ತುಮಕೂರು: ದೇಶ ಭಕ್ತಿಗೀತೆಗಳಿಂದ ದೇಶದ ಮಹತ್ವದ ಬಗ್ಗೆ ತಿಳು ವಳಿಕೆಯನ್ನು ಹೆಚ್ಚಿಸುತ್ತದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ನಗರದ ಬಾಲಭವನದಲ್ಲಿ ಬೆಂಗಳೂರಿನ ಬಾಲಭವನ ಸೊಸೈಟಿ, ಜಿಲ್ಲಾ ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ೭೫ನೇ ಅಮೃತ ಮಹೋತ್ಸವದ ಅಂಗವಾಗಿ ೫ ರಿಂದ ೧೬ ರ‍್ಷದ ವಯೋಮಾನದ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲೆ ಮತ್ತು ದೇಶಭಕ್ತಿ ಗೀತೆ ಸ್ರ‍್ಧೆಯ ಕರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.
ಸ್ವಾತಂತ್ರ‍್ಯ ದಿನ ಅತ್ಯಂತ ರ‍್ಥಪರ‍್ಣವಾದ ದಿನವಾಗಿದ್ದು, ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿರುವ ಚಿತ್ರಕಲೆ ಮತ್ತು ದೇಶಭಕ್ತಿ ಗೀತೆಗಳ ಸ್ರ‍್ಧೆಗಳು ಪ್ರಯೋಜನಕಾರಿಯಾಗಿವೆ. ದೇಶಭಕ್ತಿ ಗೀತೆಗಳು ದೇಶದ ಮಹತ್ವವನ್ನು ತಿಳಿಸುತ್ತದೆ ಎಂದರು.
ಈ ಕರ‍್ಯಕ್ರಮದಲ್ಲಿ ಪ್ರತಿಯೊಬ್ಬ ವಿದ್ಯರ‍್ಥಿಯು ಪಾಲ್ಗೊಂಡು ತನ್ನ ಪ್ರತಿಭೆಯನ್ನು ವಿಸ್ತರಿಸಿಕೊಳ್ಳಬೇಕು. ಸ್ರ‍್ಧೆಗಳು ಕೇವಲ ಬಹುಮಾನಕ್ಕಾಗಿರದೇ ಸ್ರ‍್ಧಿಸುವ ಅನುಭವ ಮತ್ತೊಂದು ಹಂತಕ್ಕೆ ಕೊಂಡೊಯ್ದು ವಿದ್ಯರ‍್ಥಿ ಜೀವನ ಪರಿಪರ‍್ಣವಾಗುವುದಕ್ಕೆ ಸಹಕಾರಿಯಾಗುತ್ತದೆಂದರು.
ಕರ‍್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಬಾಲಭವನ ಸಮಿತಿ ಸದಸ್ಯರಾದ ಬಸವಯ್ಯ ಸ್ರ‍್ಧೆಗೆ ಶುಭಾಶಯ ಕೋರುತ್ತಾ” ಹಾಡಿನ ಮೂಲಕವೇ ಜೀವನದ ಜಾಡು ಹಿಡಿಯಬೇಕು” ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಬೇಕೆಂದು ತಿಳಿಸಿದರು.
ಪತ್ರರ‍್ತ ಉಗಮ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನರ‍್ದೇಶಕ (ಪ್ರಭಾರ) ಶಿವಕುಮಾರಯ್ಯ, ಜಿಲ್ಲಾ ಬಾಲಭವನದ ವ್ಯವಸ್ಥಾಪಕ ಪಿ.ಜೆ ಚೌಡಪ್ಪ, ಮಮತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.