಂದಿಗೆ ತಮ್ಮಡಿಹಳ್ಳಿ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಗಂಗಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ 1000,ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಅಣ್ಣ ತಮ್ಮ ಮಗನ ಸ್ಥಾನದಲ್ಲಿ ನಿಂತು ಹಿಂದೂ ಸಂಪ್ರದಾಯದಂತೆ ಅರಿಶಿಣ, ಕುಂಕುಮ, ಬಾಳೆ, ಸೀರೆ, ಬಾಗಿನ ನೀಡುವ ಮೂಲಕ ಹೆಣ್ಣು ಮಕ್ಕಳಿಗೂ ಕೂಡ ಭಕ್ತಿ ಯನ್ನು ಸಮರ್ಪಿಸಿ, ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭ ಕೋರಿದರು.
ಗಂಗಾ ಪೂಜಾ ಕಾರ್ಯಕ್ರಮ ಬಳಿಕ ಶಾಸಕರಾದ ಡಿಸಿ ಗೌರಿಶಂಕರ್ ಗೂಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಲವು ಗ್ರಾಮ ಗಳ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜೋಲ ಮಾರನಹಳ್ಳಿ ಅಂಗನವಾಡಿ ಕೇಂದ್ರ ಉದ್ಘಾಟನೆ, ಹಾಗೂ ಜೋಲಾ ಮಾರನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ, ಗೂಳೂರು ಗ್ರಾಮದ ಶ್ರೀ ಗಣೇಶ ಗ್ರಾಮಾಂತರ ಪ್ರೌಢಶಾಲೆಯ ಸುಮಾರು 450,ಕ್ಕೂ ಹೆಚ್ಚು ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಿದರು.
ಕಂಬತ್ತನಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ, ಕಂಬತ್ತನಹಳ್ಳಿ, ರಂಗಯ್ಯನಪಾಳ್ಯ, ಲಕ್ಷ್ಮಣಸಂದ್ರ,ಕುಮಂಜಿ ಪಾಳ್ಯ, ಈ ಎಲ್ಲಾ ಗ್ರಾಮಗಳಿಗೆ 20 ಲೀಟರ್ ನೀರಿನ ಕ್ಯಾನ್ ಗಳನ್ನು ಉಚಿತವಾಗಿ ನೀಡಿದರು, ಹಾಗೂ ಅಲ್ಲಿ ನೆರೆದಿದ್ದ ಅಂತಹ ಸುಮಾರು 500ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಣ್ಣ ತಮ್ಮ ಮಗನ ಸ್ಥಾನದಲ್ಲಿ ನಿಂತು ಹಿಂದೂ ಸಂಪ್ರ ದಾಯದಂತೆ, ಶಾಸಕರು ಹಾಗೂ ಪಾಲನೇತ್ರಯ್ಯ ಸಮಕ್ಷಮದಲ್ಲಿ ಹರಿಶಿಣ, ಕುಂಕುಮ, ಸೀರೆ, ಬಳೆ, ಬಾಗಿನ, ನೀಡುವ ಮೂಲಕ ಹೆಣ್ಣು ಮಕ್ಕಳಿಗೂ ಕೂಡ ಭಕ್ತಿಯನ್ನು ಸಮರ್ಪಿಸಿ, ವರಮಹಾಲಕ್ಷ್ಮಿ ಹಬ್ಬಕ್ಕೆ ಶುಭ ಕೋರಿದರು.
ವಿವಿಧ ಗ್ರಾಮಗಳ ಉದ್ಘಾಟನಾ ಸಮಾರಂಭದಲ್ಲಿ ಶಾಸಕರು ಪ್ರತಿ ಗ್ರಾಮಗಳಿಗೂ ಭೇಟಿ ನೀಡಿದಾಗಲೂ ಅಲ್ಲಿನ ಸ್ಥಳೀಯ ಬಡಕುಟುಂಬ ಆರೋಗ್ಯ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ವೈಯಕ್ತಿಕ ಸಮಸ್ಯೆಗಳ ಸಹಾಯಕ್ಕಾಗಿ ಸ್ಥಳದಲ್ಲೇ 2, ಲಕ್ಷಕ್ಕೂ ಹೆಚ್ಚು ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.
ಇದೇ ಸಂದರ್ಭದಲ್ಲಿ ಗೂಳೂರು ಜಿಲ್ಲಾ ಪಂಚಾಯತಿ ಉಸ್ತುವಾರಿ ಪಾಲನೇತ್ರಯ್ಯ, ತಾಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ರಾದ ಗೋವಿಂದರಾಜು, ಮಸ್ಕಲ್ ಮೋಹನ್, ಮಾಜಿ ಎಪಿಎಂಸಿ ಉಪಾಧ್ಯಕ್ಷರಾದ ಶ್ರೀಮತಿ ವಿಜಯ್ ಕುಮಾರಿ, ಕೈದಾಳ ರಮೇಶ್, ಸ್ವಾಮಿ, ರಾಜಣ್ಣ, ಮಂಜಣ್ಣ,ಹಾಗೂ ಅನೇಕ ಮುಖಂಡರುಗಳು ಗ್ರಾಮಸ್ಥರುಗಳು ಉಪಸ್ಥಿತರಿದ್ದರು