ಗುಬ್ಬಿ : ತಾಲೂಕಿನ ಕಸಬ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಶ್ರೀ ಮಾರಮ್ಮ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ ಉದ್ಘಾಟನಾ ಸಮಾರಂಭ ಬಹಳ ಯಶಸ್ವಿಯಾಗಿ ನಡೆಯಿತು.
ಶನಿವಾರ ಗಂಗಾ ಪೂಜೆಯೊಂದಿಗೆ ಗದ್ದೇಹಳ್ಳಿ ಶ್ರೀ ಮಾರಮ್ಮ ದೇವರ ಮೆರವಣಿಗೆ ಮೂಲಕ ಬಂದು ಸಂಜೆ ಗಣಪತಿ ಗಂಗಾ ಪೂಜೆ ಗೋಮಾಸ ಪೂಜಾಸಹಿತ-ಕಲಶದೊಂದಿಗೆ ಪ್ರವೇಶ-ಪುಣ್ಯಾಹ ಅಚಾರ್ಯ ಋತ್ವಿಕ್ ವರುಣ ರಕ್ಷಾಬಂದನಃ ಮತ್ಸಂಗ್ರಹಣೆ ಅನಿವಾರ್ಣ ದೀಪಾರಾಧನೆ, ಅಂಕುರಾರ್ಪನೆ, ದ್ವಾರಕಾದ್ವಜ ಕುಂಬಾರಾಧನೆ ವಾಸ್ತು ಆರಾಧನೆ, ವಾಸ್ತು ರಾಕ್ಷೆÆÃಜ್ಞ ಹೋಮ ಬಿಂಬಶುದ್ದಿ ಅಧಿವಾಸಗಳು ಮಹಾ ಮಂಗಳಾರಾತಿ ಮತ್ತು ದಿ. ಆಗಸ್ಟ್ ೮ ರಂದು ಬಾನುವಾರ ಮಂಡಲಾರಾಧನೆ, ಪ್ರಧಾನ ಕಲಶಾರಾಧನೆ, ಅಗ್ನಿಪ್ರತಿಷ್ಠೆ ಗಣಪತಿ ನವಗ್ರಹ ಮೃತ್ಯಂಜಯ ಶ್ರೀ ಸೂಕ್ತ ಪುರಷ ಸೂಕ್ತ ಪರಿವಾರ ಮೂರ್ತಿಹೋಮಗಳು ನೇತ್ರೋ ನ್ಮಿಲನ ತತ್ವನ್ಯಾಸ ಷೋಡನ್ಯಾಸ ಪ್ರಾಣ ಪ್ರತಿಷ್ಠೆ, ಪ್ರಧಾನ ಹೋಮ ಪೂರ್ಣಾಹುತಿ ಕುಂಭಾಬಿಷೇಕ ಅಲಂಕಾರ, ಮಹಾನಿವೇದನ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಯಿತು. ಎರಡು ದಿನಗಳ ಕಾಲ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಈ ಕಾರ್ಯಕ್ರಮದಲ್ಲಿ ತೊರೇಹಳ್ಳಿ ಗ್ರಾಮದ ಗ್ರಾಮಸ್ಥರು ಭಕ್ತಾದಿಗಳು ಹಾಗೂ ಇನ್ನಿತರರು ಹಾಜರಿದ್ದರು.