Monday, 25th November 2024

ಕೇಂದ್ರ ಕಾರಾಗೃಹಕ್ಕೂ ಕರೋನಾ ನಂಜು

ವಿಶ್ವವಾಣಿ ಸುದ್ದಿಮನೆ ಬೆಂಗಳೂರು

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಹೊಸ ಕೈದಿಗಳು ಬರುತ್ತಿರುವುದರಿಂದ ಅವರಿಗೆ ಸೋಂಕು ತಗುಲಿರಬಹುದೇ ಎಂಬ ಅನುಮಾನ ಕಾಡತೊಡಗಿದೆ.

ಕಳೆದ ಒಂದು ತಿಂಗಳಿಂದ ಜೈಲಿಗೆ ಬರುತ್ತಿರುವ ಹೊಸ ಕೈದಿಗಳಿಗೆ ಕರೋನಾ ತಪಾಸಣೆ ಮಾಡುತ್ತಿದ್ದರೂ, ಜೈಲಿನ ಅಧಿಕಾರಿಗಳಿಗೆ
ಭಯ ಮಾತ್ರ ಹೋಗಿಲ್ಲ. ಬೇರೆಡೆ ನೆಗೆಟಿವ್ ಬಂದ ಹದಿನಾಲ್ಕು ದಿನಗಳಲ್ಲಿ ಕೆಲವರಿಗೆ ಪಾಸಿಟಿವ್ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕೈದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.

ಕಳೆದ ಒಂದು ತಿಂಗಳಿಂದ 122 ಹೊಸ ಕೈದಿಗಳ  ಬಂದಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತೆ ವಹಿಸಿ ಈ ಕೈದಿಗಳನ್ನು ಪರಪ್ಪನ ಅಗ್ರಹಾರ ಕಾರಾಗೃಹ ಬಿಟ್ಟು ನೂತನ ಮಹಿಳಾ ಕಾರಾಗೃಹ ಬಿಟ್ಟು ನೂತನ ಮಹಿಳಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಐನೂರು ಮಂದಿ ಸಾಮರ್ಥ್ಯವುಳ್ಳ ಮಹಿಳಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಐನೂರು ಮಂದಿ ಸಾಮರ್ಥ್ಯವುಳ್ಳ ಮಹಿಳಾ ಕಾರಾಗೃಹವಾಗಿದ್ದು ಒಂದು ಸೆಲ್‌ಗೆ ಇಬ್ಬರು ಕೈದಿಗಳಂತೆ ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಪ್ರತಿಯೊಬ್ಬರಿಗೂ ಸೆಲ್‌ನಲ್ಲಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ.

ಪ್ರತಿ ಸೆಲ್‌ನಲ್ಲೂ ಸ್ಯಾನಿಟೈಸರ್ ಉಪಯೋಗ ಕಡ್ಡಾಯ ಮಾಡಲಾಗಿದೆ. ಜತೆಗೆ ಪ್ರತಿಯೊಬ್ಬರು ಸೆಲ್‌ನಲ್ಲಿ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಪ್ರತಿ ಸೆಲ್‌ನಲ್ಲೂ ಸ್ಯಾನಿಟೈರ್ ಉಪಯೋಗ ಕಡ್ಡಾಯ ಮಾಡಲಾಗಿದೆ. ಕೈದಿಗಳ ಭದ್ರತೆಗಿರೋ ಸಿಬ್ಬಂದಿಗೆ ಸುರಕ್ಷತೆಯ ಕವಚ ನೀಡಲಾಗಿದೆ. ಕರೋನಾ ಸೋಂಕಿನ ಹಿನ್ನೆೆಲೆಯಲ್ಲಿ ಕೈದಿಗಳ ಭದ್ರತೆಗಿರೋ ಸಿಬ್ಬಂದಿಗೆ ಸುರಕ್ಷತೆಯ ಕವಚ ನೀಡಲಾಗಿದೆ. ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೈದಿಗಳ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ನೋಡಲು ಬಂದವರನ್ನು ವಾಪಸ್ ಕಳುಹಿಸಲಾಗುತ್ತಿದೆ.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳೇ ಸೇರಿ ಒಂದು ಲಕ್ಷ ಮಾಸ್‌ಕ್‌ ತಯಾರಿಸಿದ್ದು ಇದಕ್ಕೆೆ ಅತಿ ಹೆಚ್ಚು ಬೇಡಿಕೆ ಸಿಗುತ್ತಿದೆ. ರಾಜ್ಯದ ಎಲ್ಲಾ ಕಾರಾಗೃಹದಲ್ಲಿ ಪ್ರತಿ ಕೈದಿಗೂ ವಾರಕ್ಕೆ ಎರಡೆರಡು ಮಾಸ್‌ಕ್‌ ನೀಡಲಾಗುತ್ತಿದೆ. ಈ ನಡುವೆ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಹಾಗೂ ಅಗ್ನಿಶಾಮಕದಳ, ಪೊಲೀಸ್ ಇಲಾಖೆಯಿಂದ ಮಾಸ್‌ಕ್‌‌ಗಳಿಗೆ ಅತಿ ಹೆಚ್ಚು ಬೇಡಿಕೆ ಬರುತ್ತಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.