ಕಾಬೂಲ್: ಆಫ್ಘಾನಿಸ್ತಾನದ ದಕ್ಷಿಣ ಹೆಲ್ಮಂಡ ಪ್ರಾಾಂತ್ಯ, ಉತ್ತರ ಬಾಲ್‌ಖ್ ಮತ್ತು ಜವ್ಜನ್ ಪ್ರಾಾಂತ್ಯಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದು, 30 ಮಂದಿ ಗಯಾಯಗೊಂಡಿದ್ದಾರೆ ಎಂದು ಅಫ್‌ಘಾನ್ ರಾಷ್ಟ್ರೀಯ ಸೇನೆ ಬುಧವಾರ ತಿಳಿಸಿದೆ.
ದಕ್ಷಣ ಹೆಲ್ಮಾಾಂಡ್ ಪ್ರಾಾಂತ್ಯದ ಸಾಂಗಿನ್ ಜಿಲ್ಲೆಯಲ್ಲಿ ಅಫಘಾನ್ ಪಡೆಗಳು ನಡೆಸಿದ ಕಾರ್ಯಚರಣೆಯಲ್ಲಿ ಕನಿಷ್ಠ ನಾಲ್ಕು ತಾಲಿಬಾನ್ ದಂಗೆಕೋರರು ಸಾವನ್ನಪ್ಪಿ ಐದು ಮಂದಿ ಗಾಯಗೊಂಡಿದ್ದಾರೆ ತಿಳಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಬಾಲ್‌ಕ್ ಮತ್ತು ಜಾವ್ಜಾನ್‌ನಲ್ಲಿ ನಡೆದ ಕಾರ್ಯಾಚರಣೆ ಮತ್ತು ವೈಮಾಣಿಕ ದಾಳಿಯಲ್ಲಿ 17 ತಾಲಿಬಾನ್ ದಂಗೆಕೋರರು ಸಾವನ್ನಪ್ಪಿದ್ದಾರೆ ಹಾಗೂ 25 ಮಂದಿ ಗಾಯಗೊಂಡಿದ್ದಾರೆ ಎಂದು ಶಾಹೀನ್ ಕಾರ್ಪ್‌ಸ್ ತಿಳಿಸಿದೆ.