ಕಿರುತೆರೆಯಲ್ಲಿ ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ, ಹೀಗೆ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಅವುಗಳ ಸಾಲಿಗೆ ಜನನಿ ಎಂಬ ಹೊಸ ಧಾರಾವಾಹಿಯೂ ಸೇರ್ಪಡೆಯಾಗಿದೆ.
ಜನನಿ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಈ ಧಾರಾವಾಹಿಯಲ್ಲಿ ಬರುವ ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲೆನ್ನದೆ ಬಹಳ ಕಷ್ಟ ಪಟ್ಟು ತನ್ನ ಮಗಳು ದೊಡ್ಡ ಸಾಧಕಿಯ ಗಬೇಕೆಂದು ಉತ್ತಮ ಶಿಕ್ಷಣ ಕೊಡಿಸುತ್ತಾರೆ. ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರ ಗಳಿಂದ ಅವಳ ಮದುವೆಯಾಗುತ್ತದೆ.
ಅವಳು ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗು ತ್ತಾಳೆ. ಈ ಕಥೆಯಲ್ಲಿ ಒಂದು ಹೆಣ್ಣು ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ, ಗಂಡನ ಮನೆಯಲ್ಲಿ ಹಾಗೂ ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ, ಹೋರಾಡಿ ಸಾಧನೆ ಮಾಡುವುದರ ಜತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ
ಹೇಗೆ ಸೂರ್ತಿ ಆಗುತ್ತಾಳೆ ಎಂಬುದರ ಮೂಲಕ ಒಂದು ಹೆಣ್ಣಿನ ಸಾಧನೆ ಅದರ ಹಿಂದೆ ಇರುವ ವೇದನೆ ಎಲ್ಲವನ್ನು ಬಹಳ ವಿವರವಾಗಿ ಕುತೂಹಲವಾಗಿ ವಿವರಿಸಲಾಗಿದೆ.
ನನಿ, ಚಿ.ಗುರುದತ್ ನಿರ್ಮಾಣ ಸಂಸ್ಥೆ ಶಾರದಾಸ್ ಸಿನಿಮಾಸ್ ಮೂಲಕ ಮೂಡಿಬರುತ್ತಿದ್ದು, ಹೊನ್ನೇಶ್ ರಾಮಚಂದ್ರಯ್ಯ ನಿರ್ದೇಶನ ಮಾಡುತ್ತಿದ್ದಾರೆ. ವರ್ಷಿಕಾ, ಪ್ರದೀಪ್ ತಿಪಟೂರ್, ದಿವ್ಯಾ ಗೋಪಾಲ್, ಕಿರಣ್ ಪುಷ್ಪಾ ಸ್ವಾಮಿ, ಲಕ್ಷ್ಮಣ್,
ಅರುಣ್, ಶ್ವೇತಾ, ರೂಪಾ, ಶಿಲ್ಪಾ ಅಯ್ಯರ್ ನಟಿಸುತ್ತಿದ್ದಾರೆ.