Monday, 28th October 2024

ಆತ್ಮನಿರ್ಭರ್ ಭಾರತ ಯೋಜನೆ : ವಲಸಿಗರಿಗೆ 2 ತಿಂಗಳ ಉಚಿತ ಪಡಿತರ

ಬಳ್ಳಾರಿ:

ಕರೋನಾ ವೈರಸ್ ಹರಡುತ್ತಿರುವ ನಿಮಿತ್ತ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಿರುವ ಹಿನ್ನಲೆಯಲ್ಲಿ ವಲಸಿಗರಿಗೆ ಆಹಾರ ಭದ್ರತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆತ್ಮ ನಿರ್ಭರ್ ಭಾರತ್ ಯೋಜನೆಯಡಿಯಲ್ಲಿ ಪ್ರತಿ ವಲಸಿಗರಿಗೆ ಅಕ್ಕಿ ಮತ್ತು ಕಡಲೆ ಕಾಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಸಿಗರು ದೇಶದ ಯಾವುದೇ ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರದ ಹಾಗೂ ಪಡಿತರ ಪಡೆಯದ ವಲಸಿಗರಿಗೆ ಈ ಯೋಜನೆ ಅನ್ವಯಿಸುತ್ತದೆ. 2020ರ ಮೇ ಹಾಗೂ ಜೂನ್ ಮಾಹೆಯಲ್ಲಿ ಪ್ರತಿ ವಲಸಿಗರಿಗೆ ತಲಾ 5ಕೆ.ಜಿ ಅಕ್ಕಿ ಹಾಗೂ ಜೂನ್ ತಿಂಗಳಲ್ಲಿ ಪ್ರತಿ ಕುಟುಂಬಕ್ಕೆ ಕಡಲೆ ಕಾಳು ಸಹ ಉಚಿತವಾಗಿ ವಿತರಿಸಲಾಗುವುದು. ಮೇ ಮಾಹೆಯಲ್ಲಿ ಪಡಿತರ ಪಡೆಯಲಾಗದ ವಲಸಿಗರಿಗೆ ಜೂನ್ ತಿಂಗಳಲ್ಲಿ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಸೇರಿಸಿ ಪ್ರತಿಯೊಬ್ಬರಿಗೆ 10ಕೆ.ಜಿ ಅಕ್ಕಿ ಮತ್ತು ಕಡಲೆಕಾಳು ಸೇರಿಸಿ ನೀಡಲಾಗುವುದು.

ಮೇ ತಿಂಗಳ ಪಡಿತರವನ್ನು ಮೇ 26 ರಿಂದ ಮೇ 31 ರವರೆಗೆ ಹಾಗೂ ಜೂನ್ ತಿಂಗಳ ಪಡಿತರವನ್ನು ಜೂ.01 ರಿಂದ ಜೂ.10 ರವರೆಗೆ ವಿತರಿಸಲಾಗುವುದು. ವಲಸಿಗರಿಗೆ ತಾಲೂಕಿನ ನಗರ, ಪಟ್ಟಣ, ಹೋಬಳಿ, ಪಂಚಾಯತ್ ಮಟ್ಟದ ಆಯ್ದ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುತ್ತದೆ. ವಲಸಿಗರು ನ್ಯಾಯಬೆಲೆ ಅಂಗಡಿಗೆ ಹೋಗಿ ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು. ಆಧಾರ್ ಪರಿಶೀಲನೆಯಲ್ಲಿ ವಲಸಿಗರು ಪಡಿತರ ಚೀಟಿ ಹೊಂದಿಲ್ಲದಿರುವ ಬಗ್ಗೆ ಖಚಿತವಾದ ನಂತರ ಅವರು ಉಚಿತ ಪಡಿತರಕ್ಕೆ ಅರ್ಹರೆಂಬ ಸಂದೇಶ ಅವರ ಮೊಬೈಲ್‌ಗೆ ಬರಲಿದೆ. ಈ ಓಟಿಪಿ ಸಂಖ್ಯೆಯನ್ನು ನ್ಯಾಯಬೆಲೆ ಅಂಗಡಿಗೆ ನೀಡಿದ ನಂತರ ಅವರು ಓ.ಟಿ.ಪಿ ದಾಖಲಿಸಿ ಪಡಿತರವನ್ನು ನೀಡಲಾಗುತ್ತದೆ.

