Sunday, 24th November 2024

16,299 ಹೊಸ ಕೋವಿಡ್ ಪ್ರಕರಣ ದೃಢ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 16,299 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 53 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ 4,42,06,996 ಕ್ಕೆ ಏರಿಕೆಯಾಗಿದೆ. ಆ ಪೈಕಿ 5,26,879 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ 4,35,55,041 ಮಂದಿ ಗುಣಮುಖರಾಗಿದ್ದಾರೆ. ಸದ್ಯ ದೇಶದಲ್ಲಿ 1,25,076 ಸಕ್ರಿಯ ಪ್ರಕರಣಗಳಿವೆ.

ಪಂಜಾಬ್‌ನಲ್ಲಿ 13,253, ಮಹಾರಾಷ್ಟ್ರದಲ್ಲಿ 11,889, ಕರ್ನಾಟಕದಲ್ಲಿ 10,351, ಕೇರಳದಲ್ಲಿ 9,865, ತಮಿಳುನಾಡಿನಲ್ಲಿ 8,586 ಸಕ್ರಿಯ ಪ್ರಕರಣಗಳಿವೆ. ದೇಶದಾದ್ಯಂತ ಒಟ್ಟು 207.29 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.