Sunday, 15th December 2024

ನಿತೀಶ್ ಕುಮಾರ್ ಕಣ್ಣಾಮುಚ್ಚಾಲೆ

ಬಿಹಾರದ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ಮಿತ್ರಪಕ್ಷ ಬಿಜೆಪಿ ಜತೆಗೆ ಮತೊಮ್ಮೆ ಸೆಟೆದುಕೊಂಡಿ
ದ್ದಾರೆಯೇ? ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಈ ಪ್ರಶ್ನೆ ಹುಟ್ಟಿಕೊಳ್ಳುವುದು ಅಸಹಜವೇನಲ್ಲ.

ಅನುಕೂಲ ಸಿಂಧು ಮತ್ತು ಕುಟುಂಬ ರಾಜಕಾರಣವನ್ನು ಸದಾಕಾಲ ನಡೆಸುತ್ತ ಬಂದಿರುವ ಕೆಲವು ಪ್ರಾದೇಶಿಕ ನಾಯಕರ ಸಾಲಿನಲ್ಲಿ ನಿತೀಶ್ ಕುಮಾರ ಕೂಡ ಇದ್ದಾರೆ ಎನ್ನುವುದು ಕಾಲ ಕಾಲಕ್ಕೆ ಅವರ ನಡವಳಿಕೆ ಗಳಿಂದಲೇ ತಿಳಿದುಬರುತ್ತದೆ.

ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸಬೇಕೆಂಬ ಮಹದಾಸೆ ಇರುವುದೇನೂ ತಪ್ಪಲ್ಲ. ಆದರೆ ಸಮಯ, ಸಂದರ್ಭ, ಸವಾಲುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ, ಹೊಸತನದ ಕಡೆಗೆ ಸಾಗುವ ತುಡಿತ- ಇವೆಲ್ಲವೂ ನಾಯಕನಾಗಲು ಬಯಸುವ ವ್ಯಕ್ತಿಯಲ್ಲಿ ಅಪೇಕ್ಷಣೀಯವಾದ ಗುಣಗಳು.

ಜತೆಗೆ ಕಾಲಕಾಲಕ್ಕೆ ಬದಲಾಗದಿರುವ ಸ್ಥಿರಗುಣವನ್ನು ಪ್ರದರ್ಶಿಸ ಬೇಕಾದುದು ನಾಯಕತ್ವ ಬಯಸುವವರ ಧರ್ಮ. ನಿತೀಶ ಕುಮಾರ್ ಅವರಲ್ಲಿ ಕಂಡುಬಂದಿರುವ ಒಂದೇ ಸ್ಥಿರಗುಣವೆಂದರೆ, ಹೇಗಾದರೂ ಸರಕಾರವನ್ನು ಮುಂದುವರಿಸಿಕೊಂಡು ಹೋಗಬೇಕೆನ್ನುವ ಮತ್ತು ಅದಕ್ಕಾಗಿ ರಾಜಕೀಯ ನೀತಿ-ಸಿದ್ಧಾಂತಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಪ್ರವೃತ್ತಿ ಮಾತ್ರ ಸ್ಥಿರವಾಗಿ ಗೋಚರಿಸುತ್ತಿದೆ.

ಎಲ್ಲ ಪಕ್ಷಗಳಿಗೂ ತಮ್ಮ ಸರಕಾರಗಳು ಶಾಶ್ವತವಾಗಿ ಇರಬೇಕು, ಪದೇ ಪದೇ ತಾವೇ ಪುನರಾಯ್ಕೆಯಾಗಿ ಆಡಳಿತದ
ಚುಕ್ಕಾಣಿ ಹಿಡಿಯಬೇಕು ಎಂಬ ಆಸೆ ಇರುವುದು ತಪ್ಪಲ್ಲ. ಕೇಂದ್ರದಲ್ಲಿ ಈಗ ಅಽಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೂ ಇದೇ ಆಸೆ ಇದೆ. ಪ್ರಧಾನಿ ಹುದ್ದೆಯ ಮೇಲೆ ಕಣ್ಣೀಟ್ಟಿರುವ ನಿತೀಶ್ ಕುಮಾರ್ ಕೇಂದ್ರದ್ಲಿ ಮುಂಽನ ಚುನಾವಣೆಗೆ ಇನ್ನೂ ಎರಡು ವರ್ಷಗಳು ಇರುವಂತೆಯೇ ತಾಲೀಮು ಆರಂಭಿಸಿಬಿಟ್ಟಿದ್ದಾರೆ.

ಬಿಜೆಪಿಗೆ ಖೊಕ್ ಕೊಟ್ಟು ಕಾಂಗ್ರೆಸ್ ಜತೆ ಕೈಜೋಡಿಸಿಕೊಂಡು ಬಿಹಾರ ಕೈತಪ್ಪಿದರೆ ಕೇಂದ್ರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ವಾದರೆ ತಮ್ಮದೂ ಒಂದು ಅದೃಷ್ಟ ಪರೀಕ್ಷೆ ಮಾಡಿಕೊಳ್ಳೋಣ ಎಂಬ ನಿಲುವಿಗೆ ಬಂದಂತೆ ತೋರುತ್ತದೆ. 2019ರ ಲೋಕ ಸಭಾ ಚುನಾವಣೆ ಸಂದರ್ಭದಲ್ಲೂ ನಿತೀಶ್ ಕುಮಾರ್ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರ ಜತೆಗೆ ಒಳ್ಳೆಯ ಸಂಬಂಧವನ್ನು ಹೊಂದಿರಲಿಲ್ಲ.

ಆದರೆ ಮೋದಿ ನೇತೃತ್ವದ ಬಿಜೆಪಿ ತನ್ನ ಮೊದಲ ಅವಽಗಿಂತಲೂ ಹೆಚ್ಚಿನ ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ ಬಂದಾಗ ಮೋದಿ ಅವರನ್ನು ಮೆಚ್ಚಿಕೊಂಡಂತೆ ತೋರಿಕೆಗಾದರೂ ತೋರ್ಪಡಿಸಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿಬಿದ್ದಿದ್ದರು ನಿತೀಶ್. ಅವರ ನಡೆಗಳು ಯಾವ ಫಲಿತಾಂಶವನ್ನು ನೀಡುತ್ತವೆ ಎಂಬುದನ್ನು ಕಾಲವೇ ಹೇಳಬೇಕು.