ವಲಸಿಗರಿಗೆ ಪಡಿತರ ವಿತರಿಸಲು ಪ್ರತಿ ತಾಲೂಕಿನ ಆಯ್ದ ಪ್ರದೇಶಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದ್ದು ವಲಸಿಗರು ತಮಗೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಬೇಕು. ಯಾವುದೇ ಪ್ರದೇಶದಲ್ಲಿ ವಲಸಿಗರ ಸಂಖ್ಯೆ ಹೆಚ್ಚಿಗೆ ಇದ್ದು ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪಡೆಯಲು ತೊಂದರೆಗಳಿದ್ದರೆ ವಲಸಿಗರಿರುವ ಸ್ಥಳಗಳಿಗೆ “ಸಂಚಾರಿ ನ್ಯಾಯಬೆಲೆ ಅಂಗಡಿ”ಗಳ ಮೂಲಕ ಪಡಿತರ ವಿತರಿಸಲಾಗುತ್ತದೆ. ವಲಸಿಗರಿಗೆ ವಿತರಿಸುವ ಪಡಿತರ ಉಚಿತವಾಗಿದ್ದು ಯಾವುದೇ ಹಣ ನೀಡಬೇಕಾಗಿಲ್ಲ. ಈ ಯೋಜನೆಯಡಿ ಉಚಿತ ಪಡಿತರವನ್ನು ರಾಜ್ಯದ ಅಥವಾ ಹೊರ ರಾಜ್ಯದ ಪಡಿತರ ಚೀಟಿ ಇಲ್ಲದ ವಲಸೆ ಜನರು ಮಾತ್ರ ಪಡೆಯಬಹುದು.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ, ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಮತ್ತು ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಜೀವನ ನಿರ್ವಹಣೆಗೆ ಹೋಗುವವರನ್ನು ವಲಸಿಗರೆಂದು ಪರಿಗಣಿಸಲಾಗುತ್ತದೆ. ಲಾಕ್‌ಡೌನ್ ಹಿನ್ನಲೆಯಲ್ಲಿ ವಲಸಿಗರಿಗೆ ಒದಗಿಸುವ ಸೌಲಭ್ಯಗಳನ್ನು ತಪ್ಪು ಮಾಹಿತಿ ನೀಡಿ ಪಡೆದುಕೊಂಡಲ್ಲಿ ಅಂತಹವರ ವಿರುದ್ದ ದಂಡ ಅಥವಾ ದಂಡದ ಜೊತೆಗೆÀ ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ ತಾಲ್ಲೂಕಿನ ತಹಶೀಲ್ದಾರ್ ಕಛೇರಿ (ಆಹಾರ ವಿಭಾಗ) ಹಾಗೂ ಕಾರ್ಮಿಕ ಇಲಾಖೆ ಸಂಪರ್ಕಿಸಬಹುದು. ಈ ಯೋಜನೆ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಉಚಿತ ಸಹಾಯವಾಣಿ ಸಂ. 1967 ಅಥವಾ ಬಳ್ಳಾರಿ ಆಹಾರ ಇಲಾಖೆ ದೂ.ಸಂ.08392-272557 ಅಥವಾ ಜಿಲ್ಲಾ ಕೋವಿಡ್-19 ನಿಯಂತ್ರಣ ಕೊಠಡಿ ದೂ.ಸಂ. 08392-277102 / 08392-277103 ಸಂಪರ್ಕಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜನನ