Tuesday, 26th November 2024

ಸಾವರ‍್ಕರ್ ಭಾವಚಿತ್ರ ಹರಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕ ಭಾಜಪ ಆಗ್ರಹ

ಕಠಿಣ ಕ್ರಮ:ಎಸ್ಪಿ

ಸೊಗಡು ಶಿವಣ್ಣ ಕಿಡಿ

ಬಿಜೆಪಿ ಕರ‍್ಯರ‍್ತರು ಪ್ರತಿಭಟನೆ

ತುಮಕೂರು: ನಗರದ ಅಶೋಕ ರಸ್ತೆಯಲ್ಲಿನ ಎಂಪ್ರೆಸ್ ಕಾಲೇಜಿನ ಮುಂಭಾಗ ಅಳವಡಿಸಲಾಗಿದ್ದ ವೀರ ಸಾವರ‍್ಕರ್ ಭಾವಚಿತ್ರವಿರುವ ಫ್ಲೆಕ್ಸ್ ಹರಿದುಹಾಕಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಕರ‍್ಯರ‍್ತರು ಪ್ರತಿಭಟನೆ ನಡೆಸಿದರು.

ಎಂಪ್ರೆಸ್ ಕಾಲೇಜ್ ಮುಂಭಾಗ ಸ್ವಾತಂತ್ರ‍್ಯ ದಿನಾಚರಣೆಯ ಶುಭಾಶಯಗಳನ್ನು ಕೋರುವ ಫ್ಲೆಕ್ಸ್ ನಲ್ಲಿ ಅಳವಡಿಸಲಾಗಿದ್ದ ವೀರ ಸಾರ‍್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಹರಿದು ಹಾಕಿರುವುದು ಇದು ಜನರನ್ನು ಪ್ರಚೋದನೆಗೊಳಿಸುವ ತಂತ್ರ ವಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಆಗ್ರಹಿಸಿದ್ದಾರೆ.

ಕಠಿಣ ಕ್ರಮ:ಎಸ್ಪಿ
ಸಾರ‍್ಕರ್ ಭಾವಚಿತ್ರ ಹರಿದಿರುವ ಕಿಡಿಗೇಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಸ್ಪಿ ರಾಹುಲ್ ಕುಮಾರ್ ತಿಳಿಸಿದರು.ಈಗಾಗಲೇ ಇದರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಲಾಗಿದೆ. ಈ ರೀತಿಯಾದ ಪ್ರಚೋದನಕಾರಿ ಕೃತ್ಯಗಳಿಂದ ಸರ‍್ವಜನಿಕರು ಪ್ರಚೋದನೆಗೊಳಗಾಗದೆ ಶಾಂತಿಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

ಕಿಡಿಗೇಡಿಗಳಿಗೆ ಗುಂಡಿಕ್ಕಿ:ಸೊಗಡು ಕಿಡಿ
ವೀರ ಸಾರ‍್ಕರ್ ಭಾವಚಿತ್ರ ಹರಿದು ಹಾಕಿರುವ ಕಿಡಿಗೇಡಿಗಳಿಗೆ ಗುಂಡಿಕ್ಕಿ ಎಂದು ಮಾಝಿ ಸಚಿವ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿ ಕದಡದಂತೆ ಎಚ್ಚರಿಕೆವಹಿಸಲು ತಿಳಿಸಿದ್ದೇನೆ ಎಂದರು.

ಸ್ವಾತಂತ್ರ‍್ಯ ಸಂಭ್ರಮಕ್ಕೆ ನಗರದಾದ್ಯಂತ ಹಾಕಲಾಗಿದ್ದ ಫ್ಲೆಕ್ಸ್ ನಲ್ಲಿ ವೀರ ಸಾರ‍್ಕರ್ ಭಾವಚಿತ್ರ ಹಾಕಲಾಗಿತ್ತು. ರಾತ್ರೋರಾತ್ರಿ ಹೇಡಿಗಳಂತೆ ಹರಿದುಹಾಕಿರುವ ಕಿಡಿಗೇಡಿಗಳಿಗೆ ಗುಂಡಿಕ್ಕಿ ಎಂದು ಕಿಡಿಕಾರಿದ್ದಾರೆ.